ಗುಣನಡತೆಯ ವಿಭಾಗ
ಉತ್ತರ: ಇಹ್ಸಾನ್ ಎಂದರೆ ಪ್ರತಿಯೊಂದು ಕಾರ್ಯದಲ್ಲಿ ಅಲ್ಲಾಹನಿಗಾಗಿ ನಿಷ್ಕಪಟತೆಯನ್ನು ಹೊಂದಿರುವುದು ಮತ್ತು ಸಹಜೀವಿಗಳೊಂದಿಗೆ ಉತ್ತಮ ರೀತಿಯಿಂದ ವರ್ತಿಸುವುದು.
ಪ್ರವಾದಿ ﷺ ರವರು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಇಹ್ಸಾನ್ ಅನ್ನು (ಉತ್ತಮ ರೀತಿಯಿಂದ ವರ್ತಿಸುವುದನ್ನು)ಕಡ್ಡಾಯಗೊಳಿಸಿದ್ದಾನೆ.” [ಮುಸ್ಲಿಮ್].
ಇಹ್ಸಾನ್‌ನ (ಉತ್ತಮ ವರ್ತನೆಯ) ರೂಪಗಳು:
· ಅಲ್ಲಾಹನ ಆರಾಧನೆಯಲ್ಲಿ ಇಹ್ಸಾನ್ ಮಾಡುವುದು. ಅಂದರೆ ಅಲ್ಲಾಹನನ್ನು ನಿಷ್ಕಳಂಕವಾಗಿ ಆರಾಧಿಸುವುದು.
· ಮಾತಾಪಿತರಿಗೆ ಇಹ್ಸಾನ್ ಮಾಡುವುದು. ಅಂದರೆ ಮಾತು ಮತ್ತು ಕ್ರಿಯೆಯಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸುವುದು.
· ರಕ್ತ ಸಂಬಂಧಿಕರಿಗೆ ಮತ್ತು ಆಪ್ತ ಸಂಬಂಧಿಕರಿಗೆ ಇಹ್ಸಾನ್ ಮಾಡುವುದು.
· ನೆರೆಹೊರೆಯವರಿಗೆ ಇಹ್ಸಾನ್ ಮಾಡುವುದು.
· ಅನಾಥರಿಗೆ ಮತ್ತು ಬಡವರಿಗೆ ಇಹ್ಸಾನ್ ಮಾಡುವುದು.
· ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದವರಿಗೆ ಇಹ್ಸಾನ್ ಮಾಡುವುದು.
· ಮಾತನಾಡುವಾಗ ಇಹ್ಸಾನ್ ಮಾಡುವುದು
· ತರ್ಕಿಸುವಾಗ ಇಹ್ಸಾನ್ ಮಾಡುವುದು.
· ಪ್ರಾಣಿಗಳಿಗೆ ಇಹ್ಸಾನ್ ಮಾಡುವುದು.
ಉತ್ತರ: ಇಸಾಅತ್ (ಕೆಟ್ಟ ವರ್ತನೆ) ಇಹ್ಸಾನ್‌ಗೆ ವಿರುದ್ಧವಾಗಿದೆ.
ಇಸಾಅತ್‌ಗೆ ಉದಾಹರಣೆಗಳು: * ಅಲ್ಲಾಹನ ಆರಾಧನೆಯಲ್ಲಿ ನಿಷ್ಕಳಂಕತೆಯಿಲ್ಲದಿರುವುದು.
* ಮಾತಾಪಿತರೊಡನೆ ಕೆಟ್ಟದಾಗಿ ವರ್ತಿಸುವುದು.
* ಕುಟುಂಬ ಸಂಬಂಧವನ್ನು ಕಡಿಯುವುದು.
* ನೆರೆಯವರೊಂದಿಗೆ ಕೆಟ್ಟದಾಗಿ ವರ್ತಿಸುವುದು.
* ಬಡವರು ಮತ್ತು ನಿರ್ಗತಿಕರೊಂದಿಗೆ ತನ್ನ ಕೆಟ್ಟ ಮಾತು ಮತ್ತು ವರ್ತನೆಗಳಿಂದ ಕೆಟ್ಟದಾಗಿ ವರ್ತಿಸುವುದು.
ಉತ್ತರ:
1. ಸರ್ವಶಕ್ತನಾದ ಅಲ್ಲಾಹನ ಹಕ್ಕುಗಳನ್ನು ಸಂರಕ್ಷಿಸುವುದು ನಮ್ಮ ಮೇಲೆ ಅಮಾನತ್ ಆಗಿದೆ.
ಅದರ ರೂಪಗಳು: ನಮಾಝ್, ಝಕಾತ್, ಉಪವಾಸ, ಹಜ್ಜ್ ಮುಂತಾದ ಅಲ್ಲಾಹು ನಮ್ಮ ಮೇಲೆ ಕಡ್ಡಾಯಗೊಳಿಸಿದ ಆರಾಧನಾ ಕರ್ಮಗಳನ್ನು ನಿರ್ವಹಿಸುವುದು.
2. ಮಾನವರ ಹಕ್ಕುಗಳನ್ನು ಸಂರಕ್ಷಿಸುವುದೂ ಸಹ ನಮ್ಮ ಮೇಲೆ ಅಮಾನತ್ ಆಗಿದೆ.
· ಜನರ ಘನತೆ-ಗೌರವಗಳನ್ನು ಸಂರಕ್ಷಿಸುವುದು.
· ಜನರ ಆಸ್ತಿಪಾಸ್ತಿಗಳನ್ನು ಸಂರಕ್ಷಿಸುವುದು.
· ಜನರ ಜೀವವನ್ನು ಸಂರಕ್ಷಿಸುವುದು.
· ಜನರ ರಹಸ್ಯಗಳನ್ನು ಸಂರಕ್ಷಿಸುವುದು ಮತ್ತು ಜನರು ನಿಮ್ಮ ಮೇಲೆ ನಂಬಿಕೆಯಿಡುವ ಎಲ್ಲಾ ವಿಷಯಗಳಲ್ಲೂ ನಂಬಿಗಸ್ತನಾಗಿರುವುದು.
ಯಶಸ್ವಿಯಾದವರ ಗುಣಗಳನ್ನು ವಿವರಿಸುತ್ತಾ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅಂದರೆ ಆ ಸತ್ಯ ವಿಶ್ವಾಸಿಗಳು ತಮ್ಮ ನಂಬಿಕಾರ್ಹತೆಯನ್ನು ಮತ್ತು ಕರಾರುಗಳನ್ನು ಕಾಪಾಡಿಸಕೊಳ್ಳುವವರಾಗಿದ್ದಾರೆ.” [ಸೂರ ಅಲ್-ಮೂಮಿನೂನ್:8]
ಉತ್ತರ: ಸತ್ಯವಂತಿಕೆ ಎಂದರೆ ನಿಜಸ್ಥಿತಿಗೆ ಅನುಗುಣವಾಗಿ ಅಥವಾ ಇದ್ದದ್ದು ಇದ್ದಂತೆ ಹೇಳುವುದು.
ಅದರ ರೂಪಗಳು:
ಜನರೊಂದಿಗೆ ಮಾತನಾಡುವಾಗ ಸತ್ಯ ಹೇಳುವುದು.
ಮಾತು ಕೊಟ್ಟರೆ ಅದನ್ನು ಪಾಲಿಸುವುದು.
ಪ್ರತಿಯೊಂದು ಮಾತು ಮತ್ತು ಕಾರ್ಯದಲ್ಲಿ ಸತ್ಯವಂತನಾಗಿರುವುದು.
ಪ್ರವಾದಿ ﷺ ರವರು ಹೇಳಿದರು: “ನಿಶ್ಚಯವಾಗಿಯೂ, ಸತ್ಯವು ಒಳಿತಿನೆಡೆಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ. ಒಬ್ಬ ವ್ಯಕ್ತಿಯು ನಿರಂತರ ಸತ್ಯವನ್ನೇ ಹೇಳುತ್ತಾ ಇದ್ದರೆ ಅವನು ಅಲ್ಲಾಹನ ಬಳಿ ಸತ್ಯವಂತನೆಂದು ದಾಖಲಿಸಲ್ಪಡುತ್ತಾನೆ.” (ಮುತ್ತಫಕುನ್ ಅಲೈಹಿ).
ಉತ್ತರ: ಸುಳ್ಳು. ಅದು ನಿಜಸ್ಥಿತಿಗೆ ವಿರುದ್ಧವಾದುದು. ಉದಾಹರಣೆಗೆ: ಜನರೊಡನೆ ಸುಳ್ಳು ಹೇಳುವುದು, ಮಾತು ಕೊಟ್ಟರೆ ಉಲ್ಲಂಘಿಸುವುದು, ಸುಳ್ಳು ಸಾಕ್ಷಿ ಹೇಳುವುದು.
ಪ್ರವಾದಿ ﷺ ರವರು ಹೇಳಿದರು: “ನಿಶ್ಚಯವಾಗಿಯೂ ಸುಳ್ಳು ಕೆಡುಕಿನೆಡೆಗೆ ಒಯ್ಯುತ್ತದೆ ಮತ್ತು ಕೆಡುಕು ನರಕಕ್ಕೆ ಒಯ್ಯುತ್ತದೆ. ಒಬ್ಬ ವ್ಯಕ್ತಿ ಸುಳ್ಳು ಹೇಳುತ್ತಲೇ ಇದ್ದರೆ ಅಲ್ಲಾಹನ ಬಳಿ ಅವನು ಸುಳ್ಳುಗಾರನೆಂದು ದಾಖಲಿಸಲ್ಪಡುತ್ತಾನೆ.” (ಮುತ್ತಫಕುನ್ ಅಲೈಹಿ). ಪ್ರವಾದಿ ﷺ ರವರು ಹೇಳಿದರು: “ಕಪಟವಿಶ್ವಾಸಿಗೆ ಮೂರು ಲಕ್ಷಣಗಳಿವೆ. ಅವುಗಳಲ್ಲಿ ಎರಡು ಹೀಗಿವೆ: ಮಾತನಾಡಿದರೆ ಸುಳ್ಳು ಹೇಳುವುದು ಮತ್ತು ವಾಗ್ದಾನ ಮಾಡಿದರೆ ಉಲ್ಲಂಘಿಸುವುದು.” (ಮುತ್ತಫಕುನ್ ಅಲೈಹಿ).
ಉತ್ತರ: - ಅಲ್ಲಾಹನಿಗೆ ವಿಧೇಯತೆ ತೋರುವುದರಲ್ಲಿ ತಾಳ್ಮೆ ವಹಿಸುವುದು.
- ಅವಿಧೇಯತೆಯನ್ನು ತೊರೆಯುವುದರಲ್ಲಿ ತಾಳ್ಮೆ ವಹಿಸುವುದು.
- ವೇದನಾಯುಕ್ತ ವಿಧಿ-ನಿರ್ಣಯಗಳಲ್ಲಿ ತಾಳ್ಮೆ ವಹಿಸುವುದು ಮತ್ತು ಎಲ್ಲಾ ಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ತುತಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಮತ್ತು ಅಲ್ಲಾಹು ತಾಳ್ಮೆ ವಹಿಸುವವರನ್ನು ಪ್ರೀತಿಸುತ್ತಾನೆ.” [ಸೂರ ಆಲು ಇಮ್ರಾನ್:146]. ಪ್ರವಾದಿ ﷺ ರವರು ಹೇಳಿದರು: “ವಿಶ್ವಾಸಿಯ ಸಂಗತಿ ಅದ್ಭುತವಾಗಿದೆ! ಅವನ ಸಂಗತಿಗಳೆಲ್ಲವೂ ಅವನಿಗೆ ಒಳಿತೇ ಆಗಿವೆ. ಅದು ವಿಶ್ವಾಸಿಗಳಿಗಲ್ಲದೆ ಇನ್ನಾರಿಗೂ ಇಲ್ಲ. ಅವನಿಗೆ ಸಂತೋಷವಾದರೆ ಅವನು ಕೃತಜ್ಞತೆ ಸಲ್ಲಿಸುತ್ತಾನೆ. ಅದು ಅವನಿಗೆ ಒಳಿತಾಗಿದೆ. ಇನ್ನು ಅವನಿಗೆ ಕಷ್ಟ ಬಂದರೆ ಅವನು ತಾಳ್ಮೆ ವಹಿಸುತ್ತಾನೆ. ಅದೂ ಕೂಡ ಅವನಿಗೆ ಒಳಿತಾಗಿದೆ.” [ಮುಸ್ಲಿಮ್].
ಉತ್ತರ: - ಅಲ್ಲಾಹನಿಗೆ ವಿಧೇಯತೆ ತೋರುವುದರಲ್ಲಿ ತಾಳ್ಮೆ ವಹಿಸದಿರುವುದು, ಅವಿಧೇಯತೆಯನ್ನು ತೊರೆಯುವುದರಲ್ಲಿ ತಾಳ್ಮೆ ವಹಿಸದಿರುವುದು ಮತ್ತು ಮಾತು ಮತ್ತು ಕ್ರಿಯೆಯ ಮೂಲಕ ವಿಧಿ-ನಿರ್ಣಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು.
ಅದರ ರೂಪಗಳು:
§ ಸಾವನ್ನು ಬಯಸುವುದು.
§ ಮುಖಕ್ಕೆ ಬಡಿಯುವುದು.
§ ಬಟ್ಟೆಗಳನ್ನು ಹರಿಯುವುದು.
§ ಕೂದಲನ್ನು ಕೆದರುವುದು.
§ ಸ್ವಯಂ ವಿನಾಶಕ್ಕಾಗಿ ಪ್ರಾರ್ಥಿಸುವುದು.
ಪ್ರವಾದಿ ﷺ ರವರು ಹೇಳಿದರು: “ಪರೀಕ್ಷೆಯ ಗಾತ್ರಕ್ಕೆ ಅನುಗುಣವಾಗಿ ಪ್ರತಿಫಲ ಇರುತ್ತದೆ. ಅಲ್ಲಾಹು ಒಂದು ಜನತೆಯನ್ನು ಪ್ರೀತಿಸಿದರೆ, ಅವರನ್ನು ಪರೀಕ್ಷಿಸುತ್ತಾನೆ. ಯಾರು ಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಸಂತೃಪ್ತಿಯಿದೆ. ಯಾರು ಅಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಅಸಂತೃಪ್ತಿಯಿದೆ. [ತಿರ್ಮಿದಿ ಮತ್ತು ಇಬ್ನ್ ಮಾಜ].
ಉತ್ತರ: ಸಹಕಾರ ಎಂದರೆ ಸತ್ಯ ಮತ್ತು ಒಳಿತಿನಲ್ಲಿ ಜನರೊಡನೆ ಸಹಕರಿಸುವುದು.
ಸಹಕಾರದ ರೂಪಗಳು:
o ಹಕ್ಕುಗಳನ್ನು ನೀಡುವುದರಲ್ಲಿ ಸಹಕರಿಸುವುದು.
o ಅನ್ಯಾಯವನ್ನು ತಡೆಗಟ್ಟುವುದರಲ್ಲಿ ಸಹಕರಿಸುವುದು.
o ಜನರ ಮತ್ತು ಬಡವರ ಅಗತ್ಯಗಳನ್ನು ಪೂರೈಸುವುದರಲ್ಲಿ ಸಹಕರಿಸುವುದು.
o ಎಲ್ಲಾ ಒಳಿತುಗಳಲ್ಲೂ ಸಹಕರಿಸುವುದು.
o ಪಾಪ, ತೊಂದರೆ ಮತ್ತು ದ್ವೇಷದ ಕಾರ್ಯದಲ್ಲಿ ಸಹಕರಿಸದಿರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಪುಣ್ಯ ಮತ್ತು ಧರ್ಮನಿಷ್ಠೆಯಲ್ಲಿ ಪರಸ್ಪರ ಸಹಕರಿಸಿರಿ. ಪಾಪ ಮತ್ತು ಅತಿಕ್ರಮದಲ್ಲಿ ಪರಸ್ಪರ ಸಹಕರಿಸದಿರಿ. ನೀವು ಅಲ್ಲಾಹುವನ್ನು ಭಯ ಪಡಿರಿ. ಖಂಡಿತವಾಗಿಯೂ ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು.” [ಸೂರ ಅಲ್-ಮಾಇದ:2] ಪ್ರವಾದಿ ﷺ ರವರು ಹೇಳಿದರು: “ಒಬ್ಬ ಸತ್ಯವಿಶ್ವಾಸಿ ಇನ್ನೊಬ್ಬ ಸತ್ಯವಿಶ್ವಾಸಿಗೆ ಪರಸ್ಪರ ಬಿಗಿಯಾಗಿ ಹಿಡಿದುಕೊಂಡ ಒಂದು ಕಟ್ಟಡದಂತೆ.” (ಮುತ್ತಫಕುನ್ ಅಲೈಹಿ). ಪ್ರವಾದಿ ﷺ ರವರು ಹೇಳಿದರು: “ಒಬ್ಬ ಮುಸ್ಲಿಮ್ ಇನ್ನೊಬ್ಬ ಮುಸ್ಲಿಮನ ಸಹೋದರ. ಅವನು ಅವನಿಗೆ ಅನ್ಯಾಯ ಮಾಡಲಾರ. ಅವನನ್ನು (ಅನ್ಯಾಯ ಮಾಡುವವನ ಕೈಗೆ) ಒಪ್ಪಿಸಲಾರ. ಯಾರು ತನ್ನ ಸಹೋದರನ ಅಗತ್ಯವನ್ನು ಪೂರೈಸುತ್ತಾನೋ ಅವನ ಅಗತ್ಯವನ್ನು ಅಲ್ಲಾಹು ಪೂರೈಸುವನು. ಯಾರು ಮುಸ್ಲಿಮನನ್ನು ಒಂದು ಕಷ್ಟದಿಂದ ಪಾರು ಮಾಡುತ್ತಾನೋ ಅದರ ಕಾರಣದಿಂದಾಗಿ ಅಲ್ಲಾಹು ಅವನನ್ನು ಪುನರುತ್ಥಾನ ದಿನದ ಕಷ್ಟಗಳಲ್ಲಿ ಸೇರಿದ ಒಂದು ಕಷ್ಟದಿಂದ ಪಾರು ಮಾಡುವನು. ಯಾರು ಒಬ್ಬ ಮುಸ್ಲಿಮನ ನ್ಯೂನತೆಯನ್ನು ಮರೆಮಾಚುತ್ತಾನೋ ಅವನ ನ್ಯೂನತೆಯನ್ನು ಪುನರುತ್ಥಾನ ದಿನದಂದು ಅಲ್ಲಾಹು ಮರೆಮಾಚುವನು.” (ಮುತ್ತಫಕುನ್ ಅಲೈಹಿ).
ಉತ್ತರ: 1. ಅಲ್ಲಾಹನ ಬಗ್ಗೆ ಲಜ್ಜೆ ಪಡುವುದು. ಅಂದರೆ ಅಲ್ಲಾಹನಿಗೆ ಅವಿಧೇಯತೆ ತೋರಲು ಸಂಕೋಚಪಡುವುದು.
2. ಜನರ ಬಗ್ಗೆ ಲಜ್ಜೆ ಪಡುವುದು. ಜನರೊಡನೆ ಅಶ್ಲೀಲವಾಗಿ ಮಾತನಾಡದಿರುವುದು ಮತ್ತು ಅವರ ಮುಂದೆ ಗುಹ್ಯಭಾಗಗಳನ್ನು ಪ್ರದರ್ಶಿಸದಿರುವುದು ಇದರಲ್ಲಿ ಒಳಪಡುತ್ತದೆ.
ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ಸತ್ಯವಿಶ್ವಾಸವು ಎಪ್ಪತ್ತಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿದೆ.” ಅಥವಾ “ಅರುವತ್ತಕ್ಕಿಂತಲೂ ಹೆಚ್ಚು.” - “ಅವುಗಳಲ್ಲಿ ಅತ್ಯುನ್ನತ ಶಾಖೆಯು ಲಾ ಇಲಾಹ ಇಲ್ಲಲ್ಲಾಹ್ ಎಂಬ ವಚನ. ಅವುಗಳಲ್ಲಿ ಅತ್ಯಂತ ಕೆಳಗಿನ ಶಾಖೆಯು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು. ಲಜ್ಜೆಯು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ.” [ಮುಸ್ಲಿಮ್].
ಉತ್ತರ: - ಹಿರಿಯ ವಯಸ್ಸಿನವರಿಗೆ ದಯೆ ತೋರುವುದು ಮತ್ತು ಗೌರವಿಸುವುದು.
- ಕಿರಿಯ ವಯಸ್ಸಿನವರಿಗೆ ಮತ್ತು ಮಕ್ಕಳಿಗೆ ದಯೆ ತೋರುವುದು.
- ಬಡವರಿಗೆ, ನಿರ್ಗತಿಕರಿಗೆ ಮತ್ತು ಅಗತ್ಯವುಳ್ಳವರಿಗೆ ದಯೆ ತೋರುವುದು.
- ಪ್ರಾಣಿಗಳಿಗೆ ದಯೆ ತೋರುವುದು. ಅಂದರೆ ಅವುಗಳಿಗೆ ತಿನ್ನಲು ಕೊಡುವುದು ಮತ್ತು ಅವುಗಳಿಗೆ ಕಿರುಕುಳ ಕೊಡದಿರುವುದು.
ಅವುಗಳಲ್ಲೊಂದು ಪ್ರವಾದಿ ﷺ ರವರು ಹೇಳಿದ ಈ ವಚನ: “ಪರಸ್ಪರ ದಯೆ ತೋರುವುದರಲ್ಲಿ, ಪರಸ್ಪರ ಪ್ರೀತಿಸುವುದರಲ್ಲಿ ಮತ್ತು ಪರಸ್ಪರ ಸಹಾನುಭೂತಿ ತೋರುವುದರಲ್ಲಿ ಸತ್ಯವಿಶ್ವಾಸಿಗಳ ಉದಾಹರಣೆಯು ಒಂದು ದೇಹದಂತೆ. ಅದರ ಒಂದು ಅಂಗಕ್ಕೆ ನೋವಾದರೆ ಸಂಪೂರ್ಣ ದೇಹವು ನಿದ್ದೆಗೆಡುವಿಕೆ ಮತ್ತು ಜ್ವರದಿಂದ ನರಳುತ್ತದೆ.” (ಮುತ್ತಫಕುನ್ ಅಲೈಹಿ). ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ದಯೆ ತೋರುವವರಿಗೆ ಪರಮ ದಯಾಮಯನು (ಅಲ್ಲಾಹು) ದಯೆ ತೋರುತ್ತಾನೆ. ಭೂಮಿಯಲ್ಲಿರುವವರಿಗೆ ದಯೆ ತೋರಿರಿ. ಆಕಾಶದಲ್ಲಿರುವವನು ನಿಮಗೆ ದಯೆ ತೋರುತ್ತಾನೆ.” [ಅಬೂದಾವೂದ್ ಮತ್ತು ತಿರ್ಮಿದಿ].
ಉತ್ತರ: ಅಲ್ಲಾಹನನ್ನು ಪ್ರೀತಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿ ಗಾಢವಾದ ಪ್ರೀತಿಯನ್ನು ಹೊಂದಿರುವರು.” [ಸೂರ ಅಲ್-ಬಕರ:165].
ಪ್ರವಾದಿಯವರನ್ನು(ಸ) ಪ್ರೀತಿಸುವುದು.
ಪ್ರವಾದಿ ﷺ ರವರು ಹೇಳಿದರು: “ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಿಮ್ಮಲ್ಲೊಬ್ಬನಿಗೆ ಅವನ ತಂದೆ-ತಾಯಿ ಮತ್ತು ಮಕ್ಕಳಿಗಿಂತಲೂ ನಾನು ಅವನಿಗೆ ಅತ್ಯಂತ ಪ್ರಿಯನಾಗುವ ತನಕ ನಿಮ್ಮಲ್ಲಿ ಯಾರೊಬ್ಬರೂ ಸತ್ಯವಿಶ್ವಾಸಿಗಳಾಗಲಾರಿರಿ.” [ಬುಖಾರಿ].
ಸತ್ಯವಿಶ್ವಾಸಿಗಳನ್ನು ಪ್ರೀತಿಸುವುದು ಮತ್ತು ತನಗೆ ಒಳಿತನ್ನು ಪ್ರೀತಿಸುವಂತೆಯೇ ಅವರಿಗೂ ಒಳಿತನ್ನು ಪ್ರೀತಿಸುವುದು.
ಪ್ರವಾದಿ ﷺ ರವರು ಹೇಳಿದರು: “ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿ ಪ್ರೀತಿಸುವವರೆಗೂ ನಿಮ್ಮ ಪೈಕಿ ಯಾರೂ ನೈಜ ಸತ್ಯವಿಶ್ವಾಸಿಯಾಗಲಾರರು." [ಬುಖಾರಿ].
ಉತ್ತರ: ಜನರನ್ನು ಭೇಟಿಯಾಗುವಾಗ, ಸಂತೋಷ, ಮುಗುಳ್ನಗೆ, ಅನುಕಂಪ ಮತ್ತು ಹರ್ಷ ಪ್ರಕಟಣೆಯೊಂದಿಗೆ ಮುಖ ಮಂದಸ್ಮಿತವಾಗಿರುವುದು.
ಜನರನ್ನು ಕಂಡಾಗ ದ್ವೇಷದಿಂದ ಮುಖ ಸಿಂಡರಿಸಿಕೊಂಡು ಭೇಟಿಯಾಗಬಾರದು.
ಇದರ ಶ್ರೇಷ್ಠತೆಯನ್ನು ವಿವರಿಸುವ ಅನೇಕ ಹದೀಸ್‌ಗಳಿವೆ. ಅಬೂ ದರ್(ರ) ರಿಂದ ವರದಿ. ಪ್ರವಾದಿ(ಸ) ರವರು ನನಗೆ ಹೇಳಿದರು: “ಒಳಿತಿನಲ್ಲಿ ಯಾವುದನ್ನೂ ತುಚ್ಛವಾಗಿ ಕಾಣಬೇಡ. ಅದು ನಗುಮುಖದಿಂದ ನಿನ್ನ ಸಹೋದರನನ್ನು ಭೇಟಿಯಾಗುವುದಾದರೂ ಸರಿ.” [ಮುಸ್ಲಿಮ್]. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ನಿನ್ನ ಸಹೋದರನ ಮುಖ ನೋಡಿ ಮಂದಹಾಸ ಬೀರುವುದು ನಿನಗೆ ದಾನಧರ್ಮವಾಗಿದೆ.” [ತಿರ್ಮಿದಿ]
ಉತ್ತರ: ಇತರರಿಗೆ ದೊರಕಿದ ಅನುಗ್ರಹವು ನಿವಾರಣೆಯಾಗಬೇಕೆಂದು ಬಯಸುವುದು ಅಥವಾ ಇತರರಿಗೆ ಅನುಗ್ರಹ ದೊರೆಯುವುದನ್ನು ಅಸಹ್ಯಪಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಮತ್ತು ಅಸೂಯೆಪಡುವವನ ಕೆಡುಕಿನಿಂದ, ಅವನು ಅಸೂಯೆಪಡುವಾಗ.” [ಸೂರ ಅಲ್-ಫಲಕ್: 5]
ಅನಸ್(ರ) ರಿಂದ ವರದಿ, ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು: “ನೀವು ಪರಸ್ಪರ ದ್ವೇಷಿಸಬೇಡಿ, ನೀವು ಪರಸ್ಪರ ಅಸೂಯೆಪಡಬೇಡಿ, ನೀವು ಪರಸ್ಪರ ಮುಖ ತಿರುಗಿಸಿ ನಡೆಯಬೇಡಿ. ಅಲ್ಲಾಹನ ದಾಸರಾಗಿ ಸಹೋದರರಂತೆ ಬಾಳಿರಿ.” [ಬುಖಾರಿ ಮತ್ತು ಮುಸ್ಲಿಮ್]
ಉತ್ತರ: ಅಪಹಾಸ್ಯ ಎಂದರೆ ನಿನ್ನ ಮುಸ್ಲಿಂ ಸಹೋದರನನ್ನು ಗೇಲಿ ಮಾಡುವುದು ಮತ್ತು ತುಚ್ಛವಾಗಿ ಕಾಣುವುದು. ಇದು ಧರ್ಮಸಮ್ಮತವಲ್ಲ.
ಇದನ್ನು ವಿರೋಧಿಸುತ್ತಾ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಓ ಸತ್ಯವಿಶ್ವಾಸಿಗಳೇ! ಒಂದು ಜನತೆಯು ಇನ್ನೊಂದು ಜನತೆಯನ್ನು ಅಪಹಾಸ್ಯ ಮಾಡದಿರಲಿ. ಇವರು (ಅಪಹಾಸ್ಯಕ್ಕೊಳಗಾದವರು) ಅವರಿಗಿಂತಲೂ ಉತ್ತಮರಾಗಿರಬಹುದು. ಸ್ತ್ರೀಯರ ಪೈಕಿ ಒಂದು ಗುಂಪು ಇನ್ನೊಂದು ಗುಂಪಿನ ಸ್ತ್ರೀಯರನ್ನು ಅಪಹಾಸ್ಯ ಮಾಡದಿರಲಿ. ಇವರು (ಅಪಹಾಸ್ಯಕ್ಕೊಳಗಾದವರು) ಅವರಿಗಿಂತಲೂ ಉತ್ತಮರಾಗಿರಬಹುದು. ನೀವು ಪರಸ್ಪರ ಚುಚ್ಚಿ ಮಾತನಾಡದಿರಿ. ನೀವು ಅಡ್ಡಹೆಸರುಗಳಿಂದ ಕರೆದು ಪರಸ್ಪರ ಅವಮಾನ ಮಾಡದಿರಿ. ಸತ್ಯವಿಶ್ವಾಸವನ್ನು ಸ್ವೀಕರಿಸಿದ ನಂತರ ಕೆಟ್ಟ ಹೆಸರು (ಕರೆಯುವುದು) ಎಷ್ಟು ನೀಚವಾದುದು! ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರು ಅಕ್ರಮಿಗಳಾಗಿರುವರು.” [ಸೂರ ಅಲ್-ಹುಜುರಾತ್: 11].
ಉತ್ತರ: ವಿನಯ ಎಂದರೆ ತಾನು ಇತರರಿಗಿಂತ ಮೇಲು ಎಂದು ಭಾವಿಸದಿರುವುದು, ಜನರನ್ನು ತಿರಸ್ಕಾರದಿಂದ ಕಾಣದಿರುವುದು ಮತ್ತು ಸತ್ಯವನ್ನು ತಿರಸ್ಕರಿಸದಿರುವುದು.
- ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಪರಮ ದಯಾಮಯನ ದಾಸರು ಭೂಮಿಯಲ್ಲಿ ವಿನಯದೊಂದಿಗೆ ಚಲಿಸುವವರಾಗಿರುವರು.” [ಸೂರತ್ ಅಲ್-ಫುರ್ಖಾನ್: 63] ಅಂದರೆ ವಿನಯವಂತರಾಗಿ ಚಲಿಸುವರು. - ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ಅಲ್ಲಾಹನಿಗಾಗಿ ವಿನಯ ತೋರುವವರ ಸ್ಥಾನವನ್ನು ಅಲ್ಲಾಹು ಎತ್ತರಿಸದೇ ಇರಲಾರನು.” [ಮುಸ್ಲಿಮ್]. ಪ್ರವಾದಿ ﷺ ರವರು ಹೇಳಿದರು: “ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಜಂಭ ತೋರದೆ, ಮತ್ತು ನಿಮ್ಮಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡದೆ, ನೀವೆಲ್ಲರೂ ವಿನಯವಂತರಾಗಬೇಕೆಂದು ಅಲ್ಲಾಹು ನನಗೆ ದೇವವಾಣಿ ಅವತೀರ್ಣಗೊಳಿಸಿದ್ದಾನೆ.” [ಮುಸ್ಲಿಮ್].
ಉತ್ತರ: 1. ಸತ್ಯದ ವಿರುದ್ಧ ಅಹಂಕಾರಪಡುವುದು. ಅಂದರೆ ಸತ್ಯವನ್ನು ಸ್ವೀಕರಿಸದೆ ತಿರಸ್ಕರಿಸುವುದು.
2. ಜನರ ವಿರುದ್ಧ ಅಹಂಕಾರಪಡುವುದು. ಅಂದರೆ ಅವರನ್ನು ತಿರಸ್ಕಾರ ಮತ್ತು ನಿಕೃಷ್ಟವಾಗಿ ಕಾಣುವುದು.
ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ನಿಶ್ಚಯವಾಗಿಯೂ ಹೃದಯದಲ್ಲಿ ಒಂದು ಅಣುವಿನ ತೂಕದಷ್ಟು ಅಹಂಕಾರ ಇರುವವನು ಸ್ವರ್ಗವನ್ನು ಪ್ರವೇಶಿಸಲಾರ.” ಆಗ ಒಬ್ಬ ವ್ಯಕ್ತಿ ಕೇಳಿದರು: “ಒಬ್ಬ ವ್ಯಕ್ತಿ ತನ್ನ ಬಟ್ಟೆ-ಬರೆ ಸುಂದರವಾಗಿರಲು ಮತ್ತು ತನ್ನ ಪಾದರಕ್ಷೆ ಸುಂದರವಾಗಿರಲು ಬಯಸುತ್ತಾನೆ. ಇದು ಅಹಂಕಾರವೇ?” ಅವರು ಉತ್ತರಿಸಿದರು: “ನಿಶ್ಚಯವಾಗಿಯೂ ಅಲ್ಲಾಹು ಸುಂದರನಾಗಿರುವನು. ಮತ್ತು ಅವನು ಸೌಂದರ್ಯವನ್ನು ಇಷ್ಟಪಡುತ್ತಾನೆ. ಅಹಂಕಾರ ಎಂದರೆ ಸತ್ಯವನ್ನು ತಿರಸ್ಕರಿಸುವುದು ಮತ್ತು ಜನರನ್ನು ತುಚ್ಛವಾಗಿ ಕಾಣುವುದು.” [ಮುಸ್ಲಿಮ್].
- ಸತ್ಯವನ್ನು ತಿರಸ್ಕರಿಸುವುದು ಎಂದರೆ ಸತ್ಯವನ್ನು ಸ್ವೀಕರಿಸದಿರುವುದು.
- ಜನರನ್ನು ತುಚ್ಛವಾಗಿ ಕಾಣುವುದು ಎಂದರೆ ಜನರನ್ನು ಕೀಳಾಗಿ ಕಾಣುವುದು.
- ಸುಂದರ ಬಟ್ಟೆ ಮತ್ತು ಸುಂದರ ಪಾದರಕ್ಷೆಗಳನ್ನು ಧರಿಸುವುದು ಅಹಂಕಾರವಲ್ಲ.
ಉತ್ತರ: - ಮಾರಾಟ ಮತ್ತು ಖರೀದಿಯಲ್ಲಿ ವಂಚಿಸುವುದು. ಅಂದರೆ ಸರಕುಗಳ ನ್ಯೂನತೆಯನ್ನು ಮುಚ್ಚಿಡುವುದು.
- ಕಲಿಯುವುದರಲ್ಲಿ ಮತ್ತು ಕಲಿಸುವುದರಲ್ಲಿ ವಂಚಿಸುವುದು. ಉದಾಹರಣೆಗೆ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಂಚನೆ ಮಾಡುವುದು.
- ಮಾತಿನಲ್ಲಿ ವಂಚಿಸುವುದು. ಅಂದರೆ ಸುಳ್ಳು ಹೇಳುವುದು ಮತ್ತು ಸುಳ್ಳು ಸಾಕ್ಷಿ ನುಡಿಯುವುದು.
- ಜನರಿಗೆ ಮಾತು ಕೊಟ್ಟರೆ ಅಥವಾ ಒಪ್ಪಂದ ಮಾಡಿದರೆ ಅದನ್ನು ನೆರವೇರಿಸದಿರುವುದು.
ವಂಚಿಸುವುದು ನಿಷೇಧಿಸಲಾಗಿದೆ ಎನ್ನುವುದಕ್ಕೆ ಒಂದು ಪುರಾವೆಯೇನೆಂದರೆ, ಒಮ್ಮೆ ಪ್ರವಾದಿಯವರು(ಸ) ಆಹಾರ ಧಾನ್ಯದ ಒಂದು ರಾಶಿಯ ಬಳಿಯಿಂದ ಹಾದುಹೋಗುತ್ತಿದ್ದಾಗ, ಅದರೊಳಗೆ ಕೈ ತೂರಿಸಿದರು. ಆಗ ಅವರ ಬೆರಳುಗಳು ಒದ್ದೆಯಾದವು. ಅವರು ಕೇಳಿದರು: “ಓ ಆಹಾರ ಧಾನ್ಯ ಮಾರುವವನೇ, ಇದೇನು?” ಆತ ಹೇಳಿದ: “ಓ ಅಲ್ಲಾಹನ ಸಂದೇಶವಾಹಕರೇ, ಮಳೆ ಬಂದು ಒದ್ದೆಯಾಗಿದೆ.” ಅವರು ಹೇಳಿದರು: “ಜನರು ಕಾಣುವಂತೆ ಅದನ್ನು ನೀನು ರಾಶಿಯ ಮೇಲ್ಭಾಗದಲ್ಲಿ ಏಕೆ ಹಾಕಲಿಲ್ಲ? ವಂಚನೆ ಮಾಡುವವನು ನಮ್ಮಲ್ಲಿ ಸೇರಿದವನಲ್ಲ.” [ಮುಸ್ಲಿಮ್].
ಆಹಾರ ಧಾನ್ಯದ ರಾಶಿ ಎಂದರೆ ಆಹಾರ ಧಾನ್ಯವನ್ನು ಮಾರಾಟಕ್ಕೆ ಕುಪ್ಪೆ ಮಾಡಿಟ್ಟಿರುವುದು.
ಉತ್ತರ: ಪರದೂಷಣೆ ಎಂದರೆ ನಿನ್ನ ಸಹೋದರನ ಅನುಪಸ್ಥಿತಿಯಲ್ಲಿ ಅವನಿಗೆ ಇಷ್ಟವಿಲ್ಲದ್ದನ್ನು ಹೇಳುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನಿಮ್ಮಲ್ಲಿ ಕೆಲವರು ಇತರ ಕೆಲವರ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಕೆಟ್ಟದಾಗಿ ಮಾತನಾಡಬಾರದು. ತನ್ನ ಸಹೋದರನು ಮೃತಪಟ್ಟು ಮಲಗಿರುವಾಗ ಅವನ ಮಾಂಸವನ್ನು ತಿನ್ನಲು ನಿಮ್ಮಲ್ಲಿ ಯಾರಾದರೂ ಇಷ್ಟಪಡುವರೇ? ನೀವು ಅದನ್ನು (ತಿನ್ನುವುದನ್ನು) ಅಸಹ್ಯಪಡುತ್ತೀರಿ! ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.” [ಸೂರ ಅಲ್-ಹುಜುರಾತ್: 12].
ಉತ್ತರ: ಆಲಸ್ಯ ಎಂದರೆ ಒಳಿತು ಮಾಡಲು ಮತ್ತು ತನ್ನ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸಲು ಉದಾಸೀನ ತೋರುವುದು.
ಉದಾಹರಣೆಗೆ, ಕಡ್ಡಾಯ ಕರ್ಮಗಳನ್ನು ಮಾಡಲು ಆಲಸ್ಯ ತೋರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ಕಪಟವಿಶ್ವಾಸಿಗಳು ಅಲ್ಲಾಹನನ್ನು ವಂಚಿಸುತ್ತಿರುವರು. ಆದರೆ ವಾಸ್ತವಿಕವಾಗಿ ಅಲ್ಲಾಹು ಅವರನ್ನು ವಂಚಿಸುತ್ತಿರುವನು. ಅವರು ನಮಾಝ್‌ಗಾಗಿ ನಿಂತರೆ ಉದಾಸೀನರಾಗಿ ಮತ್ತು ಜನರಿಗೆ ತೋರಿಸುವ ಸಲುವಾಗಿ ನಿಲ್ಲುವರು. ಅಲ್ಪವೇ ವಿನಾ ಅವರು ಅಲ್ಲಾಹನನ್ನು ಸ್ಮರಿಸಲಾರರು.” [ಸೂರ ಅನ್ನಿಸಾ:: 142].
ಆದ್ದರಿಂದ ಸತ್ಯವಿಶ್ವಾಸಿ ಆಲಸ್ಯ, ಸೋಮಾರಿತನ ಮತ್ತು ಜಡವನ್ನು ತೊರೆದು, ಜೀವನದಲ್ಲಿ ಅಲ್ಲಾಹನನ್ನು ಸಂಪ್ರೀತಗೊಳಿಸುವ ಕೆಲಸಗಳನ್ನು ನಿರ್ವಹಿಸಲು ಅತಿಯಾಗಿ ಪರಿಶ್ರಮಿಸಬೇಕು.
ಉತ್ತರ: 1. ಪ್ರಶಂಸಾರ್ಹ ಕೋಪ: ಅಂದರೆ ಸತ್ಯನಿಷೇಧಿಗಳು, ಕಪಟಿಗಳು ಅಥವಾ ಇತರರು ಅಲ್ಲಾಹನ ಪಾವಿತ್ರ್ಯಕ್ಕೆ ಧಕ್ಕೆ ಮಾಡುವಾಗ ಅಲ್ಲಾಹನಿಗಾಗಿ ಕೋಪಿಸುವುದು.
2. ಖಂಡನಾರ್ಹ ಕೋಪ: ಒಬ್ಬ ವ್ಯಕ್ತಿಯಿಂದ ಹೇಳಬಾರದ ಮಾತನ್ನು ಮತ್ತು ಮಾಡಬಾರದ ಕೆಲಸವನ್ನು ಮಾಡಿಸುವ ಕೋಪ.
ಖಂಡನಾರ್ಹ ಕೋಪಕ್ಕೆ ಮದ್ದು:
ವುದೂ.
ನಿಂತಿದ್ದರೆ ಕುಳಿತುಕೊಳ್ಳುವುದು; ಕುಳಿತಿದ್ದರೆ ಮಲಗುವುದು.
ಕೋಪ ಬರುವಾಗ, “ಕೋಪ ಮಾಡಿಕೊಳ್ಳಬಾರದು” ಎಂಬ ಪ್ರವಾದಿಯವರ(ಸ) ಮಾತನ್ನು ಪಾಲಿಸುವುದು.
ಕೋಪ ಬರುವಾಗ ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು.
ಶಾಪಗ್ರಸ್ತ ಸೈತಾನನಿಂದ ಅಲ್ಲಾಹನಲ್ಲಿ ಆಶ್ರಯಬೇಡುವುದು.”
ಮೌನ ಪಾಲಿಸುವುದು.
ಉತ್ತರ: ಗೂಢಚರ್ಯೆ ಎಂದರೆ ಜನರ ರಹಸ್ಯಗಳನ್ನು ಮತ್ತು ಅವರು ಮುಚ್ಚಿಡುವ ವಿಷಯಗಳನ್ನು ಹುಡುಕುವುದು ಮತ್ತು ಬಹಿರಂಗಪಡಿಸುವುದು.
ಗೂಢಚರ್ಯೆಯ ನಿಷೇಧಿತ ರೂಪಗಳು:
- ಜನರ ಮನೆಗಳಲ್ಲಿ ಅವರ ಖಾಸಗಿ ವಿಷಯಗಳನ್ನು ತಿಳಿಯಲು ಪ್ರಯತ್ನಿಸುವುದು.
- ಜನರ ಅನುಮತಿಯಿಲ್ಲದೆ ಅವರ ಮಾತಿಗೆ ಕಿವಿಗೊಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನೀವು ಗೂಢಚರ್ಯೆ ಮಾಡಬೇಡಿ...” [ಸೂರ ಅಲ್-ಹುಜುರಾತ್: 12].
ಉತ್ತರ: ದುರ್ವ್ಯಯ ಎಂದರೆ ಲೆಕ್ಕಕ್ಕಿಂತ ಹೆಚ್ಚು ಖರ್ಚು ಮಾಡುವುದು.
ಜಿಪುಣತನ ಇದಕ್ಕೆ ವಿರುದ್ಧವಾಗಿದೆ. ಅದು ಲೆಕ್ಕಕ್ಕಿಂತ ಕಡಿಮೆ ಖರ್ಚು ಮಾಡುವುದು.
ಸರಿಯಾಗಿ ರೀತಿ ಇವೆರಡರ ಮಧ್ಯದಲ್ಲಿದ್ದು, ಮುಸಲ್ಮಾನನು ಉದಾರಿಯಾಗಿರಬೇಕು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅವರು ಖರ್ಚು ಮಾಡುವಾಗ ದುಂದುಗಾರಿಕೆ ಮಾಡದೆ ಮತ್ತು ಜಿಪುಣತನ ತೋರಿಸದೆ ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸ್ವೀಕರಿಸುವರು.” [ಸೂರ ಅಲ್-ಫುರ್ಕಾನ್ 67].
ಉತ್ತರ: ಹೇಡಿತನ. ಭಯಪಡಬಾರದ್ದನ್ನು ಭಯಪಡುವುದು.
ಉದಾಹರಣೆಗೆ, ಸತ್ಯವನ್ನು ಹೇಳಲು ಮತ್ತು ಕೆಡುಕನ್ನು ವಿರೋಧಿಸಲು ಭಯಪಡುವುದು.
ಧೈರ್ಯ: ಅಂದರೆ ಸತ್ಯಕ್ಕಾಗಿ ಮುಂದೆ ಬರುವುದು. ಉದಾಹರಣೆಗೆ ಇಸ್ಲಾಂ ಮತ್ತು ಮುಸ್ಲಿಮರನ್ನು ರಕ್ಷಿಸಲು ಯುದ್ಧಭೂಮಿಯಲ್ಲಿ ಮುಂದೆ ಬರುವುದು.
ಪ್ರವಾದಿ ﷺ ರವರು ತಮ್ಮ ಪ್ರಾರ್ಥನೆಯಲ್ಲಿ ಹೇಳುತ್ತಿದ್ದರು: “ಓ ಅಲ್ಲಾಹ್ ನಾನು ನಿನ್ನೊಂದಿಗೆ ಹೇಡಿತನದಿಂದ ಅಭಯ ಯಾಚಿಸುತ್ತೇನೆ.” ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: "ಶಕ್ತಿಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮ ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನು. ಪ್ರತಿಯೊಬ್ಬರಲ್ಲೂ ಒಳಿತಿದೆ." [ಮುಸ್ಲಿಮ್].
ಉತ್ತರ: 1- ಅಲ್ಲಾಹು ಉತ್ತಮ ಗುಣವನ್ನು ದಯಪಾಲಿಸಿ ಸಹಾಯ ಮಾಡಲು ಪ್ರಾರ್ಥಿಸುವುದು.
2- ಅಲ್ಲಾಹನ ಬಗ್ಗೆ ಜಾಗರೂಕನಾಗಿರುವುದು, ಅಲ್ಲಾಹು ನೋಡುತ್ತಿದ್ದಾನೆ ಮತ್ತು ಕೇಳುತ್ತಿದ್ದಾನೆ ಎಂಬ ಪ್ರಜ್ಞೆಯನ್ನು ಹೊಂದಿರುವುದು.
3- ಉತ್ತಮ ಗುಣದ ಪ್ರತಿಫಲವನ್ನು ಜ್ಞಾಪಿಸುವುದು ಮತ್ತು ಅದು ಸ್ವರ್ಗ ಪ್ರವೇಶಕ್ಕೆ ಒಂದು ಕಾರಣವೆಂದು ತಿಳಿಯುವುದು.
4- ಕೆಟ್ಟ ಗುಣದ ಪರಿಣಾಮವನ್ನು ಜ್ಞಾಪಿಸುವುದು ಮತ್ತು ಅದು ನರಕ ಪ್ರವೇಶಕ್ಕೆ ಒಂದು ಕಾರಣವೆಂದು ತಿಳಿಯುವುದು.
5- ಉತ್ತಮ ಗುಣದಿಂದ ಅಲ್ಲಾಹನ ಪ್ರೀತಿ ಮತ್ತು ಜನರ ಪ್ರೀತಿ ದೊರಕುತ್ತದೆ. ಕೆಟ್ಟ ಗುಣವು ಅಲ್ಲಾಹನ ಕೋಪ ಮತ್ತು ಜನರ ಕೋಪಕ್ಕೆ ಕಾರಣವಾಗುತ್ತದೆ ಎಂದು ತಿಳಿಯುವುದು.
6- ಪ್ರವಾದಿ ಚರಿತ್ರೆಯನ್ನು ಓದುವುದು, ಮತ್ತು ಅವರನ್ನು ಅನುಸರಿಸುವುದು.
7- ಒಳ್ಳೆಯವರ ಸಹವಾಸ ಮಾಡುವುದು ಮತ್ತು ಕೆಟ್ಟವರ ಸಹವಾಸವನ್ನು ತ್ಯಜಿಸುವುದು.