ಕರ್ಮಶಾಸ್ತ್ರ ವಿಭಾಗ

ಉತ್ತರ: ಶುದ್ಧೀಕರಣ ಎಂದರೆ ಮಾಲಿನ್ಯವನ್ನು ಮತ್ತು ಹೊಲಸುಗಳನ್ನು ನಿವಾರಿಸುವುದು.
ಹೊಲಸನ್ನು ಶುದ್ಧೀಕರಿಸುವುದು ಎಂದರೆ ಮುಸಲ್ಮಾನನು ತನ್ನ ದೇಹ, ಬಟ್ಟೆ, ಅಥವಾ ನಮಾಝ್ ಮಾಡುವ ಸ್ಥಳದಲ್ಲಿರುವ ಹೊಲಸುಗಳನ್ನು ನಿವಾರಿಸುವುದು.
ಮಾಲಿನ್ಯವನ್ನು ಶುದ್ಧೀಕರಿಸುವುದು ಎಂದರೆ ಶುದ್ಧ ನೀರಿನಿಂದ ವುದೂ ಅಥವಾ ಸ್ನಾನ ಮಾಡುವುದು. ನೀರು ಲಭ್ಯವಿಲ್ಲದಿದ್ದರೆ, ಅಥವಾ ನೀರನ್ನು ಬಳಸಲು ಸಾಧ್ಯವಾಗದಿದ್ದರೆ ತಯಮ್ಮಮ್ ಮಾಡುವುದು.

ಉತ್ತರ: ಅದು ಶುದ್ಧವಾಗುವವರೆಗೆ ನೀರಿನಿಂದ ತೊಳೆಯುವ ಮುಖಾಂತರ.
- ನಾಯಿ ಪಾತ್ರೆಯನ್ನು ನೆಕ್ಕಿದರೆ, ಅದನ್ನು ಏಳು ಬಾರಿ ನೀರಿನಿಂದ ಶುದ್ದಗೊಳಿಸಬೇಕು. ಮೊದಲ ಬಾರಿ ಮಣ್ಣಿನಿಂದ ತೊಳೆಯಬೇಕು.

ಉತ್ತರ: ಪ್ರವಾದಿ ﷺ ರವರು ಹೇಳಿದರು: "ಮುಸಲ್ಮಾನ ದಾಸ" - ಅಥವಾ "ಸತ್ಯವಿಶ್ವಾಸಿ ದಾಸ" - ವುದೂ ಮಾಡುತ್ತಾ ತನ್ನ ಮುಖವನ್ನು ತೊಳೆಯುವಾಗ ಅದರ ನೀರಿನೊಂದಿಗೆ ಅವನು ತನ್ನ ಕಣ್ಣುಗಳಿಂದ ನೋಡಿದ ಪಾಪಗಳೆಲ್ಲವೂ ಅವನ ಮುಖದಿಂದ ನಿವಾರಣೆಯಾಗುತ್ತವೆ." - ಅಥವಾ " ನೀರಿನ ಕೊನೆಯ ಹನಿಯೊಂದಿಗೆ" - "ಅವನು ತನ್ನ ಕೈಗಳನ್ನು ತೊಳೆಯುವಾಗ ಅದರ ನೀರಿನೊಂದಿಗೆ ಅವನು ತನ್ನ ಕೈಗಳಿಂದ ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತವೆ." - ಅಥವಾ " ನೀರಿನ ಕೊನೆಯ ಹನಿಯೊಂದಿಗೆ" - "ಅವನು ತನ್ನ ಕಾಲುಗಳನ್ನು ತೊಳೆಯುವಾಗ ಅದರ ನೀರಿನೊಂದಿಗೆ ಅವನು ತನ್ನ ಕಾಲುಗಳಿಂದ ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತವೆ." - ಅಥವಾ " ನೀರಿನ ಕೊನೆಯ ಹನಿಯೊಂದಿಗೆ" - "ಹೀಗೆ ಅವನು ಪಾಪಗಳಿಂದ ಶುದ್ಧವಾಗಿ ಹೊರಬರುತ್ತಾನೆ." [ಮುಸ್ಲಿಮ್].

ಉತ್ತರ: ಕೈಗಳನ್ನು ಮೂರು ಬಾರಿ ತೊಳೆಯುವುದು.
ಮೂರು ಬಾರಿ ಬಾಯಿಯನ್ನು ಮುಕ್ಕಳಿಸುವುದು ಮತ್ತು ಮೂಗಿನೊಳಗೆ ನೀರನ್ನು ಎಳೆದು ಹೊರಬಿಡುವುದು.
ಬಾಯಿ ಮುಕ್ಕಳಿಸುವುದು ಎಂದರೆ ಬಾಯಿಯಲ್ಲಿ ನೀರು ಹಾಕಿ ಚೆನ್ನಾಗಿ ಅಲ್ಲಾಡಿಸಿ ಹೊರಹಾಕುವುದು.
ಮೂಗಿಗೆ ನೀರೆಳೆಯುವುದು ಎಂದರೆ ಬಲಗೈಯಿಂದ ಮೂಗಿನೊಳಗೆ ಶ್ವಾಸದೊಂದಿಗೆ ನೀರನ್ನು ಎಳೆಯುವುದು.
ಮೂಗಿನಿಂದ ನೀರು ಹೊರಬಿಡುವುದು ಎಂದರೆ ಎಡಗೈಯಿಂದ ಮೂಗನ್ನು ಹಿಡಿದು ಬಲವಾಗಿ ಮೂಗಿನಿಂದ ನೀರನ್ನು ಹೊರಹಾಕುವುದು.
ನಂತರ ಮುಖವನ್ನು ಮೂರು ಬಾರಿ ತೊಳೆಯುವುದು.
ನಂತರ ಕೈಗಳನ್ನು ಮೊಣಕೈಗಳವರೆಗೆ ಮೂರು ಬಾರಿ ತೊಳೆಯುವುದು.
ನಂತರ ಎರಡು ಕೈಗಳಿಂದ ತಲೆಯ ಮುಂಬದಿಯಿಂದ ಹಿಂಬದಿಯವರೆಗೆ ಮತ್ತು ಅಲ್ಲಿಂದ ಮುಂಬದಿಯವರೆಗೆ ಸವರುವುದು ಮತ್ತು ಕಿವಿಗಳನ್ನು ಸವರುವುದು.
ನಂತರ ಕಾಲುಗಳನ್ನು ಹರಡುಗಂಟುಗಳವರೆಗೆ ಮೂರು ಬಾರಿ ತೊಳೆಯುವುದು.
ಇದು ವುದೂ ಮಾಡುವ ಸಂಪೂರ್ಣ ವಿಧಾನ ವಾಗಿದೆ. ಪ್ರವಾದಿﷺ ರಿಂದ ವರದಿಯಾದ ಈ ವಿಧಾನವು ಬುಖಾರಿ ಮತ್ತು ಮುಸ್ಲಿಂನ ಹದೀಸ್‌ಗಳಲ್ಲಿ ಸಾಬೀತಾಗಿದೆ. ಉಸ್ಮಾನ್, ಅಬ್ದುಲ್ಲಾ ಬಿನ್ ಝೈದ್ ಮತ್ತು ಇತರರು ಇದನ್ನು ವರದಿ ಮಾಡಿದ್ದಾರೆ. ಅದೇ ರೀತಿ ಈ ಕೆಳಗಿನ ವಿಧಾನವು ಕೂಡ ಪ್ರವಾದಿ(ಸ) ರಿಂದ ಬುಖಾರಿ ಮತ್ತು ಇತರ ಹದೀಸ್ ಗ್ರಂಥಗಳಲ್ಲೂ ಸಾಬೀತಾಗಿದೆ: "ಅವರು ಒಂದೊಂದು ಬಾರಿ ಅಂಗಾಂಗಗಳನ್ನು ತೊಳೆಯುತ್ತಾ ವುದೂ ಮಾಡಿದರು. ಅವರು ಎರಡೆರಡು ಬಾರಿ ಅಂಗಾಂಗಗಳನ್ನು ತೊಳೆಯುತ್ತಾ ವುದೂ ಮಾಡಿದರು. ಅಂದರೆ ಅವರು ವುದೂವಿನ ಪ್ರತಿಯೊಂದು ಅಂಗಗಳನ್ನು ಒಂದು ಅಥವಾ ಎರಡು ಬಾರಿ ತೊಳೆದರು.

ಉತ್ತರ: ಯಾವುದನ್ನು ನಿರ್ವಹಿಸದಿದ್ದರೆ ವುದೂ ಅಸಿಂಧುವಾಗುತ್ತದೋ ಅವುಗಳನ್ನು ವುದೂವಿನ ಕಡ್ಡಾಯಗಳು ಎನ್ನಲಾಗುತ್ತದೆ.
1- ಮುಖವನ್ನು ತೊಳೆಯುವುದು. ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರು ಎಳೆಯುವುದು ಇದರಲ್ಲಿ ಸೇರುತ್ತದೆ.
2- ಮೊಣಕೈಗಳವರೆಗೆ ಕೈಗಳನ್ನು ತೊಳೆಯುವುದು.
3- ತಲೆಯನ್ನು ಸವರುವುದು. ಎರಡು ಕಿವಿಗಳನ್ನು ಸವರುವುದು ಕೂಡ ಇದರಲ್ಲಿ ಸೇರುತ್ತದೆ.
4- ಕಾಲುಗಳನ್ನು ಹರಡುಗಂಟುಗಳವರೆಗೆ ತೊಳೆಯುವುದು.
5- ಅಂಗಾಂಗಗಳನ್ನು ಕ್ರಮಪ್ರಕಾರ ತೊಳೆಯುವುದು. ಅಂದರೆ ಮುಖ, ನಂತರ ಕೈ, ನಂತರ ತಲೆ ಸವರುವುದು, ನಂತರ ಕಾಲುಗಳನ್ನು ತೊಳೆಯುವುದು.
6- ಅಲ್-ಮುವಾಲತ್: ಅಂದರೆ ವುದೂವನ್ನು ನಿರಂತರವಾಗಿ ನಿರ್ವಹಿಸುವುದು. ಅಂಗಾಂಗಗಳ ನೀರು ಒಣಗುವ ತನಕ ಅವುಗಳ ಮಧ್ಯೆ ತಡ ಮಾಡದಿರುವುದು.
- ಅಂದರೆ ಅರ್ಧ ವುದೂ ನಿರ್ವಹಿಸಿ ಸ್ವಲ್ಪ ಸಮಯದ ನಂತರ ಅದನ್ನು ಮುಂದುವರಿಸಿದರೆ, ಆ ವುದೂ ಸಿಂಧುವಾಗುವುದಿಲ್ಲ.

ಉತ್ತರ: ವುದೂವಿನ ಸುನ್ನತ್‌ಗಳು ಎಂದರೆ ಅವುಗಳನ್ನು ನಿರ್ವಹಿಸಿದರೆ ಹೆಚ್ಚಿನ ಪುಣ್ಯ ಮತ್ತು ಪ್ರತಿಫಲ ಸಿಗುತ್ತದೆ. ಅವುಗಳನ್ನು ತೊರೆದರೆ ಯಾವುದೇ ಪಾಪವಿಲ್ಲ. ಅದರಿಂದ ವುದೂ ಅಸಿಂಧುವಾಗುವುದಿಲ್ಲ.
1- ಬಿಸ್ಮಿಲ್ಲ ಹೇಳುವುದು.
2- ಮಿಸ್ವಾಕ್ ಮಾಡುವುದು.
3- ಮುಂಗೈಗಳನ್ನು ತೊಳೆಯುವುದು.
4- ಬೆರಳುಗಳ ಮಧ್ಯಭಾಗಗಳನ್ನು ತೊಳೆಯುವುದು.
5- ಅಂಗಗಳನ್ನು ಎರಡನೇ ಮತ್ತು ಮೂರನೇ ಬಾರಿ ತೊಳೆಯುವುದು.
6- ಬಲಭಾಗದಿಂದ ಪ್ರಾರಂಭಿಸುವುದು.
7- ವುದೂ ನಿರ್ವಹಿಸಿದ ನಂತರ ಈ ದಿಕ್ರ್ ಪಠಿಸುವುದು: "ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹು ವ ರಸೂಲುಹು" "ಅಲ್ಲಾಹನ ಹೊರತು ಬೇರೆ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು. ಮುಹಮ್ಮದ್ ಅವನ ದಾಸ ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷಿ ನುಡಿಯುತ್ತೇನೆ."
8- ಅದರ ನಂತರ ಎರಡು ರಕಅತ್ ನಮಾಝ್ ನಿರ್ವಹಿಸುವುದು.

ಉತ್ತರ: ಮಲಮೂತ್ರ ವಿಸರ್ಜನಾ ದ್ವಾರಗಳಿಂದ ಮೂತ್ರ, ಮಲ ಅಥವಾ ವಾಯು ಹೊರಬರುವುದು.
ನಿದ್ರಿಸುವುದು, ಅಥವಾ ಹುಚ್ಚನಾಗುವುದು ಅಥವಾ ಮೂರ್ಛೆ ಹೋಗುವುದು.
ಒಂಟೆ ಮಾಂಸ ಸೇವಿಸುವುದು.
ಕೈಯಿಂದ ಮೂತ್ರದ್ವಾರ ಅಥವಾ ಗುದದ್ವಾರವನ್ನು ಪರದೆಯಿಲ್ಲದೆ ಸ್ಪರ್ಶಿಸುವುದು.

ಉತ್ತರ: ತಯಮ್ಮುಮ್ ಎಂದರೆ ನೀರು ಸಿಗದಿರುವಾಗ ಅಥವಾ ಅದನ್ನು ಬಳಸಲು ಸಾಧ್ಯವಿಲ್ಲದಿರುವಾಗ ಮಣ್ಣು ಮತ್ತು ಶುದ್ಧವಾದ ಭೂಮಿಯ ಮೇಲ್ಭಾಗದ ಮುಂತಾದ ವಸ್ತುಗಳನ್ನು ಬಳಸುವುದು.

ಉತ್ತರ: ಅಂಗೈಗಳ ಒಳಭಾಗದಿಂದ ಮಣ್ಣಿಗೆ ಒಂದು ಬಾರಿ ಬಡಿದು ಮುಖ ಮತ್ತು ಕೈಗಳ ಹೊರಭಾಗವನ್ನು ಒಂದು ಬಾರಿ ಸವರುವುದು.

ಉತ್ತರ: ವುದೂವನ್ನು ಅಸಿಂಧುಗೊಳಿಸುವ ಕಾರ್ಯಗಳೆಲ್ಲವೂ ತಯಮ್ಮುಮ್ ಅನ್ನು ಅಸಿಂಧುಗೊಳಿಸುತ್ತವೆ.
ನೀರು ಲಭ್ಯವಾದರೆ.

ಉತ್ತರ: ಪಾದರಕ್ಷೆಗಳು ಎಂದರೆ ಕಾಲಿಗೆ ಧರಿಸುವ ಚರ್ಮದ ವಸ್ತು.
ಉತ್ತರ:
ಕಾಲ್ಚೀಲಗಳು ಎಂದರೆ ಕಾಲಿಗೆ ಧರಿಸುವ ಚರ್ಮವಲ್ಲದ ವಸ್ತು.
ಕಾಲುಗಳನ್ನು ತೊಳೆಯುವ ಬದಲು ಅವುಗಳ ಮೇಲೆ ಸವರಬಹುದು.

ಉತ್ತರ: ವಿಶೇಷವಾಗಿ ತಂಪು ಮತ್ತು ಚಳಿಯಿರುವ, ಅಥವಾ ಪ್ರಯಾಣದ ಸಮಯದಲ್ಲಿ ಪಾದರಕ್ಷೆಗಳನ್ನು ಕಳಚುವುದು ಕಷ್ಟವಾಗುವುದರಿಂದ ಜನರಿಗೆ ಸುಲಭ ಮತ್ತು ಸರಳಗೊಳಿಸಲು ಪಾದರಕ್ಷೆಗಳ ಮೇಲೆ ಸವರುವ ನಿಯಮ ರಚಿಸಲಾಗಿದೆ.

ಉತ್ತರ: 1- ವುದೂ ನಿರ್ವಹಿಸಿದ ನಂತರ ಪಾದರಕ್ಷೆಗಳನ್ನು ಧರಿಸಬೇಕು.
2- ಪಾದರಕ್ಷೆಗಳು ಶುಚಿಯಾಗಿರಬೇಕು, ಶುಚಿಯಿಲ್ಲದ ಪಾದರಕ್ಷೆಗಳ ಮೇಲೆ ಸವರಬಾರದು.
3- ವುದೂ ಮಾಡುವಾಗ ಕಾಲುಗಳನ್ನು ಕಡ್ಡಾಯವಾಗಿ ತೊಳೆಯಬೇಕಾದ ಭಾಗಗಳನ್ನು ಪಾದರಕ್ಷೆಯು ಮುಚ್ಚಿರಬೇಕು.
4- ಸವರುವುದು ನಿಗದಿತ ಅವಧಿಯೊಳಗೆ ಇರಬೇಕು. ಪ್ರಯಾಣಿಕರಲ್ಲದವರಿಗೆ: ಒಂದು ದಿನ ಮತ್ತು ಒಂದು ರಾತ್ರಿ, ಮತ್ತು ಪ್ರಯಾಣಿಕರಿಗೆ: ಮೂರು ದಿನಗಳು ಮತ್ತು ರಾತ್ರಿಗಳವರೆಗೆ ಸವರಬಹುದು.

ಉತ್ತರ: ಸವರುವ ವಿಧಾನ ಹೀಗಿದೆ: ಕೈಬೆರಳುಗಳನ್ನು ನೀರಿನಲ್ಲಿ ಒದ್ದೆ ಮಾಡಿ ಕಾಲು ಬೆರಳುಗಳ ಮೇಲಿರಿಸಿ, ಕಣಕಾಲಿನ ಬುಡದ ತನಕ ಸವರುವುದು. ಬಲಗಾಲನ್ನು ಬಲಗೈಯಿಂದ ಎಡಗಾಲನ್ನು ಎಡಗೈಯಿಂದ ಸವರಬೇಕು. ಸವರುವಾಗ ಕೈ ಬೆರಳುಗಳನ್ನು ಹರಡಬೇಕು. ಇದನ್ನು ಪುನರಾವರ್ತಿಸಬಾರದು.

ಉತ್ತರ: 1- ಸವರುವ ಅವಧಿ ಮುಗಿಯುವುದು. ಸವರಲು ಶರಿಯತ್ ನಿರ್ದೇಶಿಸಿದ ನಿಗದಿತ ಅವಧಿ ಮುಗಿದ ಬಳಿಕ ಪಾದರಕ್ಷೆಗಳ ಮೇಲೆ ಸವರುವಂತಿಲ್ಲ. ಪ್ರಯಾಣಿಕರಲ್ಲದವರಿಗೆ: ಒಂದು ದಿನ ಮತ್ತು ಒಂದು ರಾತ್ರಿ, ಮತ್ತು ಪ್ರಯಾಣಿಕರಿಗೆ: ಮೂರು ದಿನಗಳು ಮತ್ತು ರಾತ್ರಿಗಳವರೆಗೆ ಸವರಬಹುದು.
2 - ಪಾದರಕ್ಷೆಗಳನ್ನು ಕಳಚುವುದು. ಸವರಿದ ನಂತರ ಪಾದರಕ್ಷೆಗಳನ್ನು ಅಥವಾ ಅವುಗಳಲ್ಲಿ ಒಂದನ್ನು ಕಳಚಿದರೆ ಸವರುವುದು ಅಸಿಂಧುವಾಗುತ್ತದೆ.

ಉತ್ತರ: ನಮಾಝ್ ಎಂದರೆ ತಕ್ಬೀರ್‌ನಿಂದ ಪ್ರಾರಂಭಿಸಿ ಮತ್ತು ಸಲಾಂದೊಂದಿಗೆ ಮುಕ್ತಾಯಗೊಳ್ಳುವ ನಿರ್ದಿಷ್ಟ ಮಾತುಗಳು ಮತ್ತು ಕ್ರಿಯೆಗಳೊಂದಿಗೆ ಅಲ್ಲಾಹುವಿಗೆ ಸಲ್ಲಿಸುವ ಆರಾಧನೆಯಾಗಿದೆ.

ಉತ್ತರ: ನಮಾಝ್ ಪ್ರತಿಯೊಬ್ಬ ಮುಸಲ್ಮಾನನಿಗೆ ಕಡ್ಡಾಯವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಖಂಡಿತವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿಶ್ಚಯಿಸಲಾದ ಒಂದು ಕಡ್ಡಾಯ ಕರ್ಮವಾಗಿದೆ.” [ಸೂರ ಅನ್ನಿಸಾ:: 103].

ಉತ್ತರ: ನಮಾಝನ್ನು ತೊರೆಯುವುದು ಸತ್ಯನಿಷೇಧವಾಗಿದೆ, ಪ್ರವಾದಿ عَلَيْهِ الصَّلَاةُ وَالسَّلَامُ ಹೇಳಿದರು:
"ನಮ್ಮ ಮತ್ತು ಅವರ ನಡುವಿನ ಒಡಂಬಡಿಕೆಯು ನಮಾಝ್ ಆಗಿದೆ. ಆದ್ದರಿಂದ ಅದನ್ನು ತೊರೆಯುವವನು ಸತ್ಯನಿಷೇಧಿಯಾಗುವನು."
(ಅಹ್ಮದ್, ತಿರ್ಮಿದಿ ಮತ್ತು ಇತರರು)

ಉತ್ತರ: ಹಗಲು ಮತ್ತು ರಾತ್ರಿಯಲ್ಲಿ ಐದು ನಮಾಝ್‌ಗಳು ಕಡ್ಡಾಯವಾಗಿವೆ. ಫಜ್ರ್ ನಮಾಝ್‌: ಎರಡು ರಕ್ಅತ್, ಝುಹ್ರ್ ನಮಾಝ್‌: ನಾಲ್ಕು ರಕ್ಅತ್, ಅಸ್ರ್ ನಮಾಝ್‌: ನಾಲ್ಕು ರಕ್ಅತ್, ಮಗ್ರಿಬ್ ನಮಾಝ್‌: ಮೂರು ರಕ್ಅತ್, ಮತ್ತು ಇಶಾ ನಮಾಝ್: ನಾಲ್ಕು ರಕ್ಅತ್.

ಉತ್ತರ: 1- ಇಸ್ಲಾಂ; ಸತ್ಯನಿಷೇಧಿಗಳ ನಮಾಝ್ ಸಿಂಧುವಲ್ಲ.
2- ಬುದ್ಧಿ; ಹುಚ್ಚರ ನಮಾಝ್ ಸಿಂಧುವಲ್ಲ.
3. ವಿವೇಚನೆ; ವಿವೇಚನೆಯಿಲ್ಲದ ಮಕ್ಕಳ ನಮಾಝ್ ಸಿಂಧುವಲ್ಲ.
4-ಸಂಕಲ್ಪ.
5- ಸಮಯ ಪ್ರಾರಂಭವಾಗುವುದು.
6- ವುದೂ ನಿರ್ವಹಿಸಿರುವುದು.
7- ಮಾಲಿನ್ಯಗಳಿಂದ ಶುದ್ಧವಾಗಿರುವುದು.
8- ಗುಪ್ತಾಂಗಗಳನ್ನು ಮುಚ್ಚುವುದು.
9 - ಕಿಬ್ಲಾ ದೆಡೆಗೆ ತಿರುಗುವುದು.

ಉತ್ತರ: ಹದಿನಾಲ್ಕು ಸ್ತಂಭಗಳು. ಅವು ಈ ಕೆಳಗಿನಂತಿವೆ:
ಒಂದು: ನಿಲ್ಲುವ ಸಾಮರ್ಥ್ಯವಿರುವವರು ಕಡ್ಡಾಯ ನಮಾಝನ್ನು ನಿಂತು ನಿರ್ವಹಿಸುವುದು.
ಇಹ್ರಾಮ್‌ನ ತಕ್ಬೀರ್, ಅಂದರೆ: ಅಲ್ಲಾಹು ಅಕ್ಬರ್ ಎಂದು ಹೇಳುವುದು.
ಸೂರಃ ಅಲ್-ಫಾತಿಹಾ ಪಠಿಸುವುದು.
ರುಕೂ ನಿರ್ವಹಿಸುವುದು. ಬೆನ್ನನ್ನು ನೇರವಾಗಿ ಬಗ್ಗಿಸುವುದು ಮತ್ತು ತಲೆಯನ್ನು ಅದಕ್ಕೆ ಸಮಾನಾಂತರದಲ್ಲಿಡುವುದು.
ರೂಕೂ ನಿಂದ ತಲೆಯೆತ್ತುವುದು.
ಶಾಂತವಾಗಿ ನಿಲ್ಲುವುದು.
ಸುಜೂಜ್ ಮಾಡುವುದು. ಹಣೆ, ಮೂಗು, ಕೈಗಳು, ಮೊಣಕಾಲುಗಳು ಮತ್ತು ಕಾಲ್ಬೆರಳುಗಳ ತುದಿಗಳನ್ನು ನೆಲದಲ್ಲಿ ಒತ್ತಿ ಹಿಡಿಯುವುದು.
ಸುಜೂದಿನಿಂದ ತಲೆಯೆತ್ತುವುದು.
ಎರಡು ಸುಜೂದ್‌ಗಳ ನಡುವೆ ಕುಳಿತುಕೊಳ್ಳುವುದು.
ಸುನ್ನತ್ತಿನ ಪ್ರಕಾರ, ಎಡ ಕಾಲಿನ ಮೇಲೆ ಕುಳಿತುಕೊಂಡು, ಬಲ ಪಾದವನ್ನು ನೆಟ್ಟಗೆ ಮಾಡಿ, ಕಿಬ್ಲಾದ ಕಡೆಗಿರಿಸಬೇಕು.
ಶಾಂತತೆಯನ್ನು ಪಾಲಿಸುವುದು. ಅಂದರೆ ಪ್ರತಿಯೊಂದು ಕ್ರಿಯೆಯಲ್ಲೂ ಶಾಂತತೆಯನ್ನು ಪಾಲಿಸುವುದು.
ಕೊನೆಯ ತಶಹ್ಹುದ್.
ಅದಕ್ಕಾಗಿ ಕುಳಿತುಕೊಳ್ಳುವುದು.
ಎರಡು ಸಲಾಂಗಳು. ಅಂದರೆ ಎರಡು ಬಾರಿ "السَّلام عليكم ورحمة الله". "ನಿಮ್ಮ ಮೇಲೆ ಶಾಂತಿ ಮತ್ತು ಅಲ್ಲಾಹನ ಕರುಣೆ ಇರಲಿ” ಎಂದು ಹೇಳುವುದು.
ನಾವು ಈಗಾಗಲೇ ಹೇಳಿದಂತೆ ಸ್ತಂಭಗಳನ್ನು ಅನುಕ್ರಮವಾಗಿ ನಿರ್ವಹಿಸಬೇಕು. ಉದಾಹರಣೆಗೆ, ರುಕೂ ನಿರ್ವಹಿಸುವುದಕ್ಕೆ ಮುನ್ನ ಉದ್ದೇಶಪೂರ್ವಕ ಸುಜೂದ್ ನಿರ್ವಹಿಸಿದರೆ ನಮಾಝ್ ಅಸಿಂಧುವಾಗುತ್ತದೆ. ಮರೆತು ನಿರ್ವಹಿಸಿದರೆ, ರಕೂ ಮಾಡಲು ಮರಳಬೇಕು ಮತ್ತು ನಂತರ ಸುಜೂದ್ ನಿರ್ವಹಿಸಬೇಕು.

ಉತ್ತರ: ನಮಾಝ್‌‌ಗೆ ಎಂಟು ಕಡ್ಡಾಯ ಕಾರ್ಯಗಳಿವೆ. ಅವು:
1- ತಕ್ಬೀರ್ ಇಹ್ರಾಮಿನ ಹೊರತು ಪಡಿಸಿ ಉಳಿದ ತಕ್ಬೀರ್‌ಗಳು.
2- ಇಮಾಮ್ ಮತ್ತು ಮುನ್ಫರಿದ್ "ಸಮಿಅಲ್ಲಾಹು ಲಿಮನ್ ಹಮಿದ" ಹೇಳುವುದು.
3- "ರಬ್ಬನಾ ವಲಕಲ್ ಹಮ್ದ್" ಎಂದು ಹೇಳುವುದು.
4- ರುಕೂನಲ್ಲಿ ಒಮ್ಮೆ ಸುಬ್‌ಹಾನ ರಬ್ಬಿಯಲ್ ಅಝೀಮ್ ಹೇಳುವುದು.
5- ಸುಜೂದಿನಲ್ಲಿ ಒಮ್ಮೆ ಸುಬ್‌ಹಾನ ರಬ್ಬಿಯಲ್ ಅ'ಅಲಾ ಹೇಳುವುದು.
6- ಎರಡು ಸುಜೂದ್‌ಗಳ ನಡುವೆ “ರಬ್ಬಿಗ್‌ಫಿರ್ ಲೀ” ಹೇಳುವುದು.
7- ಮೊದಲ ತಶಹ್ಹುದ್.
8- ಮೊದಲ ತಶಹ್ಹುದ್‌ಗಾಗಿ ಕುಳಿತುಕೊಳ್ಳುವುದು.

ಉತ್ತರ: ಹದಿನಾಲ್ಕು ಸುನ್ನತ್‌ಗಳು. ಅವು:
1- ಪ್ರಾರಂಭದ ತಕ್ಬೀರ್ ನಂತರ “ಸುಬ್‌ಹಾನಕಲ್ಲಾಹುಮ್ಮ ವಬಿಹಮ್ದಿಕ ವತಬಾರಕಸ್ಮುಕ ವತಆಲಾ ಜದ್ದುಕ ವಲಾ ಇಲಾಹ ಗೈರುಕ” ಹೇಳುವುದು. ಇದನ್ನು ದುಆ ಅಲ್-ಇಸ್ತಿಫ್ತಾಹ್ (ಪ್ರಾರಂಭದ ಪ್ರಾರ್ಥನೆ) ಎಂದು ಕರೆಯಲಾಗುತ್ತದೆ.
2- ಅಭಯ ಯಾಚಿಸುವುದು.
3- ಬಿಸ್ಮಿಲ್ಲಾ ಹೇಳುವುದು.
4- ಆಮೀನ್ ಹೇಳುವುದು.
5- ಸೂರಃ ಅಲ್-ಫಾತಿಹಾ ನಂತರ ಬೇರೆ ಸೂರಾವನ್ನು ಓದುವುದು.
6- ಇಮಾಮ್‌ ಜೋರಾಗಿ ಪಠಿಸುವುದು.
7- ಸಮಿಅಲ್ಲಾಹು ಲಿಮನ್ ಹಮಿದ ಹೇಳಿದ ಬಳಿಕ: "ಮಿಲ್‌ಅ ಸ್ಸಮಾವಾತಿ ವಮಿಲ್‌ಅಲ್ ಅರ್ದಿ ವಮಿಲ್‌ಅ ಮಾ ಶಿಅ್‌ತ ಮಿನ್ ಶೈಇನ್ ಬಅ್‌ದ್” ಹೇಳುವುದು.
8- ರುಕೂನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅಂದರೆ: ಎರಡನೆಯ ಮತ್ತು ಮೂರನೆಯ ಬಾರಿ ಮತ್ತು ಅದಕ್ಕಿಂತ ಹೆಚ್ಚು ಸುಬ್‌ಹಾನ ರಬ್ಬಿಯಲ್ ಅಝೀಮ್ ಹೇಳುವುದು.
9- ಸುಜೂದ್‌ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸುಬ್‌ಹಾನ ರಬ್ಬಿಯಲ್ ಅ'ಅಲಾ ಹೇಳುವುದು.
10- ಎರಡು ಸುಜೂದ್‌ಗಳ ನಡುವೆ ಕುಳಿತುಕೊಳ್ಳುವಾಗ ಒಂದಕ್ಕಿಂತ ಹೆಚ್ಚು ಬಾರಿ “ರಬ್ಬಿಗ್‌ಫಿರ್ ಲೀ” ಹೇಳುವುದು.
11- ಕೊನೆಯ ತಶಹ್ಹುದ್‌ನಲ್ಲಿ ಪ್ರವಾದಿ(ಸ) ರವರ ಮೇಲೆ ಸಲಾತ್ (ದುರೂದ್) ಹೇಳುವುದು ನಂತರ ಪ್ರಾರ್ಥಿಸುವುದು.
ನಾಲ್ಕನೆಯದು:
ಕ್ರಿಯೆಗಳಲ್ಲಿರುವ ಸುನ್ನತ್‌ಗಳು. ಅವುಗಳನ್ನು ಹೈಆತ್ ಎಂದು ಕರೆಯಲಾಗುತ್ತದೆ:
1- ತಕ್ಬೀರ್ -ಎ- ಇಹ್ರಾಮ್‌ನೊಂದಿಗೆ ಕೈಗಳನ್ನು ಎತ್ತುವುದು.
2- ರುಕೂ ಮಾಡುವಾಗ ಕೈಗಳನ್ನು ಎತ್ತುವುದು.
3- ರುಕೂನಿಂದ ತಲೆಯೆತ್ತುವಾಗ ಕೈಗಳನ್ನು ಎತ್ತುವುದು.
4- ಅದರ ನಂತರ ಅವುಗಳನ್ನು ಕೆಳಗೆ ಇರಿಸುವುದು.
5- ಬಲಗೈಯನ್ನು ಎಡಕೈ ಮೇಲೆ ಹಿಡಿಯುವುದು.
6- ಸುಜೂದ್ ಮಾಡುವ ಸ್ಥಳವನ್ನು ನೋಡುವುದು.
7- ನಿಂತಿರುವಾಗ ಪಾದಗಳನ್ನು ಪರಸ್ಪರ ದೂರವಿಡುವುದು.
8- ರುಕೂ ಮಾಡುವಾಗ, ಕೈ ಬೆರಳುಗಳನ್ನು ಹರಡಿಸಿಕೊಂಡು ಮೊಣಕಾಲುಗಳನ್ನು ಬಿಗಿಹಿಡಿಯುವುದು, ಬೆನ್ನನ್ನು ನೇರಕ್ಕೆ ಚಾಚುವುದು ಮತ್ತು ತಲೆಯನ್ನು ಅದರ ಸಮಾನಾಂತರದಲ್ಲಿ ಇರಿಸುವುದು.
9- ಸುಜೂದ್ ಮಾಡುವಾಗ ಸುಜೂದಿನ ಅಂಗಾಂಗಗಳು ನೆಲಕ್ಕೆ ತಾಗಿಕೊಂಡು ಸುಜೂದಿನ ಸ್ಥಳವನ್ನು ಸ್ಪರ್ಶಿಸುವುದು.
10- ಸುಜೂದ್ ಮಾಡುವಾಗ ಕೈಗಳನ್ನು ಪಾರ್ಶ್ವಗಳಿಂದ, ಹೊಟ್ಟೆ ಮತ್ತು ತೊಡೆಗಳಿಂದ ದೂರವಿಡುವುದು. ತೊಡೆಗಳನ್ನು ಕಣಕಾಲುಗಳಿಂದ ಬೇರ್ಪಡಿಸುವುದು, ಮೊಣಕಾಲುಗಳನ್ನು ಪರಸ್ಪರ ಬೇರ್ಪಡಿಸುವುದು, ಪಾದಗಳನ್ನು ನೇರಗೊಳಿಸುವುದು, ಅವರ ಕಾಲ್ಬೆರಳುಗಳ ಅಡಿಭಾಗವನ್ನು ನೆಲಕ್ಕೆ ತಾಗಿಸುವುದು ಮತ್ತು ಕೈಗಳನ್ನು ಭುಜಕ್ಕೆ ಸಮಾನಾಂತರದಲ್ಲಿ ಬೆರಳುಗಳನ್ನು ಜೋಡಿಸಿಕೊಂಡು ಇಡುವುದು.
11- ಎರಡು ಸಾಷ್ಟಾಂಗಗಳ ನಡುವೆ ಮತ್ತು ಮೊದಲ ತಶಹ್ಹುದ್‌ನಲ್ಲಿ ಕುಳಿತುಕೊಳ್ಳುವಾಗ ಇಫ್ತಿರಾಶ್ (ಕಾಲನ್ನು ಹಾಸಬೇಕು) ಮಾಡಬೇಕು, ಮತ್ತು ಎರಡನೆಯ ತಶಹ್ಹುದ್‌ನಲ್ಲಿ ತವರ್ರುಕ್ ಮಾಡಬೇಕು.
12- ಎರಡು ಸಾಷ್ಟಾಂಗಗಳ ನಡುವೆ ಎರಡು ಕೈಗಳನ್ನು ಚಾಚಿಕೊಂಡು, ಬೆರಳುಗಳನ್ನು ಮಡಚಿ ತೊಡೆಯ ಮೇಲೆ ಇಡುವುದು. ತಶಹ್ಹುದ್‌ನಲ್ಲೂ ಹೀಗೆಯೇ ಮಾಡಬೇಕು. ಆದರೆ ಅದರಲ್ಲಿ ಕಿರುಬೆರಳನ್ನು ಮತ್ತು ಉಂಗುರದ ಬೆರಳನ್ನು ಮಡಚಬೇಕು ಮತ್ತು ಹೆಬ್ಬೆರಳನ್ನು ಮಧ್ಯ ಬೆರಳಿನೊಂದಿಗೆ ವೃತ್ತಾಕಾರ ಮಾಡಿ, ಅಲ್ಲಾಹನನ್ನು ಸ್ಮರಿಸುವಾಗ ತೋರುಬೆರಳಿನಿಂದ ಸಂಜ್ಞೆ ಮಾಡಬೇಕು.
13- ಸಲಾಂ ಹೇಳುವಾಗ ಬಲ ಮತ್ತು ಎಡಕ್ಕೆ ತಿರುಗುವುದು.

ಉತ್ತರ: (1) ನಮಾಝ್‌‌ನ ಒಂದು ರುಕ್ನ್ (ಸ್ಥಂಭ) ಅಥವಾ ಶರ್ತ್(ಷರತ್ತು) ಅನ್ನು ಬಿಡುವುದು.
(2) ಉದ್ದೇಶಪೂರ್ವಕವಾಗಿ ಮಾತನಾಡುವುದು.
(3) ತಿನ್ನುವುದು ಅಥವಾ ಕುಡಿಯುವುದು.
(4) ಅನೇಕ ಸತತ ಚಲನೆಗಳು.
(5) ನಮಾಝಿನ ಕಡ್ಡಾಯಕಾರ್ಯಗಳಲ್ಲಿ ಒಂದನ್ನು ಉದ್ದೇಶಪೂರ್ವಕವಾಗಿ ತೊರೆಯುವುದು.

ಉತ್ತರ: ನಮಾಝ್‌‌ನ ವಿಧಾನ ಹೀಗಿರಬೇಕು:
1- ಸಂಪೂರ್ಣ ದೇಹವನ್ನು ಯಾವುದೇ ವಿಚಲನೆ ಮಾಡದೆ ಅಥವಾ ತಿರುಗದೆ, ಕಿಬ್ಲಾಗೆ ಮುಖಮಾಡಬೇಕು.
2- ನಂತರ ನಿರ್ವಹಿಸಲು ಬಯಸುವ ನಮಾಝಿನ ನಿಯ್ಯತ್ತನ್ನು(ಸಂಕಲ್ಪ) ನಾಲಗೆಯಿಂದ ಹೇಳದೆ ಹೃದಯದಲ್ಲಿ ನಿಯ್ಯತ್ ಮಾಡಬೇಕು.
3 - ನಂತರ ತಕ್ಬೀರ್-ಎ- ಇಹ್ರಾಮ್, ಅಂದರೆ ಅಲ್ಲಾಹು ಅಕ್ಬರ್ ಎಂದು ಹೇಳಬೇಕು. ತಕ್ಬೀರ್ ಹೇಳುವಾಗ ಕೈಗಳನ್ನು ಭುಜದ ಸಮಾನಾಂತರಕ್ಕೆ ಎತ್ತಬೇಕು.
4- ನಂತರ ಬಲಗೈಯ ಅಂಗೈಯನ್ನು ಎಡಗೈಯ ಹೊರಬಾಗದಲ್ಲಿಟ್ಟು ಎದೆಯ ಮೇಲಿಡಬೇಕು.
5- ನಂತರ ಪ್ರಾರಂಭದ ಪ್ರಾರ್ಥನೆ ಹೇಳಬೇಕು: ಅಲ್ಲಾಹುಮ್ಮ ಬಾಯಿದ್ ಬೈನೀ ವ ಬೈನ ಖತಾಯಾಯಾ ಕಮಾ ಬಾಅತ್ತ ಬೈನಲ್ ಮಷ್ರಿಖಿ ವಲ್ ಮಗ್ರಿಬ್ ಅಲ್ಲಾಹುಮ್ಮ ನಖ್ಖಿನಿ ಮಿನ್ ಖತಾಯಾಯಾ ಕಮಾ ಯುನಖ್ಖಸ್ಸ್ ಸವ್ ಬುಲ್ ಅಬ್ಯದು ಮಿನದ್ದನಸ್ ಅಲ್ಲಾಹುಮ್ಮಘ್ಸಿಲ್ನಿ ಮಿನ್ ಖತಾಯಾಯಾ ಬಿಲ್ ಮಾಯಿ ವಸ್ಸಲ್ಜಿ ವಲ್ ಬರ್ದ್.“ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮ(ದಿಕ್ಕು)ಗಳ ಮಧ್ಯೆ ಅಂತರವಿರಿಸಿದಂತೆ ನನ್ನ ಮತ್ತು ನನ್ನ ಪಾಪಗಳ ಮಧ್ಯೆ ಅಂತರವಿರಿಸು. ಓ ಅಲ್ಲಾಹ್! ಬಿಳಿ ಉಡುಪನ್ನು ಕೊಳೆಯಿಂದ ಶುದ್ಧೀಕರಿಸುವಂತೆ ನನ್ನನ್ನು ನನ್ನ ಪಾಪಗಳಿಂದ ಶುದ್ಧೀಕರಿಸು. ಓ ಅಲ್ಲಾಹ್! ಮಂಜು, ನೀರು ಮತ್ತು ಹಿಮಗಳಿಂದ ನನ್ನನ್ನು ನನ್ನ ಪಾಪಗಳಿಂದ ತೊಳೆದುಬಿಡು.”
ಅಥವಾ ಹೀಗೆ ಹೇಳಬೇಕು:"ಸುಬ್ ಹಾನಕಲ್ಲಾಹುಮ್ಮ ವಬಿಹಮ್ದಿಕ ವತಬಾರಕಸ್ಮುಕ ವತಆಲಾ ಜದ್ದುಕ ವಲಾ ಇಲಾಹ ಗೈರುಕ" “ಓ ಅಲ್ಲಾಹ್! ನಿನ್ನ ಪರಿಪಾವನತೆಯನ್ನು ಕೊಂಡಾಡುತ್ತಾ ನಿನ್ನ ಸ್ತುತಿಯೊಂದಿಗೆ, ನಿನ್ನ ನಾಮವು ಅನುಗ್ರಹೀತವಾಗಿದೆ, ನಿನ್ನ ಔನ್ನತ್ಯವು ಅತ್ಯುನ್ನತವಾಗಿದೆ ಮತ್ತು ನೀನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ.”
6- ನಂತರ ಅಭಯಯಾಚನೆ ಮಾಡುತ್ತಾ ಹೀಗೆ ಹೇಳಬೇಕು: ಅಊದು ಬಿಲ್ಲಾಹಿ ಮಿನ ಶ್ಶೈತಾನಿ ರ್ರಜೀಮ್“ಶಾಪಗ್ರಸ್ತ ಸೈತಾನನಿಂದ ನಾನು ಅಲ್ಲಾಹನಲ್ಲಿ ಆಶ್ರಯ ಪಡೆಯುತ್ತೇನೆ.” 7- ನಂತರ ಬಿಸ್ಮಿಲ್ಲಾ ಹೇಳಿ ಸೂರ ಫಾತಿಹ ಪಠಿಸಬೇಕು: ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ. “ಅಲ್-ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್” ಸರ್ವಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.) ಅರ್ರಹ್ಮಾ ನಿರ್ರಹೀಮ್
ಪರಮ ದಯಾಮಯನೂ, ಕರುಣಾನಿಧಿಯೂ, “ಮಾಲಿಕಿ ಯೌಮಿ ದ್ದೀನ್” ಪ್ರತಿಫಲ ದಿನದ ಒಡೆಯನಾದ) “ಇಯ್ಯಾಕ ನಅ್‌ಬುದು ವಇಯ್ಯಾಕ ನಸ್ತಈನ್” ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನೊಂದಿಗೆ ಮಾತ್ರ ಸಹಾಯ ಬೇಡುತ್ತೇವೆ.) “ಇಹ್ದಿನ ಸ್ಸಿರಾತಲ್ ಮುಸ್ತಕೀಮ್” ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು.) “ಸಿರಾತಲ್ಲದೀನ ಅನ್‌ಅಮ್ತ ಅಲೈಹಿಂ ಗೈರಿಲ್ ಮಗ್‌ದೂಬಿ ಅಲೈಹಿಂ ವಲದ್ದಾಲ್ಲೀನ್” ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ. ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ.) [ಸೂರ ಅಲ್-ಫಾತಿಹ: 1- 7].
ನಂತರ “ಆಮೀನ್” ಎಂದು ಹೇಳಬೇಕು. ಅರ್ಥ: “ಓ ಅಲ್ಲಾಹ್! ನನ್ನಿಂದ ಸ್ವೀಕರಿಸು.”
8- ನಂತರ ಕುರ್‌ಆನಿನಲ್ಲಿ ತನಗೆ ಕಂಠಪಾಠವಿರುವುದನ್ನು ಪಠಿಸಬೇಕು. ಫಜ್ರ್ ನಮಾಝ್‌ನಲ್ಲಿ ಕುರ್‌ಆನ್ ಪಠಣವನ್ನು ದೀರ್ಘಿಸಬೇಕು.
9-ನಂತರ ರಕೂ ಮಾಡಬೇಕು ಅಂದರೆ: ಅಲ್ಲಾಹನ ಗೌರವಕ್ಕಾಗಿ ತನ್ನ ಬೆನ್ನನ್ನು ಬಾಗಿಸಬೇಕು, ಮತ್ತು ರುಕೂ ಮಾಡುವಾಗ ಅಲ್ಲಾಹು ಅಕ್ಬರ್ ಎಂದು ಹೇಳಬೇಕು ಮತ್ತು ತನ್ನ ಕೈಗಳನ್ನು ತನ್ನ ಭುಜದ ಮಟ್ಟಕ್ಕೆ ಎತ್ತಬೇಕು. ಬೆನ್ನನ್ನು ಚಾಚಿ ತಲೆಯನ್ನು ಕಡೆಗೆ ಇಡುವುದು.ಮತ್ತು ಮೊಣಕಾಲುಗಳ ಮೇಲೆ ತನ್ನ ಕೈಗಳನ್ನು ತೆರೆದ ಬೆರಳುಗಳಿಂದ ಇರಿಸುವುದು ಸುನ್ನತ್ ಆಗಿರುತ್ತದೆ.
10 - ರುಕೂನಲ್ಲಿ ಮೂರು ಬಾರಿ “ಸುಬ್‌ಹಾನ ರಬ್ಬಿಯಲ್ ಅದೀಮ್” (ಮಹೋನ್ನತನಾದ ನನ್ನ ರಬ್ಬಿನ ಪರಿಪಾವನತೆಯನ್ನು ಕೊಂಡಾಡುತ್ತೇನೆ) ಎಂದು ಹೇಳಬೇಕು. ಅದಕ್ಕಿಂತ ಹೆಚ್ಚು ಹೇಳಲು ಬಯಸಿದರೆ, “ಸುಬ್‌ಹಾನಕಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ, ಅಲ್ಲಾಹುಮ್ಮಗ್‌ಫಿರ್ ಲೀ” (ಓ ಅಲ್ಲಾಹ್! ನಮ್ಮ ರಬ್ಬೇ! ನಿನ್ನ ಸ್ತುತಿಯೊಂದಿಗೆ ನಿನ್ನ ಪರಿಪಾವನತೆಯನ್ನು ಕೊಂಡಾಡುತ್ತೇನೆ. ಓ ಅಲ್ಲಾಹ್! ನನಗೆ ಕ್ಷಮೆ ನೀಡು) ಎಂದು ಹೇಳಬೇಕು.
11 - ನಂತರ “ಸಮಿಅಲ್ಲಾಹು ಲಿಮನ್ ಹಮಿದ” (ಸ್ತುತಿಸಿದವನ ಮಾತನ್ನು ಅಲ್ಲಾಹು ಆಲಿಸಲಿ) ಎಂದು ಹೇಳುತ್ತಾ ರುಕೂವಿನಿಂದ ತಲೆ ಮೇಲೆತ್ತಬೇಕು ಮತ್ತು ಭುಜಗಳ ವರೆಗೆ ಕೈಗಳನ್ನು ಸಮವನ್ನಾಗಿಸಬೇಕು. ಇಮಾಮರ ಹಿಂದೆ ಇರುವವರು ಸಮಿಅಲ್ಲಾಹು ಲಿಮನ್ ಹಮಿದ ಹೇಳಬಾರದು. ಬದಲಾಗಿ, “ರಬ್ಬನಾ ವಲಕಲ್ ಹಮ್ದು” (ಸ್ತುತಿ ಪ್ರಶಂಸೆಗಳ ಒಡೆಯನೇ! ನಿನಗೆ ಸ್ತುತಿ) ಎಂದು ಹೇಳಬೇಕು.
12 - ರುಕೂವಿನಿಂದ ಎದ್ದ ನಂತರ: “ರಬ್ಬನಾ ವಲಕಲ್ ಹಮ್ದು ಮಿಲ್‌ಅ ಸ್ಸಮಾವಾತಿ ವಮಿಲ್‌ಅಲ್ ಅರ್‌ದಿ, ವಮಾ ಬೈನಹುಮಾ, ವಮಿಲ್‌ಅ ಮಾ ಶಿಅತ ಮಿನ್ ಶೈಇನ್ ಬಅದು” (ನಮ್ಮ ರಬ್ಬೇ! ಸ್ತುತಿ ಪ್ರಶಂಸೆಗಳ ಒಡೆಯನೇ! ನಿನಗೆ ಸ್ತುತಿ, ಆಕಾಶಗಳು ತುಂಬುವಷ್ಟು, ಭೂಮಿ ತುಂಬುವಷ್ಟು ಮತ್ತು ನೀನು ಇಚ್ಛಿಸುವ ಪ್ರತಿಯೊಂದು ವಸ್ತು ತುಂಬುವಷ್ಟು ನಿನಗೆ ಸ್ತುತಿ) ಎಂದು ಹೇಳಬೇಕು.
13- ನಂತರ ಮೊದಲನೆಯ ಸುಜೂದ್ ನಿರ್ವಹಿಸಬೇಕು. ಸುಜೂದ್‌ ಮಾಡುವಾಗ, “ಅಲ್ಲಾಹು ಅಕ್ಬರ್” ಎಂದು ಹೇಳಬೇಕು. ಹಣೆ, ಮೂಗು, ಎರಡು ಅಂಗೈಗಳು, ಎರಡು ಮಂಡಿಗಳು, ಎರಡು ಪಾದಗಳ ತುದಿಗಳು ಮುಂತಾದ ಏಳು ಅಂಗಗಳ ಮೇಲೆ ಸುಜೂದ್ ಮಾಡಬೇಕು. ತೋಳುಗಳನ್ನು ಪಾರ್ಶ್ವಗಳಿಂದ ದೂರವಿಡಬೇಕು. ಕೈಗಳನ್ನು ನೆಲದ ಮೇಲೆ ಹರಡಬಾರದು. ಬೆರಳುಗಳ ತುದಿಗಳು ಕಿಬ್ಲಕ್ಕೆ ಮುಖಮಾಡಬೇಕು.
14 - ಸುಜೂದಿನಲ್ಲಿ ಮೂರು ಬಾರಿ “ಸುಬ್‌ಹಾನ ರಬ್ಬಿಯಲ್ ಅಅಲಾ” (ಮಹೋನ್ನತನಾದ ನನ್ನ ರಬ್ಬಿನ ಪರಿಪಾವನತೆಯನ್ನು ಕೊಂಡಾಡುತ್ತೇನೆ) ಎಂದು ಹೇಳಬೇಕು. ಅದಕ್ಕಿಂತ ಹೆಚ್ಚು ಹೇಳಲು ಬಯಸಿದರೆ, “ಸುಬ್‌ಹಾನಕಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ, ಅಲ್ಲಾಹುಮ್ಮಗ್‌ಫಿರ್ ಲೀ” (ಓ ಅಲ್ಲಾಹ್! ನಮ್ಮ ರಬ್ಬೇ! ನಿನ್ನ ಸ್ತುತಿಯೊಂದಿಗೆ ನಿನ್ನ ಪರಿಪಾವನತೆಯನ್ನು ಕೊಂಡಾಡುತ್ತೇನೆ. ಓ ಅಲ್ಲಾಹ್! ನನಗೆ ಕ್ಷಮೆ ನೀಡು) ಎಂದು ಹೇಳಬೇಕು.
15- ನಂತರ ಅಲ್ಲಾಹು ಅಕ್ಬರ್ ಎನ್ನುತ್ತಾ ಸುಜೂದ್‌ನಿಂದ ತಲೆ ಎತ್ತಬೇಕು.
16- ನಂತರ ಎರಡು ಸಜ್ದಗಳ ಮಧ್ಯೆ ಎಡಪಾದದ ಮೇಲೆ ಕುಳಿತುಕೊಳ್ಳಬೇಕು. ಬಲಪಾದವನ್ನು ನೆಲಕ್ಕೆ ನಾಟಿ ನಿಲ್ಲಿಸಬೇಕು. ಬಲಗೈಯನ್ನು ಬಲ ತೊಡೆಯ ಮೇಲಿಡಬೇಕು. ಕಿರುಬೆರಳು ಮತ್ತು ಉಂಗುರದ ಬೆರಳನ್ನು ಮಡಚಬೇಕು. ತೋರುಬೆರಳನ್ನು ಎತ್ತಿ ಹಿಡಿಯಬೇಕು ಮತ್ತು ಪ್ರಾರ್ಥಿಸುವಾಗ ಅಲುಗಾಡಿಸುತ್ತಿರಬೇಕು. ಹೆಬ್ಬೆರಳ ತುದಿಯನ್ನು ಮಧ್ಯದ ಬೆರಳಿನ ತುದಿಗೆ ತಾಗಿಸಿ ವೃತ್ತಾಕಾರ ಮಾಡಿಕೊಳ್ಳಬೇಕು. ಎಡಗೈಯ ಬೆರಳುಗಳನ್ನು ಹರಡಿಕೊಂಡು ಎಡ ತೊಡೆಯ ಮೇಲಿಡಬೇಕು.
17- ಎರಡು ಸುಜೂದ್‌ಗಳ ನಡುವೆ ಕುಳಿತುಕೊಳ್ಳುವಾಗ ಹೀಗೆ ಹೇಳಬೇಕು: “ರಬ್ಬಿಗ್‌ಫಿರ್ ಲೀ, ವರ್ಹಮ್‌ನೀ ವಹ್ದಿನೀ ವರ್ಝುಕ್‌ನೀ ವಜ್‌ಬುರ್‌ನೀ ವಆಫಿನೀ” (ನನ್ನ ರಬ್ಬೇ! ನನ್ನನ್ನು ಕ್ಷಮಿಸು, ನನಗೆ ಕರುಣೆತೋರು, ನನಗೆ ಮಾರ್ಗದರ್ಶನಮಾಡು,ನನ್ನ ನಷ್ಟವನ್ನು ಸರಿದೂಗಿಸು, ನನಗೆ ಅನ್ನಾಧಾರವನ್ನು ನೀಡು, ನನಗೆ ಸೌಖ್ಯನೀಡು.”
18- ನಂತರ ಮೊದಲನೇ ಸುಜೂದ್ ಮಾಡಿದಂತೆ ಎರಡನೇ ಸುಜೂದ್ ಮಾಡಬೇಕು. ಸುಜೂದ್ ಮಾಡುವಾಗ ಅಲ್ಲಾಹು ಅಕ್ಬರ್ ಹೇಳಬೇಕು.
19- ನಂತರ ಎರಡನೇ ಸುಜೂದ್ ನಿರ್ವಹಿಸಿದ ಬಳಿಕ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಎದ್ದು ನಿಲ್ಲಬೇಕು. ಮೊದಲನೆಯ ರಕ್ಅತ್ ನಿರ್ವಹಿಸಿದಂತೆ ಎರಡನೇ ರಕ್ಅತ್ತನ್ನು ನಿರ್ವಹಿಸಬೇಕು. ಆದರೆ ಅದರಲ್ಲಿ ಪ್ರಾರಂಭದ ಪ್ರಾರ್ಥನೆಯಿಲ್ಲ.
20- ಎರಡನೇ ರಕ್ಅತ್ ನಿರ್ವಹಿಸಿದ ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ, ಎರಡು ಸುಜೂದ್‌ಗಳ ಮಧ್ಯೆ ಕುಳಿತಂತೆ ಕುಳಿತುಕೊಳ್ಳಬೇಕು.
21- ಈ ಕೂರವಿಕೆಯಲ್ಲಿ ಈ ರೀತಿ ತಶಹ್ಹುದ್ ಪಠಿಸಬೇಕು: “ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹ ನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ, ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್, ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು, ವಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹ್” (ಅಭಿವಂದನೆಗಳು, ಪ್ರಾರ್ಥನೆಗಳು ಮತ್ತು ಸತ್ಕರ್ಮಗಳೆಲ್ಲವೂ ಅಲ್ಲಾಹನಿಗೆ. ಓ ಪ್ರವಾದಿಯವರೇ! ತಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಅನುಗ್ರಹಗಳು ಸದಾ ಇರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ಸಜ್ಜನರಾದ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸನೂ ಸಂದೇಶವಾಹಕನೂ ಆಗಿರುವರೆಂದು ನಾನು ಸಾಕ್ಷ್ಯವಹಿಸುತ್ತೇನೆ). ನಂತರ ಇಹಲೋಕ ಮತ್ತು ಪರಲೋಕದ ಒಳಿತಿಗಾಗಿ ತಾನು ಇಷ್ಟಪಡುವ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕು.
22- ನಂತರ ಬಲಕ್ಕೆ ತಿರುಗಿ ಅಸ್ಸಲಾಮು ಅಲೈಕುಂ ವರಹ್ಮತುಲ್ಲಾ ಎಂದು ಹೇಳಬೇಕು. ನಂತರ ಎಡಕ್ಕೆ ತಿರುಗಿ ಹಾಗೆಯೇ ಹೇಳಬೇಕು.
23- ನಮಾಝ್ ಮೂರು ಅಥವಾ ನಾಲ್ಕು ರಕ್ಅತ್ತಿನದ್ದಾಗಿದ್ದರೆ, ಮೊದಲ ತಶಹ್ಹುದ್‌ನಲ್ಲಿ "ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್ ವಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು” ಎಂಬಲ್ಲಿಯ ತನಕ ಪಠಿಸಬೇಕು.
24 - ನಂತರ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಎದ್ದು ನಿಲ್ಲಬೇಕು. ತಕ್ಬೀರ್ ಹೇಳುವಾಗ ಕೈಗಳನ್ನು ಭುಜದ ಸಮಾನಾಂತರಕ್ಕೆ ಎತ್ತಬೇಕು.
25- ನಂತರ ಉಳಿದ ರಕ್ಅತ್‌ಗಳನ್ನು ಎರಡನೇ ರಕ್ಅತ್ತಿನಂತೆ ನಿರ್ವಹಿಸಬೇಕು. ಆದರೆ ಸೂರ ಫಾತಿಹದ ನಂತರ ಬೇರೆ ಸೂರ ಓದಬೇಕಾಗಿಲ್ಲ.
26- ನಂತರ ತವರ್ರುಕ್‌ನಲ್ಲಿ ಕುಳಿತುಕೊಳ್ಳಬೇಕು. ಅಂದರೆ ಬಲಪಾದವನ್ನು ನಾಟಿ ನಿಲ್ಲಿಸಬೇಕು. ಎಡಪಾದವು ಬಲಗಾಲಿನ ಅಡಿಯಿಂದ ಹೊರಬರಬೇಕು. ನೆಲದ ಮೇಲೆ ಕುಳಿತುಕೊಳ್ಳಬೇಕು. ಮೊದಲ ತಶಹ್ಹುದ್‌ನಲ್ಲಿ ವಿವರಿಸಿದಂತೆ ಕೈಗಳನ್ನು ತೊಡೆಗಳ ಮೇಲಿಡಬೇಕು.
27- ಈ ಕೂರವಿಕೆಯಲ್ಲಿ ಸಂಪೂರ್ಣ ತಶಹ್ಹುದ್ ಪಠಿಸಬೇಕು.
28- ನಂತರ ಬಲಕ್ಕೆ ತಿರುಗಿ ಅಸ್ಸಲಾಮು ಅಲೈಕುಂ ವರಹ್ಮತುಲ್ಲಾ ಎಂದು ಹೇಳಬೇಕು. ನಂತರ ಎಡಕ್ಕೆ ತಿರುಗಿ ಹಾಗೆಯೇ ಹೇಳಬೇಕು.

ಉತ್ತರ: ಮೂರು ಸಲ “ಅಸ್ತಗ್ಫಿರುಲ್ಲಾಹ್” ಎಂದು ಹೇಳುವುದು.ಅಲ್ಲಾಹನೊಂದಿಗೆ ನಾನು ಕ್ಷಮೆಯನ್ನು ಬೇಡುತ್ತಿದ್ದೇನೆ,
“ಅಲ್ಲಾಹುಮ್ಮ ಅನ್ತ ಸ್ಸಲಾಮು ವಮಿನ್ಕ ಸ್ಸಲಾಮು ತಬಾರಕ್ತ ಯಾ ದಲ್ ಜಲಾಲಿ ವಲ್ ಇಕ್ರಾಮ್” (ಓ ಅಲ್ಲಾಹ್! ನೀನು ಸಲಾಮ್ ಆಗಿರುವೆ, ಮತ್ತು ಸಲಾಮ್ ನಿನ್ನಿಂದಲೇ ಆಗಿದೆ, ಓ ಘನತೆ ಗೌರವಗಳ ಒಡೆಯನೇ ನೀನು ಅನುಗ್ರಹೀತನಾಗಿರುವೆ.)
“ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್, ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಆ'ತಯ್ತ ವಲಾ ಮು'ಅತಿಯ ಲಿಮಾ ಮನ'ಅತ, ವಲಾ ಯನ್‌ಫಉ ದಲ್ ಜದ್ದಿ ಮಿನ್ಕಲ್ ಜದ್ದ್” (ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಓ ಅಲ್ಲಾಹ್! ನೀನು ನೀಡಿದ್ದನ್ನು ತಡೆಯುವವನಿಲ್ಲ ಮತ್ತು ನೀನು ತಡೆದುದನ್ನು ನೀಡುವವನಿಲ್ಲ, ಮತ್ತು ಸಿರಿವಂತನ ಸಂಪತ್ತು ನಿನಗೆ ವಿರುದ್ಧವಾಗಿ ಯಾವುದೇ ಪ್ರಯೋಜನವನ್ನೂ ನೀಡದು.)
“ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್, ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹಿ, ಲಾ ಇಲಾಹ ಇಲ್ಲಲ್ಲಾಹು, ವಲಾ ನಅï‌ಬುದು ಇಲ್ಲಾ ಇಯ್ಯಾಹು, ಲಹು ನ್ನಿಅï‌ಮತು ವಲಹುಲ್ ಫದ್ಲು, ವಲಹು ಸ್ಸನಾಉಲ್ ಹಸನು, ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ ವಲವ್ ಕರಿಹಲ್ ಕಾಫಿರೂನ್.” (ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹನ ಹೊರತು ಶಕ್ತಿಯಾಗಲಿ ಸಾಮರ್ಥ್ಯವಾಗಲಿ ಇಲ್ಲ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ. ನಾವು ಅವನನ್ನಲ್ಲದೆ ಇನ್ನಾರನ್ನೂ ಆರಾಧಿಸುವುದಿಲ್ಲ. ಅನುಗ್ರಹವು ಅವನದಾಗಿದೆ, ಔದಾರ್ಯವು ಅವನದಾಗಿದೆ ಮತ್ತು ಉತ್ತಮವಾದ ಪ್ರಶಂಸೆಯು ಅವನಿಗಾಗಿದೆ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸುತ್ತೇವೆ.)
- “ಸುಬ್‌ಹಾನಲ್ಲಾಹ್” (ಮೂವತ್ತಮೂರು ಬಾರಿ) (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ).
“ಅಲ್‌ಹಮ್ದುಲಿಲ್ಲಾಹ್” (ಮೂವತ್ತಮೂರು ಬಾರಿ) (ಸ್ತುತಿ ಅಲ್ಲಾಹನಿಗೆ).
“ಅಲ್ಲಾಹು ಅಕ್ಬರ್” (ಮೂವತ್ತಮೂರು ಬಾರಿ) (ಅಲ್ಲಾಹು ಮಹಾನನಾಗಿದ್ದಾನೆ).
ನಂತರ ನೂರನ್ನು ಪೂರ್ತಿ ಮಾಡಲು ಹೀಗೆ ಹೇಳಬೇಕು:
“ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್.” (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ, ಸ್ತುತಿ ಅಲ್ಲಾಹನಿಗೆ, ಅಲ್ಲಾಹು ಮಹಾನನಾಗಿದ್ದಾನೆ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.)
- ಫಜ್ರ್ ಮತ್ತು ಮಗ್ರಿಬ್ ನಮಾಝಿನ ನಂತರ ಮೂರು ಬಾರಿ ಹಾಗೂ ಉಳಿದ ನಮಾಝ್‌ಗಳ ನಂತರ ಒಂದು ಬಾರಿ ಸೂರ ಇಖ್ಲಾಸ್, ಸೂರಃ ಫಲಕ್ ಮತ್ತು ಸೂರಃ ನಾಸ್ ಪಠಿಸಬೇಕು.
- ಆಯತುಲ್-ಕುರ್ಸಿಯನ್ನು ಒಮ್ಮೆ ಪಠಿಸಬೇಕು.

ಉತ್ತರ: ಫಜ್ರ್ ನಮಾಜಿನ ಮುಂಚೆ ಎರಡು ರಕ್ಅತ್‌ಗಳು.
ಝುಹರ್ ನಮಾಜಿನ ಮುಂಚೆ ನಾಲ್ಕು ರಕ್ಅತ್‌ಗಳು.
ಝುಹರ್ ನಮಾಜಿನ ನಂತರ ಎರಡು ರಕ್ಅತ್‌ಗಳು.
ಮಗ್ರಿಬ್ ನಮಾಜಿನ ನಂತರ ಎರಡು ರಕ್ಅತ್‌ಗಳು.
ಇಶಾ ನಮಾಜಿನ ನಂತರ ಎರಡು ರಕ್ಅತ್‌ಗಳು.
ಅದರ ಶ್ರೇಷ್ಠತೆಗಳು ಹೀಗಿವೆ:
ಪ್ರವಾದಿ ﷺ ಹೇಳಿದರು: "ಯಾರು ಹಗಲು ರಾತ್ರಿ ಸ್ವಯಂಪ್ರೇರಣೆಯಿಂದ ಹನ್ನೆರಡು ರಕ್ಅತ್‌ ನಮಾಝ್ ನಿರ್ವಹಿಸುತ್ತಾರೋ, ಅಲ್ಲಾಹು ಅವರಿಗೆ ಸ್ವರ್ಗದಲ್ಲಿ ಮನೆಯನ್ನು ನಿರ್ಮಿಸುತ್ತಾನೆ." (ಮುಸ್ಲಿಂ, ಅಹ್ಮದ್ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ)

ಉತ್ತರ: ಜುಮುಅ ದಿನ (ಶುಕ್ರವಾರ). ಪ್ರವಾದಿﷺ ಹೇಳಿದರು: "ನಿಮ್ಮ ಅತ್ಯುತ್ತಮ ದಿನಗಳಲ್ಲಿ ಒಂದು ಜುಮುಅ ದಿನವಾಗಿದೆ. ಆ ದಿನದಲ್ಲಿ ಆದಮರನ್ನು ಸೃಷ್ಟಿಸಲಾಯಿತು. ಅದರಲ್ಲಿಯೇ ಅವರು ಮರಣಹೊಂದಿದರು. ಅದರಲ್ಲಿಯೇ ಕಹಳೆ ಊದಲಾಗುವುದು. ಅದರಲ್ಲಿಯೇ ದಿಗ್ಭ್ರಮೆಗೊಳಿಸುವ ಶಬ್ದ ಬರುವುದು. ಆದ್ದರಿಂದ ನೀವು ಜುಮುಅ ದಿನ ನನ್ನ ಮೇಲೆ ಸ್ವಲಾತ್ ಹೆಚ್ಚಿಸಿ, ಏಕೆಂದರೆ ನಿಮ್ಮ ಸ್ವಲಾತ್ ನನ್ನ ಮುಂದೆ ಹಾಜರುಪಡಿಸಲಾಗುತ್ತದೆ." ಶಿಷ್ಯರು ಪ್ರಶ್ನಿಸಿದರು: ಓ ಅಲ್ಲಾಹನ ಸಂದೇಶವಾಹಕರೇ, ನೀವು ಅಗಲಿರುವಾಗ ನಮ್ಮ ಸ್ವಲಾತ್ ನಿಮಗೆ ಹೇಗೆ ಹಾಜರುಪಡಿಸಲಾಗುತ್ತದೆ? ಅವರು ಉತ್ತರಿಸಿದರು: "ಅಲ್ಲಾಹನು ಪ್ರವಾದಿಗಳ ದೇಹಗಳನ್ನು ಮಣ್ಣಿಗೆ ನಿಷಿದ್ಧಗೊಳಿಸಿದ್ದಾನೆ." [ಅಬು ದಾವೂದ್, ಹಾಗೂ ಇತರರು ವರದಿ ಮಾಡಿದ್ದಾರೆ].

ಉತ್ತರ: ಅದು ಪ್ರತಿಯೊಬ್ಬ ಪ್ರೌಢ, ಬುದ್ಧಿಯಿರುವ, ನಿವಾಸಿಯಾಗಿರುವ ಮುಸ್ಲಿಂ ಪುರುಷರಿಗೆ ವೈಯುಕ್ತಿಕ ಕಡ್ಡಾಯವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಓ ಸತ್ಯವಿಶ್ವಾಸಿಗಳೇ! ಶುಕ್ರವಾರದಂದು ನಮಾಝ್‌ಗಾಗಿ ಕರೆಯಲಾದರೆ ಅಲ್ಲಾಹನ ಸ್ಮರಣೆಯೆಡೆಗೆ ವೇಗವಾಗಿ ಧಾವಿಸಿರಿ ಮತ್ತು ವ್ಯಾಪಾರವನ್ನು ವರ್ಜಿಸಿರಿ. ಅದು ನಿಮಗೆ ಉತ್ತಮವಾಗಿದೆ. ನೀವು ಅರಿತವರಾಗಿದ್ದರೆ.” [ಸೂರ ಅಲ್- ಜುಮುಅ: 9].

ಉತ್ತರ - ಜುಮುಅ ನಮಾಝಿಗೆ ಎರಡು ರಕ್ಅತ್‌ಗಳು. ಇದರಲ್ಲಿ ಇಮಾಮ್ ಉಚ್ಛ ಸ್ವರದಿಂದ ಪಠಿಸುತ್ತಾರೆ ಮತ್ತು ಇದರ ಮುಂಚೆ ಎರಡು ಪ್ರವಚನಗಳನ್ನು ನಿರ್ವಹಿಸಲಾಗುತ್ತದೆ.

ಉತ್ತರ: ಧರ್ಮಸಮ್ಮತವಾದ ಕಾರಣವಿಲ್ಲದೆ ಜುಮುಅ ನಮಾಝನ್ನು ಬಿಡಲು ಅನುಮತಿಯಿಲ್ಲ. ಪ್ರವಾದಿﷺ ಹೇಳಿದರು: “ಯಾರು ಅಸಡ್ಡೆಯಿಂದ ಮೂರು ಜುಮಾಗಳನ್ನು ಬಿಡುತ್ತಾನೋ ಅವನ ಹೃದಯದ ಮೇಲೆ ಅಲ್ಲಾಹು ಮುದ್ರೆ ಹಾಕುತ್ತಾನೆ.” [ಅಬು ದಾವೂದ್, ಹಾಗೂ ಇತರರು ವರದಿ ಮಾಡಿದ್ದಾರೆ].

ಉತ್ತರ-
1- ಸ್ನಾನ ಮಾಡುವುದು.
2-ಸುಗಂಧಗಳನ್ನು ಬಳಸುವುದು.
3- ಅತ್ಯುತ್ತಮ ಬಟ್ಟೆಗಳನ್ಧಗಳನ್ನು
4-ಮಸೀದಿಗೆ ಬೇಗ ಹೋಗುವುದು.
5- ಪ್ರವಾದಿ ﷺ ರವರ ಮೇಲೆ ಹೆಚ್ಚು ಹೆಚ್ಚು ಸ್ವಲಾತ್ ಹೇಳುವುದು.
6- ಸೂರಃ ಅಲ್-ಕಹಫ್ ಪಠಿಸುವುದು.
7- ನಡೆದುಕೊಂಡು ಮಸೀದಿಗೆ ಹೋಗುವುದು.
8- ಪ್ರಾರ್ಥನೆ ಸ್ವೀಕಾರಗೊಳ್ಳುವ ಸಮಯದಲ್ಲಿ ಪ್ರಾರ್ಥಿಸುವುದು.

ಉತ್ತರ: ಅಬ್ದುಲ್ಲಾ ಬಿನ್ ಉಮರ್ رَضِيَ اللَّهُ عَنْهُمَا ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ: "ಜಮಾಅತ್ ನಮಾಝ್‌ ಒಂಟಿಯಾಗಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತೇಳು ಪಟ್ಟು ಉತ್ತಮವಾಗಿದೆ." [ಮುಸ್ಲಿಮ್].

ಉತ್ತರ: ಹೃದಯ ಸಾನಿಧ್ಯ ಮತ್ತು ಅಂಗಾಂಗಗಳ ನಿಶ್ಚಲನೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ನಿಸ್ಸಂದೇಹವಾಗಿ ಸತ್ಯವಿಶ್ವಾಸಿಗಳು ಯಶಸ್ವಿಯಾಗಿದ್ದಾರೆ. ಅಂದರೆ ತಮ್ಮ ಪ್ರಾರ್ಥನೆಯಲ್ಲಿ ವಿನಮ್ರರಾಗಿರುವವರು. [ಸೂರ ಅಲ್-ಮೂಮಿನೂನ್:1,2]

ಉತ್ತರ: ಝಕಾತ್ ಎಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವು ನಿರ್ದಿಷ್ಟ ಜನರಿಗೆ ಅವರಲ್ಲಿರುವ ನಿರ್ದಿಷ್ಟ ಸಂಪತ್ತಿನಲ್ಲಿರುವ ಕಡ್ಡಾಯ ಹಕ್ಕು.
ಇದು ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಅದು ಕಡ್ಡಾಯ ದಾನವಾಗಿದ್ದು ಶ್ರೀಮಂತರಿಂದ ತೆಗೆದು ಬಡವರಿಗೆ ನೀಡಲಾಗುತ್ತದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮತ್ತು ಝಕಾತ್ ನೀಡಿರಿ.” [ಸೂರ ಅಲ್-ಬಕರ:43].

ಉತ್ತರ: ಇದು ಝಕಾತ್ ಅಲ್ಲ, ಉದಾಹರಣೆಗೆ ಯಾವುದೇ ಒಳಿತಿನ ಉದ್ದೇಶಕ್ಕಾಗಿ ಯಾವುದೇ ಸಮಯದಲ್ಲಿ ದಾನವನ್ನು ನೀಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮತ್ತು ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ.” [ಸೂರ ಅಲ್-ಬಕರ:195].

ಉತ್ತರ: ಇದು ನಿಯ್ಯತ್‌ನೊಂದಿಗೆ ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಮುರಿಯುವ ವಸ್ತುಗಳಿಂದ ದೂರವಿರುವ ಮೂಲಕ ಅಲ್ಲಾಹನನ್ನು ಆರಾಧಿಸುವುದು. ಇದರಲ್ಲಿ ಎರಡು ವಿಧಗಳಿವೆ:
ಕಡ್ಡಾಯ ಉಪವಾಸ: ಉದಾಹರಣೆಗೆ ರಮದಾನ್ ತಿಂಗಳ ಉಪವಾಸ. ಇದು ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರ ಮೇಲೆ ವಿಧಿಸಲಾದಂತೆ ನಿಮ್ಮ ಮೇಲೂ ಉಪವಾಸ ಆಚರಿಸುವುದನ್ನು ಕಡ್ಡಾಯವಾಗಿ ವಿಧಿಸಲಾಗಿದೆ. ನೀವು ಭಯಭಕ್ತಿ ಪಾಲಿಸುವ ಸಲುವಾಗಿ.” [ಸೂರ ಅಲ್-ಬಕರ:183].
ಕಡ್ಡಾಯವಲ್ಲದ ಉಪವಾಸ:
ಉದಾಹರಣೆಗೆ, ಪ್ರತಿ ಸೋಮವಾರ ಮತ್ತು ಗುರುವಾರದ ಉಪವಾಸ, ಪ್ರತಿ ತಿಂಗಳ ಮೂರು ದಿನಗಳ ಉಪವಾಸ, ಅದು ಪ್ರತಿ ಚಂದ್ರಮಾನ ತಿಂಗಳ 13, 14, 15 ನೇ ದಿನಗಳಾಗಿರುವುದು ಉತ್ತಮ.

ಉತ್ತರ: ಅಬೂ ಹುರೈರ عَنْهُمَا ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ: "ಯಾರು ವಿಶ್ವಾಸದಿಂದ ಮತ್ತು ಪ್ರತಿಫಲದ ನಿರೀಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾರೋ, ಅವರ ಹಿಂದಿನ ಪಾಪಗಳು ಕ್ಷಮಿಸಲಾಗುವುದು. ” (ಮುತ್ತಫಕುನ್ ಅಲೈಹಿ).

ಉತ್ತರ: ಅಬೂ ಸಈದ್ ಖುದ್ರಿ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ: "ಯಾವುದೇ ಒಬ್ಬ ದಾಸ ಅಲ್ಲಾಹನಿಗಾಗಿ ಒಂದು ದಿನ ಉಪವಾಸ ಆಚರಿಸಿದರೆ ಆ ಉಪವಾಸದ ಕಾರಣದಿಂದ ಅಲ್ಲಾಹು ಅವನ ಮುಖವನ್ನು ನರಕಾಗ್ನಿಯಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರವಿಡುತ್ತಾನೆ." (ಮುತ್ತಫಕುನ್ ಅಲೈಹಿ).
- "ಎಪ್ಪತ್ತು ಶರತ್ಕಾಲ" ಅರ್ಥ; ಅಂದರೆ: ಎಪ್ಪತ್ತು ವರ್ಷಗಳು.

ಉತ್ತರ: 1- ಉದ್ದೇಶಪೂರ್ವಕವಾಗಿ ತಿನ್ನುವುದು ಮತ್ತು ಕುಡಿಯುವುದು.
2- ಉದ್ದೇಶಪೂರ್ವಕವಾಗಿ ವಾಂತಿ ಮಾಡುವುದು.
3- ಇಸ್ಲಾಂ ಧರ್ಮವನ್ನು ತ್ಯಜಿಸುವುದು.

ಉತ್ತರ: 1- ಇಫ್ತಾರನ್ನು ತ್ವರಿತಗೊಳಿಸುವುದು.
2- ಸುಹೂರ್ ಸೇವಿಸುವುದು ಮತ್ತು ಅದನ್ನು ವಿಳಂಬಿಸುವುದು.
3- ಸತ್ಕರ್ಮಗಳು ಮತ್ತು ಆರಾಧನೆಗಳನ್ನು ಹೆಚ್ಚಿಸುವುದು.
4- ಉಪವಾಸ ಮಾಡುವ ವ್ಯಕ್ತಿಯೊಡನೆ ಯಾರಾದರೂ ಕೆಟ್ಟದಾಗಿ ವರ್ತಿಸಿದರೆ, ನಾನು ಉಪವಾಸಿಗ ಎಂದು ಹೇಳುವುದು.
5- ಇಫ್ತಾರಿನ (ಉಪವಾಸ ಮುರಿಯುವ) ಸಮಯದಲ್ಲಿ ಪ್ರಾರ್ಥಿಸುವುದು.
6- ತಾಜಾ ಖರ್ಜೂರಗಳಿಂದ ಅಥವಾ ಒಣ ಖರ್ಜೂರದಿಂದ, ಇವುಗಳು ಇಲ್ಲದಿದ್ದರೆ ನೀರಿನಿಂದ ಉಪವಾಸ ಮುರಿಯುವುದು.

ಉತ್ತರ: ಹಜ್ಜ್ ಎಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವು ನಿರ್ದಿಷ್ಟ ಕರ್ಮಗಳನ್ನು ನಿರ್ವಹಿಸಲು ಅಲ್ಲಾಹನ ಪವಿತ್ರ ಭವನಕ್ಕೆ ತೆರಳುವ ಮೂಲಕ ಅವನನ್ನು ಆರಾಧಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಆ ಭವನವನ್ನು ತಲುಪಲು ಸಾಧ್ಯವಿರುವ ಜನರು ಅದರೆಡೆಗೆ ಹಜ್ಜ್ ಯಾತ್ರೆ ಮಾಡುವುದು ಅವರಿಗೆ ಅಲ್ಲಾಹನೊಂದಿಗಿರುವ ಬಾಧ್ಯತೆಯಾಗಿದೆ. ಯಾರಾದರೂ ಅವಿಶ್ವಾಸವಿಡುವುದಾದರೆ ಖಂಡಿತವಾಗಿಯೂ ಅಲ್ಲಾಹು ಸರ್ವಲೋಕದವರಿಂದ ನಿರಪೇಕ್ಷನಾಗಿರುವನು.” [ಸೂರ ಆಲು ಇಮ್ರಾನ್:97].

ಉತ್ತರ: 1- ಇಹ್ರಾಮ್.
2- ಅರಫಾದಲ್ಲಿ ನಿಲ್ಲುವುದು.
3- ತವಾಫುಲ್-ಇಫಾದ.
4- ಸಫಾ ಮತ್ತು ಮರ್ವಾ ನಡುವೆ ಸಈ ಮಾಡುವುದು.

ಉತ್ತರ - ಅಬು ಹುರೈರಾ رَضِيَ اللَّهُ عَنْهُ ರಿಂದ ವರಿದ. ಅಲ್ಲಾಹನ ಪ್ರವಾದಿ ﷺ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಶ್ಲೀಲ ವರ್ತನೆ ಅಥವಾ ಅನೈತಿಕತೆಯನ್ನು ಮಾಡದೇ ಕೇವಲ ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ ಅವನು ಹಜ್ಜಿನಿಂದ ಹಿಂದಿರುಗುವನು.” (ಅಲ್-ಬುಖಾರಿ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ.
- “ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ”: ಅಂದರೆ ಯಾವುದೇ ಪಾಪಗಳಿಲ್ಲದೆ.

ಉತ್ತರ: ಉಮ್ರಾ ಎಂದರೆ ಯಾವುದೇ ಸಮಯದಲ್ಲಿ ಕೆಲವು ನಿರ್ದಿಷ್ಟ ಕರ್ಮಗಳನ್ನು ನಿರ್ವಹಿಸಲು ಅಲ್ಲಾಹನ ಪವಿತ್ರ ಭವನಕ್ಕೆ ತೆರಳುವ ಮೂಲಕ ಅವನನ್ನು ಆರಾಧಿಸುವುದು.

ಉತ್ತರ: 1- ಇಹ್ರಾಮ್.
2- ಕಅಬಾಗೆ ತವಾಫ್ (ಪ್ರದಕ್ಷಿಣೆ).
3- ಸಫಾ ಮತ್ತು ಮರ್ವಾ ನಡುವೆ ಸಈ ಮಾಡುವುದು.

ಉತ್ತರ: ಇಸ್ಲಾಂ ಧರ್ಮವನ್ನು ಹರಡಲು, ಅದನ್ನು ಮತ್ತು ಅದರ ಜನರನ್ನು ರಕ್ಷಿಸಲು ಅಥವಾ ಇಸ್ಲಾಂ ಮತ್ತು ಅದರ ಜನರ ಶತ್ರುಗಳ ವಿರುದ್ಧ ಹೋರಾಡಲು ಪರಿಶ್ರಮಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನೀವು (ಯುದ್ಧಕ್ಕಾಗಿ) ಹೊರಡಿರಿ. ನಿಮ್ಮ ಸಂಪತ್ತುಗಳಿಂದಲೂ ಶರೀರಗಳಿಂದಲೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ನೀವು ಅರಿತವರಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.” [ಸೂರ ಅತ್ತೌಬ:41].