ಅಕೀದ ವಿಭಾಗ

ಉತ್ತರ: ನನ್ನನ್ನು ಪೋಷಿಸಿ ಬೆಳೆಸಿದವನು ಮತ್ತು ತನ್ನ ಅನುಗ್ರಹದಿಂದ ಸರ್ವಲೋಕಗಳನ್ನು ಪೋಷಿಸಿ ಬೆಳೆಸುವವನೇ ನನ್ನ ರಬ್ಬ್.
ಪುರಾವೆ ಅಲ್ಲಾಹನ ವಚನ:
“ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹನಿಗೆ ಸ್ತುತಿ.” [ಸೂರ ಅಲ್-ಫಾತಿಹ:2].

ಉತ್ತರ: ನನ್ನ ಧರ್ಮ ಇಸ್ಲಾಂ. ಇಸ್ಲಾಮ್ ಎಂದರೆ ತೌಹೀದ್ (ಏಕದೇವವಿಶ್ವಾಸ) ನ ಮೂಲಕ ಅಲ್ಲಾಹನಿಗೆ ಸಂಪೂರ್ಣ ಶರಣಾಗುವುದು, ಅನುಸರಣೆಯ ಮೂಲಕ ಅವನಿಗೆ ವಿಧೇಯವಾಗಿರುವುದು ಮತ್ತು ಶಿರ್ಕ್ (ಬಹುದೇವವಿಶ್ವಾಸ) ಹಾಗೂ ಅದರ ಜನರಿಂದ ದೂರವಿರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಖಂಡಿತವಾಗಿಯೂ ಅಲ್ಲಾಹನ ಬಳಿ ಧರ್ಮವೆಂದರೆ ಇಸ್ಲಾಮ್ ಮಾತ್ರವಾಗಿದೆ.” [ಸೂರ ಆಲು ಇಮ್ರಾನ್:19].

ಉತ್ತರ: ನನ್ನ ಪ್ರವಾದಿ ಮುಹಮ್ಮದ್ ﷺ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮುಹಮ್ಮದ್ ಅಲ್ಲಾಹುವಿನ ಸಂದೇಶವಾಹಕರಾಗಿರುವರು.” [ಸೂರ ಅಲ್-ಫತ್ಹ್:29].

ಉತ್ತರ: ಕಲಿಮತು-ತ್ತೌಹೀದ್ ಎಂದರೆ "ಲಾ ಇಲಾಹ ಇಲ್ಲಲ್ಲಾಹ್”. ಅದರ ಅರ್ಥ: ಅಲ್ಲಾಹನನ್ನು ಹೊರತುಪಡಿಸಿ ಆರಾಧನೆಗೆ ಯಾರೂ ನೈಜ ಹಕ್ಕುದಾರರಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಅಲ್ಲಾಹನನ ಹೊರತು ಅನ್ಯ ಆರಾಧ್ಯರಿಲ್ಲ ಎಂಬುದನ್ನು ಅರಿತುಕೊಳ್ಳಿರಿ.” [ಸೂರ ಮುಹಮ್ಮದ್:19].

ಉತ್ತರ: ಅಲ್ಲಾಹನು ಆಕಾಶಗಳ ಮೇಲೆ, ಅವನ ಎಲ್ಲಾ ಸೃಷ್ಟಿಗಳ ಮೇಲೆ ಅರ್ಶ್‌ನಲ್ಲಿ ಆರೂಢನಾಗಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಪರಮ ದಯಾಮಯನು (ಅಲ್ಲಾಹು) ಅರ್ಶ್‌ನಲ್ಲಿ ಆರೂಢನಾದನು.” [ಸೂರ ತ್ವಾಹಾ:5]. ಅಲ್ಲಾಹನು ಹೇಳುತ್ತಾನೆ: “ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿರುವನು. ಅವನು ಯುಕ್ತಿಪೂರ್ಣನೂ ಸೂಕ್ಷ್ಮ ಜ್ಞಾನಿಯೂ ಆಗಿರುವನು.” [ಸೂರ ಅಲ್-ಅನ್‌ಆಮ್:18].

ಉತ್ತರ: ಅದರ ಅರ್ಥ: ಅಲ್ಲಾಹು ಅವರನ್ನು ಸರ್ವಲೋಕಗಳಿಗೆ ಸುವಾರ್ತೆ ನೀಡುವವರಾಗಿ ಮತ್ತು ಎಚ್ಚರಿಕೆ ನೀಡುವವರಾಗಿ ಕಳುಹಿಸಿದನು.
ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು:

1. ಅವರು ಆಜ್ಞಾಪಿಸಿದ ವಿಷಯಗಳನ್ನು ಅನುಸರಿಸುವುದು.
2. ಅವರು ತಿಳಿಸಿಕೊಟ್ಟದ್ದರಲ್ಲಿ ವಿಶ್ವಾಸವಿಡುವುದು.
3. ಅವರನ್ನು ಧಿಕ್ಕರಿಸದಿರುವುದು.
4. ಅವರ ಆದೇಶದ ಪ್ರಕಾರವಲ್ಲದೆ ಅಲ್ಲಾಹನನ್ನು ಆರಾಧಿಸದಿರುವುದು. ಅಂದರೆ ಸುನ್ನತ್ತನ್ನು ಅನುಸರಿಸುವುದು ಮತ್ತು ಬಿದ್‌ಅತ್‌ಗಳನ್ನು ತ್ಯಜಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
(ಅಲ್ಲಾಹುವಿನ) ಸಂದೇಶವಾಹಕರನ್ನು ಯಾರು ಅನುಸರಿಸುವನೋ ಖಂಡಿತವಾಗಿಯೂ ಅವನು ಅಲ್ಲಾಹುವನ್ನು ಅನುಸರಿಸಿರುವನು.” [ ಸೂರ ಅನ್ನಿಸಾಅ್:80]. ಮತ್ತೊಂದೆಡೆ ಅವನು ಹೇಳುತ್ತಾನೆ: “ಅವರು ತಮ್ಮಿಷ್ಟದಂತೆ ಮಾತನಾಡುವುದಿಲ್ಲ. ಅದು ಅವರಿಗೆ ದಿವ್ಯಸಂದೇಶವಾಗಿ ನೀಡಲಾಗುವ ಒಂದು ಸಂದೇಶ ಮಾತ್ರವಾಗಿದೆ.” [ಸೂರ ಅನ್ನಜ್ಮ್: 3-4] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ನಿಮಗೆ ಅಲ್ಲಾಹುವಿನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಂದರೆ ಅಲ್ಲಾಹುವನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ.” [ಸೂರ ಅಲ್-ಅಹ್‌ಝಾಬ್:21].

ಉತ್ತರ: ಸರ್ವಶಕ್ತನಾದ ಅಲ್ಲಾಹು ಅವನನ್ನು ಮಾತ್ರ ಆರಾಧಿಸಲು ನಮ್ಮನ್ನು ಸೃಷ್ಟಿಸಿದನು.
ಆಟ ಮತ್ತು ವಿನೋದಗಳಿಗೆ ಅಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
"ನನ್ನನ್ನು ಆರಾಧಿಸುವುದಕ್ಕಾಗಿಯೇ ವಿನಾ ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿಲ್ಲ." [ಸೂರ ಅದ್ದಾರಿಯಾತ್:56].

ಆರಾಧನೆ ಎಂದರೆ ಅಲ್ಲಾಹು ಇಷ್ಟಪಡುವ ಹಾಗೂ ಸಂಪ್ರೀತನಾಗುವ ಎಲ್ಲಾ ಮಾತುಗಳು ಮತ್ತು ಎಲ್ಲಾ ಬಾಹ್ಯ ಹಾಗೂ ಆಂತರಿಕ ಕರ್ಮಗಳು ಅಡಕವಾಗಿರುವ ಸಮಗ್ರ ಹೆಸರಾಗಿದೆ.
ಬಾಹ್ಯ ಕರ್ಮಗಳು ಎಂದರೆ, ಉದಾಹರಣೆಗೆ ನಾಲಿಗೆಯಿಂದ ಅಲ್ಲಾಹನ ಸ್ಮರಣೆ ಮಾಡುವುದು, ಅಂದರೆ ತಸ್ಬೀಹ್, ತಹ್ಮೀದ್, ತಕ್ಬೀರ್, ನಮಾಝ್ ಮತ್ತು ಹಜ್ಜ್.
ಆಂತರಿಕ ಕರ್ಮಗಳು ಎಂದರೆ, ಉದಾಹರಣೆಗೆ ಭರವಸೆ, ಭಯ ಮತ್ತು ನಿರೀಕ್ಷೆ.

ಉತ್ತರ: ನಮ್ಮ ದೊಡ್ಡ ಕರ್ತವ್ಯ ಸರ್ವಶಕ್ತ ಅಲ್ಲಾಹನನ್ನು ಏಕೈಕಗೊಳಿಸುವುದು (ತೌಹೀದ್).

ಉತ್ತರ: 1. ತೌಹೀದೆ ರುಬೂಬಿಯ್ಯ: ಅಂದರೆ, ಅಲ್ಲಾಹನು ಮಾತ್ರ ಸೃಷ್ಟಿಕರ್ತನು, ಅನ್ನಾಧಾರ ಒದಗಿಸುವವನು, ಮಾಲೀಕನು ಮತ್ತು ನಿಯಂತ್ರಕನೆಂದು ನಂಬುವುದು.
2. ತೌಹೀದೆ ಉಲೂಹಿಯ್ಯ: ಅಂದರೆ ಆರಾಧನೆಯಲ್ಲಿ ಅಲ್ಲಾಹನನ್ನು ಏಕನಾಗಿಸುವುದು. ಅಂದರೆ ಸರ್ವಶಕ್ತನಾದ ಅಲ್ಲಾಹನನ್ನು ಹೊರತುಪಡಿಸಿ ಯಾರನ್ನೂ ಆರಾಧಿಸದಿರುವುದು.
ತೌಹೀದೆ ಅಸ್ಮಾವಸ್ಸಿಫಾತ್:
ಇದು ಕುರ್‌ಆನ್ ಮತ್ತು ಸಹೀಹ್ ಹದೀಸಿನಲ್ಲಿ ಬಂದಿರುವ ಅಲ್ಲಾಹನ ನಾಮಗಳು ಮತ್ತು ಗುಣವಿಶೇಷಣಗಳಲ್ಲಿ, ಅವುಗಳನ್ನು ಉಪಮಿಸದೆ, ಹೋಲಿಸದೆ, ನಿರಾಕರಿಸದೆ ವಿಶ್ವಾಸವಿಡುವುದು.
ಈ ಮೂರು ವಿಧದ ತೌಹೀದ್‌ಗೆ ಪುರಾವೆ ಅಲ್ಲಾಹನ ಈ ವಚನ:
“ಅವನು ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವವುಗಳ ಪ್ರಭುವಾಗಿರುವನು. ಆದ್ದರಿಂದ ಅವನನ್ನು (ಮಾತ್ರ) ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ತಾವು ತಾಳ್ಮೆಯಿಂದ ಅಚಲರಾಗಿ ನಿಲ್ಲಿರಿ. ಅವನಿಗೆ ಸರಿಸಮಾನರಾಗಿರುವ ಯಾರನ್ನಾದರೂ ತಾವು ಅರಿತಿರುವಿರಾ?” [ಸೂರ ಮರ್ಯಮ್:65].

ಉತ್ತರ: ಅಲ್ಲಾಹನೊಡನೆ ಶಿರ್ಕ್ (ಸಹಭಾಗಿತ್ವ) ಮಾಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ತನ್ನೊಂದಿಗೆ ಸಹಭಾಗಿತ್ವ ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸಲಾರನು. ಅದರ ಹೊರತಾಗಿರುವುದನ್ನು ಅವನು ಇಚ್ಛಿಸುವವರಿಗೆ ಕ್ಷಮಿಸುವನು. ಯಾರು ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡುವನೋ ಖಂಡಿತವಾಗಿಯೂ ಅವನು ಘೋರವಾದ ಒಂದು ಪಾಪವನ್ನು ಹೆಣೆದಿರುವನು.” [ಸೂರ ಅನ್ನಿಸಾ:48]

ಉತ್ತರ: ಶಿರ್ಕ್ ಎಂದರೆ ಅಲ್ಲಾಹನಲ್ಲದವರಿಗೆ ಆರಾಧನೆಗಳನ್ನು ಅರ್ಪಿಸುವುದು.
ಅದರ ವಿಧಗಳು:

ದೊಡ್ಡ ಶಿರ್ಕ್: ಉದಾಹರಣೆಗೆ: ಅಲ್ಲಾಹು ಅಲ್ಲದವರನ್ನು ಕರೆದು ಪ್ರಾರ್ಥಿಸುವುದು, ಅಲ್ಲಾಹು ಅಲ್ಲದವರಿಗೆ ಸುಜೂದ್ (ಸಾಷ್ಟಾಂಗ ನಮನ) ಮಾಡುವುದು, ಅಥವಾ ಅಲ್ಲಾಹು ಅಲ್ಲದವರಿಗೆ ಬಲಿ ಅರ್ಪಿಸುವುದು.
ಸಣ್ಣ ಶಿರ್ಕ್:
ಉದಾಹರಣೆಗೆ: ಅಲ್ಲಾಹು ಅಲ್ಲದವರ ಮೇಲೆ ಆಣೆ ಹಾಕುವುದು, ಪ್ರಯೋಜನವನ್ನು ತರಲು ಅಥವಾ ಹಾನಿಯನ್ನು ತಡೆಗಟ್ಟಲು ತಾಯಿತಗಳನ್ನು ಕಟ್ಟುವುದು, ಲಘುವಾದ ರೀತಿಯಲ್ಲಿರುವ ತೋರಿಕೆ, ಅಂದರೆ ಒಬ್ಬರು ತನ್ನ ನಮಾಝನ್ನು ನೋಡುತ್ತಿದ್ದಾರೆ ಎಂದು ಭಾಸವಾಗುವಾಗ ನಮಾಝನ್ನು ಸುಂದರವಾಗಿ ನಿರ್ವಹಿಸುವುದು.

ಉತ್ತರ: ಅಲ್ಲಾಹನಿಗಲ್ಲದೆ ಯಾರಿಗೂ ಅಗೋಚರ ಜ್ಞಾನವಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಹೇಳಿರಿ: ಭೂಮಿ-ಆಕಾಶಗಳಲ್ಲಿ, ಅಲ್ಲಾಹನ ಹೊರತು ಯಾರೂ ಅಗೋಚರ ಜ್ಞಾನವನ್ನು ತಿಳಿದವರಿಲ್ಲ. ತಮ್ಮನ್ನು ಯಾವಾಗ ಎಬ್ಬಿಸಲಾಗುವುದೆಂದೂ ಅವರಿಗೆ (ಆ ನಿಮ್ಮ ಆರಾಧ್ಯರಿಗೆ) ತಿಳಿದಿಲ್ಲ.” [ಸೂರ ಅನ್ನಮ್ಲ್:65].

ಉತ್ತರ: 1. ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುವುದು.
2. ಅವನ ಮಲಕ್(ದೇವಚರ)ರಲ್ಲಿ ವಿಶ್ವಾಸವಿಡುವುದು.
3. ಅವನು ಅವತೀರ್ಣಗೊಳಿಸಿದ ಗ್ರಂಥಗಳಲ್ಲಿ ವಿಶ್ವಾಸವಿಡುವುದು.
4. ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು.
5- ಅಂತ್ಯ ದಿನದಲ್ಲಿ ವಿಶ್ವಾಸವಿಡುವುದು.
6. ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ - ವಿಶ್ವಾಸವಿಡುವುದು.
ಇಮಾಂ ಮುಸ್ಲಿಂ ವರದಿ ಮಾಡಿದ ಹದೀಸ್ ಜಿಬ್ರೀಲ್ ಇದಕ್ಕೆ ಪುರಾವೆಯಾಗಿದೆ. ಜಿಬ್ರೀಲರು ಪ್ರವಾದಿﷺ ರೊಡನೆ ಹೇಳಿದರು: "ನನಗೆ ಈಮಾನಿನ ಬಗ್ಗೆ ತಿಳಿಸಿಕೊಡಿ." ಪ್ರವಾದಿ(ಸ) ರವರು ಉತ್ತರಿಸಿದರು: “ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅವನ ಗ್ರಂಥಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ ಅದರ ಒಳಿತು ಮತ್ತು ಕೆಡುಕುಗಳಲ್ಲಿ ವಿಶ್ವಾಸವಿಡುವುದು.”

ಉತ್ತರ: 1. ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುವುದು.
§ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಅನ್ನಾಧಾರ ಒದಗಿಸಿದವನು ಅಲ್ಲಾಹನಾಗಿದ್ದಾನೆ ಮತ್ತು ಅವನು ಸರ್ವ ಜೀವರಾಶಿಗಳ ಮಾಲೀಕ ಮತ್ತು ನಿಯಂತ್ರಕನಾಗಿದ್ದಾನೆಂದು ವಿಶ್ವಾಸವಿಡುವುದು.
§ ಅವನೇ ನೈಜ ಆರಾಧ್ಯ. ಅವನಲ್ಲದೆ ಬೇರೆ ಸತ್ಯವಾದ ಆರಾಧ್ಯರಿಲ್ಲ.
§ ಅವನು ಮಹಾನನು, ಶ್ರೇಷ್ಠನು ಮತ್ತು ಸಂಪೂರ್ಣನು. ಸರ್ವಸ್ತುತಿಗಳು ಅವನಿಗೆ ಮಾತ್ರ ಮೀಸಲು. ಅವನಿಗೆ ಅತ್ಯಂತ ಸುಂದರವಾದ ಹೆಸರುಗಳು ಹಾಗು ಅತ್ಯುತ್ತಮ ಗುಣವಿಶೇಷಣಗಳಿವೆ. ಆತನ ಸರಿಸಾಟಿಯಾಗಿ ಯಾರೂ ಇಲ್ಲ. ಅವನಿಗೆ ಹೋಲಿಕೆಯಾಗಿ ಯಾರೂ ಇಲ್ಲ.
ಮಲಕ್ (ದೇವದೂತ) ಗಳಲ್ಲಿ ವಿಶ್ವಾಸವಿಡುವುದು:
ಅವರು ಸೃಷ್ಟಿಗಳಾಗಿದ್ದಾರೆ. ತನ್ನ ಆರಾಧನೆ ಮಾಡಲು ಮತ್ತು ತನ್ನ ಆಜ್ಞೆಗಳಿಗೆ ಸಂಪೂರ್ಣ ವಿಧೇಯರಾಗಲು ಅಲ್ಲಾಹು ಅವರನ್ನು ಬೆಳಕಿನಿಂದ ಸೃಷ್ಟಿಸಿದನು.
ಅವರ ಪೈಕಿ ಒಬ್ಬರು ಜಿಬ್ರೀಲ್(ಅ). ಅವರು ಪ್ರವಾದಿಗಳಿಗೆ ದಿವ್ಯವಾಣಿಯನ್ನು ತಲುಪಿಸುವ ಕೆಲಸ ಮಾಡುತ್ತಾರೆ.
ಗ್ರಂಥಗಳಲ್ಲಿ ವಿಶ್ವಾಸವಿಡುವುದು:

ಇವು ಅಲ್ಲಾಹು ತನ್ನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ಗ್ರಂಥಗಳು.
ಉದಾ:
ಮುಹಮ್ಮದ್ ﷺ ರಿಗೆ ಅವತೀರ್ಣವಾದ ಪವಿತ್ರ ಕುರ್‌ಆನ್‌.
ಈಸಾ(ಅ) ರಿಗೆ ಅವತೀರ್ಣವಾದ ಇಂಜೀಲ್.
ಮೂಸಾ(ಅ) ರಿಗೆ ಅವತೀರ್ಣವಾದ ತೌರಾತ್.
ದಾವೂದ್(ಅ) ರಿಗೆ ಅವತೀರ್ಣವಾದ ಝಬೂರ್.
ಇಬ್ರಾಹಿಂ(ಅ) ಮತ್ತು ಮೂಸಾ(ಅ) ರಿಗೆ ಅವತೀರ್ಣವಾದ ಕಿರು ಪುಸ್ತಕಗಳು.
ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು:

ಸಂದೇಶವಾಹಕರು ಎಂದರೆ ಅಲ್ಲಾಹು ತನ್ನ ದಾಸರ ಕಡೆಗೆ, ಅವರಿಗೆ ಕಲಿಸಲು, ಒಳಿತು ಮತ್ತು ಸ್ವರ್ಗದ ಶುಭವಾರ್ತೆ ತಿಳಿಸಲು, ಕೆಡುಕು ಮತ್ತು ನರಕದ ಬಗ್ಗೆ ಎಚ್ಚರಿಸಲು ಕಳುಹಿಸಿದವರಾಗಿದ್ದಾರೆ.
ಅವರಲ್ಲಿ ಶ್ರೇಷ್ಠರು ಉಲುಲ್-ಅಝ್ಮ್ ಎಂದು ಕರೆಯಲ್ಪಡುವವರು. ಅವರು:
ನೂಹ್(ಅ).
ಇಬ್ರಾಹೀಂ(ಅ).
ಮೂಸಾ(ಅ).
ಈಸಾ(ಅ).
ಮುಹಮ್ಮದ್ ﷺ.
ಅಂತ್ಯದಿನದಲ್ಲಿ ವಿಶ್ವಾಸವಿಡುವುದು:

ಅಂತ್ಯದಿನದಲ್ಲಿ ವಿಶ್ವಾಸವಿಡುವುದು ಎಂದರೆ ಮರಣಾನಂತರದ ಸಮಾಧಿಯಲ್ಲಿ , ಪುನರುತ್ಥಾನದ ದಿನದಲ್ಲಿ, ಪುನರ್ಜೀವ ಮತ್ತು ವಿಚಾರಣೆಯ ದಿನದಲ್ಲಿ, ಸ್ವರ್ಗದವರು ಸ್ವರ್ಗದಲ್ಲಿ ಮತ್ತು ನರಕದವರು ನರಕದಲ್ಲಿ ನೆಲೆಸುವುದರಲ್ಲಿ ವಿಶ್ವಾಸವಿಡುವುದು.
ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ - ವಿಶ್ವಾಸವಿಡುವುದು.
ವಿಧಿ ಎಂದರೆ ವಿಶ್ವದಲ್ಲಿ ನಡೆಯುವ ಎಲ್ಲವನ್ನೂ ಅಲ್ಲಾಹು ಅರಿಯುತ್ತಾನೆ, ಅವೆಲ್ಲವನ್ನೂ ಅವನು ಲೌಹೆ ಮಹ್ಫೂಝ್ (ಸಂರಕ್ಷಿತ ಫಲಕ) ನಲ್ಲಿ ಬರೆದಿದ್ದಾನೆ ಮತ್ತು ಅವೆಲ್ಲವೂ ಅಸ್ತಿತ್ವಕ್ಕೆ ಬರಬೇಕು ಮತ್ತು ಸೃಷ್ಟಿಸಲ್ಪಡಬೇಕೆಂದು ಅವನು ಬಯಸಿದ್ದಾನೆ ಎಂದು ವಿಶ್ವಾಸವಿಡುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಖಂಡಿತವಾಗಿಯೂ ಪ್ರತಿಯೊಂದು ವಸ್ತುವನ್ನೂ ನಾವು ಒಂದು ನಿರ್ಣಯದ ಪ್ರಕಾರ ಸೃಷ್ಟಿಸಿರುವೆವು.” [ಸೂರ ಅಲ್-ಕಮರ್:49].
ಇದು ನಾಲ್ಕು ಹಂತಗಳನ್ನು ಹೊಂದಿದೆ:

ಮೊದಲನೆಯದು: ಅಲ್ಲಾಹನ ಜ್ಞಾನ. ಎಲ್ಲಾ ವಸ್ತುಗಳ ಬಗ್ಗೆ ಅಲ್ಲಾಹನಿಗಿರುವ ಪೂರ್ವಜ್ಞಾನವು ಇದರಲ್ಲಿ ಒಳಪಡುತ್ತದೆ. ಅವು ಸಂಭವಿಸುವ ಮೊದಲು ಮತ್ತು ಅವು ಸಂಭವಿಸಿದ ನಂತರ ಅಲ್ಲಾಹು ಅವುಗಳ ಬಗ್ಗೆ ಸ್ಪಷ್ಟಜ್ಞಾನವನ್ನು ಹೊಂದಿದ್ದಾನೆ.
ಪುರಾವೆ ಅಲ್ಲಾಹನ ವಚನ:
“ಅಂತ್ಯಘಳಿಗೆಯ ಜ್ಞಾನವಿರುವುದು ಖಂಡಿತವಾಗಿಯೂ ಅಲ್ಲಾಹುವಿನ ಬಳಿಯಲ್ಲಾಗಿದೆ. ಅವನು ಮಳೆಯನ್ನು ಸುರಿಸುವನು. ಅವನು ಗರ್ಭಾಶಯಗಳಲ್ಲಿರುವುದನ್ನು ಅರಿಯುವನು. ತಾನು ನಾಳೆ ಏನು ಮಾಡುವೆನೆಂದು ಯಾರೂ ಅರಿಯಲಾರರು. ತಾನು ಯಾವ ಪ್ರದೇಶದಲ್ಲಿ ಮೃತಪಡುವೆನೆಂದು ಯಾರೂ ಅರಿಯಲಾರರು. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ, ಸೂಕ್ಷ್ಮ ಜ್ಞಾನಿಯೂ ಆಗಿರುವನು.” [ಸೂರ ಲುಕ್ಮಾನ್:34].
ಎರಡನೆಯದು:
ಅಲ್ಲಾಹನು ಅವೆಲ್ಲವನ್ನೂ ಲೌಹೆ ಮಹ್ಫೂಝ್ (ಸಂರಕ್ಷಿತ ಫಲಕ) ದಲ್ಲಿ ದಾಖಲಿಸಿದ್ದಾನೆ. ಆದ್ದರಿಂದ ಸಂಭವಿಸಿದ ಮತ್ತು ಸಂಭವಿಸುವ ಎಲ್ಲವೂ ಅವನ ಬಳಿ ಒಂದು ಗ್ರಂಥದಲ್ಲಿ ದಾಖಲಾಗಿದೆ.
ಪುರಾವೆ ಅಲ್ಲಾಹನ ವಚನ:
“ಅಗೋಚರ ವಿಷಯಗಳ ಖಜಾನೆಗಳಿರುವುದು ಅವನ ಬಳಿಯಲ್ಲಾಗಿವೆ. ಅವನ ಹೊರತು ಅವುಗಳನ್ನು ಯಾರೂ ಅರಿಯಲಾರರು. ನೆಲದಲ್ಲಿ ಮತ್ತು ಸಮುದ್ರದಲ್ಲಿರುವುದನ್ನು ಅವನು ಅರಿಯುವನು. ಅವನು ಅರಿಯುವ ವಿನಾ ಒಂದು ಎಲೆಯೂ ಉದುರದು. ಭೂಮಿಯ ಅಂಧಕಾರಗಳಲ್ಲಿರುವ ಒಂದು ಧಾನ್ಯವಾಗಿರಲಿ, ಹಸಿಯಾಗಿರುವ ಅಥವಾ ಒಣಗಿರುವ ಯಾವುದೇ ವಸ್ತುವಾಗಿರಲಿ ಸ್ಪಷ್ಟವಾದ ಒಂದು ಗ್ರಂಥದಲ್ಲಿ ದಾಖಲಿಸಲ್ಪಡದೆ ಇರಲಾರದು.” [ಸೂರ ಅಲ್-ಅನ್‌ಆಮ್:59].
ಮೂರನೆಯದು:
ಎಲ್ಲವೂ ಅಲ್ಲಾಹನ ಇಚ್ಛೆಯಂತೆ ಸಂಭವಿಸುತ್ತದೆ. ಅವನು ಇಚ್ಛಿಸದೆ ಅವನಿಂದ ಅಥವಾ ಅವನ ಸೃಷ್ಟಿಯಿಂದ ಏನೂ ಸಂಭವಿಸುವುದಿಲ್ಲ.
ಪುರಾವೆ ಅಲ್ಲಾಹನ ವಚನ:
“ಅಂದರೆ ನಿಮ್ಮ ಪೈಕಿ ನೇರವಾಗಿ ನೆಲೆಗೊಳ್ಳಲು ಇಚ್ಛಿಸುವವರಿಗಾಗಿ. ಸರ್ವ ಲೋಕಗಳ ಪ್ರಭುವಾದ ಅಲ್ಲಾಹು ಇಚ್ಛಿಸಿದ ಹೊರತು ನೀವು ಇಚ್ಛಿಸಲಾರಿರಿ.” [ಸೂರ ಅತ್ತಕ್ವೀರ್: 28-29]
ನಾಲ್ಕನೆಯದು: ಈ ಜಗತ್ತಿನಲ್ಲಿರುವ ಎಲ್ಲಾ ಸೃಷ್ಟಿಗಳು ಅಲ್ಲಾಹನ ಸೃಷ್ಟಿಗಳಾಗಿವೆ. ಅಲ್ಲಾಹು ಅವುಗಳ ದೇಹಗಳನ್ನು, ಗುಣಲಕ್ಷಣಗಳನ್ನು, ಚಲನೆಗಳನ್ನು ಮತ್ತು ಅವುಗಳಲ್ಲಿನ ಪ್ರತಿಯೊಂದನ್ನೂ ಅವನೇ ಸೃಷ್ಟಿಸಿದ್ದಾನೆ.
ಪುರಾವೆ ಅಲ್ಲಾಹನ ವಚನ:
“ನಿಮ್ಮನ್ನು ಮತ್ತು ನೀವು ನಿರ್ಮಿಸುತ್ತಿರುವುದನ್ನು ಸೃಷ್ಟಿಸಿದವನು ಅಲ್ಲಾಹುವಾಗಿರುವನು.” [ಸೂರ ಅಸ್ಸಾಫ್ಫಾತ್:96].

ಉತ್ತರ: ಅದು ಸರ್ವಶಕ್ತನಾದ ಅಲ್ಲಾಹನ ವಚನ, ಅದು ಸೃಷ್ಟಿಯಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಬಹುದೇವವಿಶ್ವಾಸಿಗಳ ಪೈಕಿ ಯಾರಾದರೂ ಆಶ್ರಯ ಕೋರಿ ತಮ್ಮ ಬಳಿಗೆ ಬಂದರೆ ಅವನು ಅಲ್ಲಾಹುವಿನ ವಚನವನ್ನು ಆಲಿಸುವುದಕ್ಕಾಗಿ ಅವನಿಗೆ ಆಶ್ರಯವನ್ನು ನೀಡಿರಿ.” [ಸೂರ ಅತ್ತೌಬ:6].

ಉತ್ತರ: ಪ್ರವಾದಿ ಮುಹಮ್ಮದ್ ﷺ ರ ಮಾತುಗಳು, ಕ್ರಿಯೆಗಳು ಮತ್ತು ಮೌನಸಮ್ಮತಿಗಳು, ಜನ್ಮತಃ ಅವರಲ್ಲಿದ್ದ ಸ್ವಭಾವಗಳು ಮತ್ತು ಅವರ ನಡವಳಿಕೆ ವರ್ತನೆಗಳೆಲ್ಲವೂ ಸುನ್ನತ್ ಆಗಿವೆ.

ಉತ್ತರ: ಪ್ರವಾದಿ ﷺ ಮತ್ತು ಅವರ ಸಹಚರರ ಕಾಲದಲ್ಲಿ ಧರ್ಮದಲ್ಲಿಲ್ಲದ, ಮತ್ತು ನಂತರ ಜನರು ಧರ್ಮದಲ್ಲಿ ಹೊಸದಾಗಿ ಆವಿಷ್ಕರಿಸಿದ ವಿಷಯಗಳೆಲ್ಲವೂ ಬಿದ್‌ಅತ್ ಆಗಿವೆ.
* ನಾವು ಅದನ್ನು ಸ್ವೀಕರಿಸುವುದಿಲ್ಲ, ಬದಲಾಗಿ ಅವುಗಳನ್ನು ತಿರಸ್ಕರಿಸುತ್ತೇವೆ.
ಏಕೆಂದರೆ ಪ್ರವಾದಿ ﷺ ರವರು ಹೇಳಿದರು:
"ಎಲ್ಲ ಬಿದ್‌ಅತ್‌ಗಳೂ ಪಥಭ್ರಷ್ಟತೆಗಳಾಗಿವೆ." [ಅಬೂದಾವೂದ್].
ಉದಾಹರಣೆಗೆ:
ಆರಾಧನಾ ಕರ್ಮಗಳಲ್ಲಿ ಹೊಸದನ್ನು ಸೇರಿಸುವುದು. ಅಂದರೆ ವುದೂ ಮಾಡುವಾಗ ನಾಲ್ಕು ಬಾರಿ ತೊಳೆಯುವುದು, ಪ್ರವಾದಿ ﷺ ರವರ ಜನ್ಮದಿನ ಆಚರಿಸುವುದು. ಇದನ್ನು ಪ್ರವಾದಿ ﷺ ರವರಾಗಲಿ ಅವರ ಸಹಚರರಾಗಲಿ ಆಚರಿಸಿಲ್ಲ.

ಉತ್ತರ: ನಿಷ್ಠೆ ಎಂದರೆ ಸತ್ಯವಿಶ್ವಾಸಿಗಳನ್ನು ಪ್ರೀತಿಸುವುದು ಮತ್ತು ಬೆಂಬಲಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಯರು ಪರಸ್ಪರ ಮಿತ್ರರಾಗಿರುವರು.” [ಸೂರ ಅತ್ತೌಬ:71].
ನಿರಾಕರಣೆ ಎಂದರೆ ಸತ್ಯನಿಷೇಧಿಗಳನ್ನು ದ್ವೇಷಿಸುವುದು ಮತ್ತು ವಿರೋಧಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಮಗೆ ಇಬ್ರಾಹೀಮ್ ರಲ್ಲಿ ಮತ್ತು ಅವರ ಜೊತೆಗಿದ್ದವರಲ್ಲಿ ಒಂದು ಉತ್ತಮ ಮಾದರಿಯಿದೆ. ಅವರು ತಮ್ಮ ಜನರೊಂದಿಗೆ ಹೇಳಿದ ಸಂದರ್ಭ: ‘ಖಂಡಿತವಾಗಿಯೂ ನಾವು ನಿಮ್ಮಿಂದ ಮತ್ತು ಅಲ್ಲಾಹುವಿನ ಹೊರತು ನೀವು ಆರಾಧಿಸುತ್ತಿರುವವುಗಳಿಂದ ಸಂಪೂರ್ಣ ವಿಮುಕ್ತರಾಗಿರುವೆವು. ನಾವು ನಿಮ್ಮಲ್ಲಿ ಅವಿಶ್ವಾಸವಿಟ್ಟಿರುವೆವು. ನೀವು ಅಲ್ಲಾಹುವಿನಲ್ಲಿ ಮಾತ್ರ ವಿಶ್ವಾಸವಿಡುವ ತನಕ ಎಂದೆಂದಿಗೂ ನಮ್ಮ ಮತ್ತು ನಿಮ್ಮ ನಡುವೆ ಶತ್ರುತ್ವ ಹಾಗೂ ವಿದ್ವೇಷವು ಬಹಿರಂಗವಾಗಿಬಿಟ್ಟಿದೆ.” [ಸೂರ ಅಲ್-ಮುಮ್ತಹನ:4].

ಉತ್ತರ: ಅಲ್ಲಾಹು ಇಸ್ಲಾಮ್ ಅಲ್ಲದ ಧರ್ಮವನ್ನು ಸ್ವೀಕರಿಸುವುದಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಯಾರಾದರೂ ಇಸ್ಲಾಮ್ ಧರ್ಮಕ್ಕೆ (ಅಲ್ಲಾಹುವಿಗಿರುವ ಶರಣಾಗತಿಗೆ) ಹೊರತಾಗಿರುವುದನ್ನು ಧರ್ಮವಾಗಿ ಅರಸುವುದಾದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು. ಪರಲೋಕದಲ್ಲಿ ಅವನು ನಷ್ಟ ಹೊಂದಿದದವರ ಪೈಕಿ ಸೇರಿದವನಾಗುವನು.” [ಸೂರ ಆಲು ಇಮ್ರಾನ್:85].

ಉತ್ತರ: ಮಾತಿನಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ: ಅಲ್ಲಾಹನನ್ನು ಅಥವಾ ಅವನ ಸಂದೇಶವಾಹಕﷺ ರನ್ನು ನಿಂದಿಸುವುದು.
ಕ್ರಿಯೆಯಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ:
ಕುರ್‌ಆನ್ ಗ್ರಂಥವನ್ನು ಅವಮಾನಿಸುವುದು ಅಥವಾ ಸರ್ವಶಕ್ತನಾದ ಅಲ್ಲಾಹನನ್ನು ಬಿಟ್ಟು ಇತರರಿಗೆ ಸುಜೂದ್ (ಸಾಷ್ಟಾಂಗ ನಮಸ್ಕಾರ) ಮಾಡುವುದು.
ನಂಬಿಕೆಯಿಂದ ಸಂಭವಿಸುತ್ತದೆ ಎಂಬುದಕ್ಕೆ ಉದಾಹರಣೆ ಹೀಗಿದೆ:
ಸರ್ವಶಕ್ತನಾದ ಅಲ್ಲಾಹನಲ್ಲದೆ ಇತರರೂ ಆರಾಧನೆಗೆ ಅರ್ಹರು ಎಂದು ನಂಬುವುದು. ಅಥವಾ ಸರ್ವಶಕ್ತ ಅಲ್ಲಾಹನಲ್ಲದೆ ಬೇರೆ ಸೃಷ್ಟಿಕರ್ತರಿದ್ದಾರೆ ಎಂದು ನಂಬುವುದು.

ಉತ್ತರ:
1. ದೊಡ್ಡ ಕಪಟವಿಶ್ವಾಸ: ಇದು ಸತ್ಯನಿಷೇಧವನ್ನು ಮರೆಮಾಚಿ ಸತ್ಯವಿಶ್ವಾಸವನ್ನು ತೋರ್ಪಡಿಸುವುದು.
ದೊಡ್ಡ ಕಪಟವಿಶ್ವಾಸವಿರುವವನು ಇಸ್ಲಾಮ್ ಧರ್ಮದಿಂದ ಹೊರಹೋಗುತ್ತಾನೆ. ಇದು ದೊಡ್ಡ ಸತ್ಯನಿಷೇಧವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಖಂಡಿತವಾಗಿಯೂ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಮಟ್ಟದಲ್ಲಿರುವರು. ಅವರಿಗೆ ಯಾವುದೇ ಸಹಾಯಕನನ್ನೂ ತಾವು ಕಾಣಲಾರಿರಿ.” [ಸೂರ ಅನ್ನಿಸಾ:145].
2. ಸಣ್ಣ ಕಪಟವಿಶ್ವಾಸ:
ಉದಾಹರಣೆಗೆ: ಸುಳ್ಳು ಹೇಳುವುದು, ಮಾತು ತಪ್ಪಿಸುವುದು ಮತ್ತು ನಂಬಿಕೆದ್ರೋಹ ಮಾಡುವುದು.
ಸಣ್ಣ ಕಪಟವಿಶ್ವಾಸವಿರುವವನು ಇಸ್ಲಾಮ್ ಧರ್ಮದಿಂದ ಹೊರಹೋಗುವುದಿಲ್ಲ. ಅದೊಂದು ಪಾಪವಾಗಿದ್ದು, ಅದನ್ನು ಮಾಡುವವರು ಶಿಕ್ಷೆಗೆ ಅರ್ಹರಾಗುತ್ತಾರೆ.
- ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: "ಕಪಟವಿಶ್ವಾಸಿಗೆ ಮೂರು ಲಕ್ಷಣಗಳಿವೆ: ಬಾಯಿ ತೆರೆದರೆ ಸುಳ್ಳು ಹೇಳುವುದು, ಮಾತು ಕೊಟ್ಟರೆ ವಂಚಿಸುವುದು ಮತ್ತು ನಂಬಿಕೆಯಿಟ್ಟರೆ ನಂಬಿಕೆದ್ರೋಹ ಮಾಡುವುದು." [ಬುಖಾರಿ ಮತ್ತು ಮುಸ್ಲಿಮ್]

ಉತ್ತರ: ಪ್ರವಾದಿ ಮುಹಮ್ಮದ್ ﷺ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹುವಿನ ಸಂದೇಶವಾಹಕರು ಮತ್ತು ಪ್ರವಾದಿಗಳ ಪೈಕಿ ಕಟ್ಟಕಡೆಯವರಾಗಿರುವರು.” [ಸೂರ ಅಲ್-ಅಹ್‌ಝಾಬ್:40]. - ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: "ನಾನು ಪ್ರವಾದಿಗಳ ಮುದ್ರೆಯಾಗಿದ್ದೇನೆ. ನನ್ನ ನಂತರ ಯಾವ ಪ್ರವಾದಿಯೂ ಇಲ್ಲ." [ಅಬು ದಾವೂದ್, ಅತ್ತಿರ್ಮಿದಿ ಹಾಗೂ ಇತರರೂ ವರದಿ ಮಾಡಿದ್ದಾರೆ].

ಉತ್ತರ: ಮುಅಜಿಝ (ಪವಾಡ) ಎಂದರೆ ಅಲ್ಲಾಹು ತನ್ನ ಪ್ರವಾದಿಗಳಿಗೆ ಅವರ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ನೀಡುವ ಅಸಾಮಾನ್ಯ ಸಂಗತಿಗಳು. ಉದಾಹರಣೆಗೆ:
- ಪ್ರವಾದಿ ﷺ ರವರು ಚಂದ್ರನನ್ನು ಎರಡು ಹೋಳು ಮಾಡಿದ ಘಟನೆ.
- ಮೂಸಾ(ಅ)ರಿಗಾಗಿ ಸಮುದ್ರ ಎರಡು ಹೋಳಾಗುವುದು, ಫಿರ್‌ಔನ್ ಮತ್ತು ಅವನ ಸೈನಿಕರನ್ನು ಮುಳುಗಿಸಿ ನಾಶಮಾಡಿದ ಘಟನೆ.

ಉತ್ತರ: ಸಹಾಬಿಗಳು ಎಂದರೆ ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಪ್ರವಾದಿ(ಸ) ರನ್ನು ಭೇಟಿಯಾಗಿ ಇಸ್ಲಾಮ್ ಧರ್ಮದಲ್ಲಿ ಮರಣಹೊಂದಿದವರು.
- ನಾವು ಅವರನ್ನು ಪ್ರೀತಿಸುತ್ತೇವೆ ಮತ್ತು ಅವರನ್ನು ಅನುಸರಿಸುತ್ತೇವೆ. ಅವರು ಪ್ರವಾದಿಗಳ ನಂತರ ಉತ್ತಮ ಮತ್ತು ಶ್ರೇಷ್ಠ ಜನರಾಗಿದ್ದಾರೆ.
ಅವರಲ್ಲಿ ಅತಿಶ್ರೇಷ್ಠರು ನಾಲ್ವರು ಖಲೀಫರು:

ಅಬೂಬಕರ್ رَضِيَ اللَّهُ عَنْهُ.
ಉಮರ್ رَضِيَ اللَّهُ عَنْهُ.
ಉಸ್ಮಾನ್ رَضِيَ اللَّهُ عَنْهُ.
ಅಲಿ رَضِيَ اللَّهُ عَنْهُ.

ಉತ್ತರ: ಅವರು ಪ್ರವಾದಿ ﷺ ರವರ ಪತ್ನಿಯರು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಸತ್ಯವಿಶ್ವಾಸಿಗಳಿಗೆ ಅವರ ಶರೀರಗಳಿಗಿಂತಲೂ ಹೆಚ್ಚು ಆಪ್ತರು ಸಂದೇಶವಾಹಕರಾಗಿರುವರು. ಅವರ ಮಡದಿಯರು ಅವರಿಗೆ ಮಾತೆಯರಾಗಿರುವರು.” [ಸೂರ ಅಲ್-ಅಹ್‌ಝಾಬ್:6].

ಉತ್ತರ: ಅವರನ್ನು ಪ್ರೀತಿಸುಸುವುದು, ಅವರನ್ನು ಅನುಸರಿಸುಸುವುದು ಮತ್ತು ಅವರನ್ನು ದ್ವೇಷಿಸುವವರನ್ನು ದ್ವೇಷಿಸುವುದು. ಅವರ ವಿಷಯದಲ್ಲಿ ಹದ್ದು ಮೀರದಿರುವುದು. ಪ್ರವಾದಿ ಕುಟುಂಬ ಎಂದರೆ ಪ್ರವಾದಿಯ ಮಡದಿಯರು, ಸಂತಾನ ಮತ್ತು ಬನೂ ಹಾಶಿಮ್ ಮತ್ತು ಬನೂ ಮುತ್ತಲಿಬ್ ಬುಡಕಟ್ಟಿಗೆ ಸೇರಿದ ಸತ್ಯವಿಶ್ವಾಸಿಗಳು.

ಉತ್ತರ: ಅವರನ್ನು ಗೌರವಿಸುವುದು, ಅವರಿಗೆ ಅವಿಧೇಯತೆ ತೋರದೆ ಅವರ ಆದೇಶಗಳನ್ನು ಪಾಲಿಸುವುದು, ಅವರ ವಿರುದ್ಧ ದಂಗೆ ಏಳದಿರುವುದು ಮತ್ತು ರಹಸ್ಯವಾಗಿ ಅವರಿಗೋಸ್ಕರ ಪ್ರಾರ್ಥಿಸುವುದು ಹಾಗೂ ಅವರ ಬಗ್ಗೆ ಹಿತಾಕಾಂಕ್ಷೆಯನ್ನು ಹೊಂದಿರುವುದು.

ಉತ್ತರ: ಸ್ವರ್ಗವು ಸತ್ಯವಿಶ್ವಾಸಿಗಳ ವಾಸಸ್ಥಾನವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ಅಲ್ಲಾಹು ಸತ್ಯವಿಶ್ವಾಸವಿಟ್ಟವರನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಮಾಡಿಸುವನು.” [ಸೂರ ಮುಹಮ್ಮದ್:12].

ಉತ್ತರ: ನರಕವು ಸತ್ಯನಿಷೇಧಿಗಳ ವಾಸಸ್ಥಾನವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ -ಅದನ್ನು ಮಾಡಲು ನಿಮಗೆಂದೂ ಸಾಧ್ಯವಾಗದು- ಮನುಷ್ಯರನ್ನು ಮತ್ತು ಕಲ್ಲುಗಳನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ.” [ಸೂರ ಅಲ್-ಬಕರ:24].

ಉತ್ತರ: ಭಯ ಎಂದರೆ ಅಲ್ಲಾಹನನ್ನು ಮತ್ತು ಆತನ ಶಿಕ್ಷೆಯನ್ನು ಭಯಪಡುವುದು.
ನಿರೀಕ್ಷೆ ಎಂದರೆ ಅಲ್ಲಾಹನ ಪ್ರತಿಫಲ, ಕ್ಷಮೆ ಮತ್ತು ಕರುಣೆಯನ್ನು ನಿರೀಕ್ಷಿಸುವುದು.
ಪುರಾವೆ ಅಲ್ಲಾಹನ ವಚನ:
“ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಸ್ವತಃ ತಮ್ಮ ಪ್ರಭುವಿನೆಡೆಗೆ ಹತ್ತಿರವಾಗಲು ಮಾರ್ಗಗಳನ್ನು ಅರಸುತ್ತಿರುವರು. ಅವರ ಪೈಕಿ ಅಲ್ಲಾಹುವಿನೊಂದಿಗೆ ಅತ್ಯಂತ ನಿಕಟವಾಗಿರುವವರು ಸಹ. ಅವರು ಅವನ ದಯೆಯನ್ನು ಆಶಿಸುತ್ತಿರುವರು ಮತ್ತು ಅವನ ಶಿಕ್ಷೆಯನ್ನು ಭಯಪಡುತ್ತಿರುವರು. ಖಂಡಿತವಾಗಿಯೂ ತಮ್ಮ ಪ್ರಭುವಿನ ಶಿಕ್ಷೆಯು ಭಯಪಡಬೇಕಾದುದೇ ಆಗಿದೆ.” [ಸೂರ ಅಲ್-ಇಸ್ರಾ:57]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: (ಓ ಪ್ರವಾದಿಯವರೇ!) ಖಂಡಿತವಾಗಿಯೂ ನಾನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವೆನೆಂದು ನನ್ನ ದಾಸರಿಗೆ ತಿಳಿಸಿಕೊಡಿರಿ. ಖಂಡಿತವಾಗಿಯೂ ನನ್ನ ಶಿಕ್ಷೆಯು ಅತ್ಯಧಿಕ ಯಾತನೆಯಿರುವ ಶಿಕ್ಷೆಯೆಂದೂ (ತಿಳಿಸಿಕೊಡಿರಿ).” [ಸೂರ ಅಲ್-ಹಿಜ್ರ್: 49-50]

ಉತ್ತರ: ಅಲ್ಲಾಹ್, ಅರ್‍ರಬ್ಬ್, ಅರ್‍ರಹ್ಮಾನ್, ಅಸ್ಸಮೀಅ್, ಅಲ್-ಬಸ್ವೀರ್, ಅಲ್-ಅಲೀಮ್, ಅರ್‍ರಝ್ಝಾಕ್, ಅಲ್-ಹಯ್, ಅಲ್-ಅಝೀಮ್ ಮುಂತಾದವುಗಳು ಅಲ್ಲಾಹನ ಅತ್ಯಂತ ಸುಂದರವಾದ ಹೆಸರುಗಳು ಮತ್ತು ಉನ್ನತ ಗುಣಲಕ್ಷಣಗಳಾಗಿವೆ.

ಉತ್ತರ: ಅಲ್ಲಾಹ್ ಎಂದರೆ ನೈಜ ಆರಾಧ್ಯ. ಏಕೈಕನು ಮತ್ತು ಸಹಭಾಗಿಯಿಲ್ಲದವನು.
ಅರ್‍ರಬ್ಬ್ ಎಂದರೆ ಸೃಷ್ಟಿಕರ್ತ, ಮಾಲೀಕ, ಅನ್ನಾದಾರ ಒದಗಿಸುವವ ಮತ್ತು ನಿಯಂತ್ರಕ.
ಅಸ್ಸಮೀಅ್ ಎಂದರೆ ಎಲ್ಲವನ್ನೂ ಕೇಳುವವನು. ಎಲ್ಲಾ ವಿಭಿನ್ನ ಮತ್ತು ವೈವಿಧ್ಯಮಯ ಧ್ವನಿಗಳನ್ನು ಆಲಿಸುವವನು.
ಅಲ್-ಬಸ್ವೀರ್ ಎಂದರೆ ಎಲ್ಲವನ್ನೂ ನೋಡುವವನು. ಚಿಕ್ಕ ಮತ್ತು ದೊಡ್ಡದಾದ ಎಲ್ಲವನ್ನೂ ನೋಡುವವನು.
ಅಲ್-ಅಲೀಮ್ ಎಂದರೆ ಭೂತ, ವರ್ತಮಾನ ಮತ್ತು ಭವಿಷ್ಯ ಸೇರಿದಂತೆ ಎಲ್ಲವನ್ನೂ ತಿಳಿದಿರುವ ಸರ್ವಜ್ಞನು.
ಅರ್‍ರಹ್ಮಾನ್ ಎಂದರೆ ಪ್ರತಿಯೊಂದು ಜೀವಿಗೂ ಕರುಣೆ ತೋರುವವನು. ಎಲ್ಲಾ ಮನುಷ್ಯರು ಮತ್ತು ಇತರ ಸೃಷ್ಟಿಗಳು ಅವನ ಕರುಣೆಯಲ್ಲಿ ಒಳಪಡುತ್ತಾರೆ.
ಅರ್‍ರಝ್ಝಾಕ್ ಎಂದರೆ ಮನುಷ್ಯರು, ಜಿನ್ನ್ ಮತ್ತು ಇತರೆಲ್ಲಾ ಜೀವಿಗಳು ಸೇರಿದಂತೆ ಎಲ್ಲರಿಗೂ ಆಹಾರವನ್ನು ಒದಗಿಸುವವನು.
ಅಲ್-ಹಯ್ಯ್ ಎಂದರೆ ಎಂದಿಗೂ ಸಾಯದೆ ಸದಾ ಜೀವಂತವಾಗಿರುವವನು. ಆದರೆ ಸೃಷ್ಟಿಗಳೆಲ್ಲವೂ ಒಂದಲ್ಲ ಒಂದು ದಿನ ಮರಣಹೊಂದಲಿವೆ.
ಅಲ್-ಅಝೀಮ್ ಎಂದರೆ ತನ್ನ ನಾಮ, ಗುಣಲಕ್ಷಣಗಳು ಮತ್ತು ಕ್ರಿಯೆಗಳಲ್ಲಿ ಸಂಪೂರ್ಣತೆಯನ್ನು ಮತ್ತು ಶ್ರೇಷ್ಠತೆಯನ್ನು ಹೊಂದಿರುವವನು.

ಉತ್ತರ: ಅವರನ್ನು ಪ್ರೀತಿಸುವುದು, ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮತ್ತು ಸಮಸ್ಯೆಗಳಲ್ಲಿ ಅವರನ್ನು ಅವಲಂಬಿಸುವುದು ಮತ್ತು ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುವುದು. ಅವರನ್ನು ಕೆಟ್ಟದಾಗಿ ಚಿತ್ರಿಸುವವರು ಸತ್ಯಮಾರ್ಗದಿಂದ ವಿಚಲಿತರಾದವರಾಗಿದ್ದಾರೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಮ್ಮ ಪೈಕಿ ವಿಶ್ವಾಸವಿಟ್ಟವರನ್ನು ಮತ್ತು ಜ್ಞಾನ ನೀಡಲಾದವರನ್ನು ಅಲ್ಲಾಹು ಹಲವು ಪದವಿಗಳಿಗೆ ಏರಿಸುವನು. ಅಲ್ಲಾಹು ನೀವು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಅರಿಯುವವನಾಗಿರುವನು.” [ಸೂರ ಅಲ್-ಮುಜಾದಿಲ:11].

ಉತ್ತರ: ಅವರು ಭಯಭಕ್ತಿಯಿರುವ ಸತ್ಯವಿಶ್ವಾಸಿಗಳು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಅರಿಯಿರಿ! ಖಂಡಿತವಾಗಿಯೂ ಅಲ್ಲಾಹುವಿನ ಮಿತ್ರರು ಯಾರೋ ಅವರಿಗೆ ಯಾವುದೇ ಭಯವಿಲ್ಲ. ಅವರು ದುಃಖಿಸಬೇಕಾಗಿಯೂ ಬರದು. ಅವರು ವಿಶ್ವಾಸವಿಟ್ಟವರೂ ಭಯಭಕ್ತಿ ಪಾಲಿಸುವವರೂ ಆಗಿರುವರು.” [ಸೂರ ಯೂನುಸ್: 62-63]

ಉತ್ತರ: ಈಮಾನ್ ಎಂದರೆ ಮಾತು, ಕ್ರಿಯೆ ಮತ್ತು ವಿಶ್ವಾಸವಾಗಿದೆ.

ಉತ್ತರ: ಈಮಾನ್ ವಿಧೇಯತೆಯೊಂದಿಗೆ ಹೆಚ್ಚಾಗುತ್ತದೆ ಮತ್ತು ಅವಿಧೇಯತೆಯೊಂದಿಗೆ ಕಡಿಮೆಯಾಗುತ್ತದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಅಲ್ಲಾಹುವಿನ ಬಗ್ಗೆ ಪ್ರಸ್ತಾಪಿಸಲಾಗುವಾಗ ಹೃದಯಗಳು ಭಯದಿಂದ ನಡುಗುವವರು, ಅವನ ದೃಷ್ಟಾಂತಗಳನ್ನು ಓದಿಕೊಡಲಾದಾಗ ವಿಶ್ವಾಸವು ಅಧಿಕಗೊಳ್ಳುವವರು ಮತ್ತು ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು ಮಾತ್ರ ಸತ್ಯವಿಶ್ವಾಸಿಗಳಾಗಿರುವರು.” [ಸೂರ ಅಲ್-ಅನ್ಫಾಲ್:2].

ಉತ್ತರ: ನೀವು ಅಲ್ಲಾಹುವನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡದಿದ್ದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂದು ಭಾವಿಸಿ ಆರಾಧಿಸುವುದು.

ಉತ್ತರ: ಕರ್ಮಗಳು ಈ ಎರಡು ಷರತ್ತುಗಳನ್ನು ಪೂರೈಸಿದರೆ:
1. ಅದು ಸಂಪೂರ್ಣವಾಗಿ ಸರ್ವಶಕ್ತನಾದ ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಮಾಡಿದ ಕರ್ಮವಾಗಿರಬೇಕು.
2- ಅದು ಪ್ರವಾದಿ ﷺ ರವರ ಸುನ್ನತ್‌ ಪ್ರಕಾರವಿರಬೇಕು.

ಉತ್ತರ: ಅದು ಪ್ರಯೋಜನಗಳನ್ನು ಪಡೆಯಲು ಮತ್ತು ಹಾನಿಯನ್ನು ತಡೆಗಟ್ಟಲು ಸರ್ವಶಕ್ತನಾದ ಅಲ್ಲಾಹನ ಮೇಲೆ ಅವಲಂಬಿತವಾಗುವುದು.ಆದರೆ ಅದರೊಂದಿಗೆ ಕಾರ್ಯಕಾರಣಗಳನ್ನು ಕೂಡ ನಿರ್ವಹಿಸಬೇಕು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಯಾರಾದರೂ ಅಲ್ಲಾಹು ವಿನ ಮೇಲೆ ಭರವಸೆಯಿಡುವುದಾದರೆ ಅವನಿಗೆ ಅಲ್ಲಾಹು ಸಾಕು.” [ಸೂರ ಅತ್ತಲಾಕ್:3].
'ಹಸ್ಬುಹು' ಅಂದರೆ ಅವನು ಸಾಕು ಎಂದರ್ಥ.

ಉತ್ತರ: ಒಳ್ಳೆಯದನ್ನು ಆದೇಶಿಸುವುದು ಎಂದರೆ ಅಲ್ಲಾಹನಿಗೆ ವಿಧೇಯತೆ ತೋರುವಂತಹ ಕರ್ಮಗಳೆಲ್ಲವನ್ನೂ ಆದೇಶಿಸುವುದು. ಕೆಟ್ಟದ್ದನ್ನು ವಿರೋಧಿಸುವುದು ಎಂದರೆ ಅಲ್ಲಾಹನಿಗೆ ಅವಿಧೇಯತೆ ತೋರುವಂತಹ ಕರ್ಮಗಳೆಲ್ಲವನ್ನೂ ವಿರೋಧಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನೀವು ಮನುಕುಲಕ್ಕಾಗಿ ಹೊರತರಲಾಗಿರುವ ಉತ್ತಮ ಸಮುದಾಯವಾಗಿರುವಿರಿ. ನೀವು ಸದಾಚಾರವನ್ನು ಆದೇಶಿಸುತ್ತಿರುವಿರಿ, ದುರಾಚಾರವನ್ನು ವಿರೋಧಿಸುತ್ತಿರುವಿರಿ ಮತ್ತು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವಿರಿ.” [ಸೂರ ಆಲು ಇಮ್ರಾನ್:110].

ಉತ್ತರ: ಅಹ್ಲು-ಸ್ಸುನ್ನ ವಲ್-ಜಮಾಅ ಎಂದರೆ ಮಾತು, ಕ್ರಿಯೆ ಮತ್ತು ವಿಶ್ವಾಸದಲ್ಲಿ ಪ್ರವಾದಿﷺ ರವರು ಮತ್ತು ಅವರ ಸಂಗಡಿಗರು ಚಲಿಸಿದ ಮಾರ್ಗದಲ್ಲೇ ಚಲಿಸುವವರು.
ಅವರನ್ನು ಅಹ್ಲುಸ್ಸುನ್ನ ಎಂದು ಕರೆಯುವುದು ಏಕೆಂದರೆ ಅವರು ಪ್ರವಾದಿಯ ﷺ ಸುನ್ನತ್ ಅನ್ನು ಅನುಸರಿಸಿ ಬಿದ್‌ಅತ್‌ಗಳನ್ನು ತ್ಯಜಿಸುವುದರಿಂದ.
ಅಲ್ ಜಮಾಅ ಎಂದು ಕರೆಯುವುದು ಏಕೆಂದರೆ ಅವರು ಸತ್ಯದ ಆಧಾರದಲ್ಲಿ ಒಗ್ಗಟ್ಟಾಗಿದ್ದರು. ಅವರು ಹಲವು ಗುಂಪುಗಳಾಗಿ ವಿಭಜನೆಯಾಗಲಿಲ್ಲ.