ಸಮ್ಮಿಶ್ರ ವಿಷಯಗಳ ವಿಭಾಗ
ಉತ್ತರ:
1. ವಾಜಿಬ್ (ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯ): ಉದಾಹರಣೆಗೆ ಐದು ವೇಳೆಯ ನಮಾಝ್, ರಮದಾನ್ ಉಪವಾಸ ಮತ್ತು ಮಾತಾಪಿತರಿಗೆ ಒಳಿತು ಮಾಡುವುದು.
- ವಾಜಿಬ್ ಕಾರ್ಯ ಮಾಡುವವನಿಗೆ ಪ್ರತಿಫಲವಿದೆ ಮತ್ತು ತೊರೆಯುವವನಿಗೆ ಶಿಕ್ಷೆಯಿದೆ.
2. ಮುಸ್ತಹಬ್ಬ್ (ಕಡ್ಡಾಯವಲ್ಲದ ಅಪೇಕ್ಷಣೀಯ ಕಾರ್ಯ): ಉದಾಹರಣೆಗೆ, ರವಾತಿಬ್ ಸುನ್ನತ್ ನಮಾಝ್, ರಾತ್ರಿ ನಮಾಝ್, ಅನ್ನದಾನ ಮಾಡುವುದು, ಸಲಾಂ ಹೇಳುವುದು.
- ಮುಸ್ತಹಬ್ಬ್ ಕಾರ್ಯ ಮಾಡುವವನಿಗೆ ಪ್ರತಿಫಲವಿದೆ ಮತ್ತು ತೊರೆಯುವವನಿಗೆ ಶಿಕ್ಷೆಯಿಲ್ಲ.
ಪ್ರಮುಖ ಸೂಚನೆ:
ಒಂದು ಕಾರ್ಯವು ಸುನ್ನತ್ ಅಥವಾ ಮುಸ್ತಹಬ್ಬ್ ಎಂದು ತಿಳಿದರೆ ಮುಸಲ್ಮಾನನು (ಅದನ್ನು ತೊರೆಯದೆ) ಪ್ರವಾದಿ(ಸ) ರನ್ನು ಅನುಸರಿಸುತ್ತಾ ಅದನ್ನು ಮಾಡಲು ಆತುರಪಡಬೇಕು.
3. ಮುಹರ್‍ರಮ್ (ನಿಷೇಧಿತ ಕಾರ್ಯ): ಉದಾಹರಣೆಗೆ, ಮದ್ಯಪಾನ ಮಾಡುವುದು, ಮಾತಾಪಿತರೊಡನೆ ಕೆಟ್ಟದಾಗಿ ವರ್ತಿಸುವುದು ಮತ್ತು ಕುಟುಂಬ ಸಂಬಂಧವನ್ನು ಕಡಿಯುವುದು.
- ಮುಹರ್‍ರಮ್ ಕಾರ್ಯ ಮಾಡುವವನಿಗೆ ಶಿಕ್ಷೆ ಮತ್ತು ತೊರೆಯುವವನಿಗೆ ಪ್ರತಿಫಲವಿದೆ.
4. ಮಕ್ರೂಹ್ (ಅಸಹ್ಯಕರ ಕಾರ್ಯ): ಉದಾಹರಣೆಗೆ, ಎಡಗೈಯಲ್ಲಿ ಕೊಡುವುದು ಮತ್ತು ಪಡೆಯುವುದು, ನಮಾಝ್‌ನಲ್ಲಿ ಬಟ್ಟೆ ಮಡಚುವುದು.
- ಮಕ್ರೂಹ್ ಕಾರ್ಯ ತೊರೆಯುವವನಿಗೆ ಪ್ರತಿಫಲವಿದೆ ಮತ್ತು ಮಾಡುವವನಿಗೆ ಶಿಕ್ಷೆಯಿಲ್ಲ.
5. ಮುಬಾಹ್ (ಸಮ್ಮತಾರ್ಹ ಕಾರ್ಯ): ಉದಾಹರಣೆಗೆ, ಸೇಬು ತಿನ್ನುವುದು, ಚಹಾ ಕುಡಿಯುವುದು. ಇದನ್ನು ಜಾಇಝ್ ಮತ್ತು ಹಲಾಲ್ ಎಂದು ಕೂಡ ಹೇಳಲಾಗುತ್ತದೆ.
- ಮುಬಾಹ್ ತೊರೆಯುವವನಿಗೆ ಪ್ರತಿಫಲವಿಲ್ಲ ಮತ್ತು ಮಾಡುವವನಿಗೆ ಶಿಕ್ಷೆಯಿಲ್ಲ.
ಉತ್ತರ:
1. ವಂಚನೆ: ಸರಕುಗಳ ನ್ಯೂನತೆಯನ್ನು ಮರೆಮಾಚುವುದು ಇದರಲ್ಲಿ ಒಳಪಡುತ್ತದೆ.
ಅಬೂ ಹುರೈರ(ರ) ರಿಂದ ವರದಿ. ಒಮ್ಮೆ ಪ್ರವಾದಿಯವರು(ಸ) ಆಹಾರ ಧಾನ್ಯದ ರಾಶಿಯ ಬಳಿಯಿಂದ ಹಾದುಹೋಗುತ್ತಿದ್ದಾಗ, ಅದರೊಳಗೆ ಕೈ ತೂರಿಸಿದರು. ಆಗ ಅವರ ಬೆರಳುಗಳು ಒದ್ದೆಯಾದವು. ಅವರು ಕೇಳಿದರು: “ಓ ಆಹಾರ ಧಾನ್ಯ ಮಾರುವವನೇ, ಇದೇನು?” ಆತ ಹೇಳಿದ: “ಓ ಅಲ್ಲಾಹನ ಸಂದೇಶವಾಹಕರೇ, ಮಳೆ ಬಂದು ಒದ್ದೆಯಾಗಿದೆ.” ಅವರು ಹೇಳಿದರು: “ಜನರು ಕಾಣುವಂತೆ ಅದನ್ನು ನೀನು ರಾಶಿಯ ಮೇಲ್ಭಾಗದಲ್ಲಿ ಏಕೆ ಹಾಕಲಿಲ್ಲ? ವಂಚನೆ ಮಾಡುವವನು ನಮ್ಮಲ್ಲಿ ಸೇರಿದವನಲ್ಲ.” [ಮುಸ್ಲಿಮ್].
2. ಬಡ್ಡಿ: ಉದಾಹರಣೆಗೆ, ಎರಡು ಸಾವಿರ ರೂಪಾಯಿ ಕೊಡುತ್ತೇನೆಂದು ಹೇಳಿ ಒಂದು ಸಾವಿರ ರೂಪಾಯಿ ಸಾಲ ಪಡೆಯುವುದು.
ಹೆಚ್ಚಾಗಿ ಕೊಡುವ ರೂಪಾಯಿಗಳು ನಿಷೇಧಿತ ಬಡ್ಡಿಯಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಆದರೆ ಅಲ್ಲಾಹನು ವ್ಯಾಪಾರವನ್ನು ಅನುಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ.” [ಸೂರ ಅಲ್-ಬಕರ:275].
3. ಮೋಸ ಮತ್ತು ಅಜ್ಞಾನ: ಉದಾಹರಣೆಗೆ, ಕುರಿಯ ಕೆಚ್ಚಲಲ್ಲಿರುವ ಹಾಲನ್ನು ಮಾರಾಟ ಮಾಡುವುದು, ಅಥವಾ ನೀರಿನಲ್ಲಿರುವ ಮೀನುಗಳನ್ನು ಅವುಗಳನ್ನು ಹಿಡಿಯುವ ಮೊದಲೇ ಮಾರಾಟ ಮಾಡುವುದು.
ಹದೀಸಿನಲ್ಲಿ ಹೀಗಿದೆ: “ಮೋಸದ ವ್ಯಾಪಾರವನ್ನು ಪ್ರವಾದಿಯವರು(ಸ) ನಿಷೇಧಿಸಿದ್ದಾರೆ.” [ಮುಸ್ಲಿಮ್].
ಉತ್ತರ: 1. ನಿನಗೆ ಅಲ್ಲಾಹನು ಇಸ್ಲಾಂ ಧರ್ಮವನ್ನು ದಯಪಾಲಿಸಿರುವ ಮತ್ತು ನೀನು ಸತ್ಯನಿಷೇಧಿಗಳಲ್ಲಿ ಇಲ್ಲದಿರುವ ಅನುಗ್ರಹ.
2. ನೀನು ಸುನ್ನತ್ ಪಾಲಿಸುವವನಾಗಿರುವೆ ಮತ್ತು ನೂತನವಾದಿಯಲ್ಲದಿರುವ ಅನುಗ್ರಹ.
3. ಕೇಳುವ, ನೋಡುವ, ನಡೆಯುವ ಮುಂತಾದ ಆರೋಗ್ಯದ ಅನುಗ್ರಹ.
4. ಆಹಾರ, ಪಾನೀಯ, ಬಟ್ಟೆ-ಬರೆ ಮುಂತಾದಗಳ ಅನುಗ್ರಹ.
ಅಲ್ಲಾಹು ನಿನಗೆ ನೀಡಿದ ಅನುಗ್ರಹಗಳು ಅಸಂಖ್ಯವಾಗಿದ್ದು ಅವುಗಳನ್ನು ಎಣಿಸಲು ಸಾಧ್ಯವಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸುವುದಾದರೆ ಅವುಗಳನ್ನು ಎಣಿಕೆ ಮಾಡಲು ನಿಮ್ಮಿಂದ ಸಾಧ್ಯವಾಗದು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.” [ಸೂರ ಅನ್ನಹ್ಲ್:18]
ಉತ್ತರ: ಈದುಲ್ ಫಿತ್ರ್ (ರಂಜಾನ್) ಮತ್ತು ಈದುಲ್ ಅದ್‌ಹಾ (ಬಕ್ರೀದ್).
- ಅನಸ್(ರ) ರವರ ಹದೀಸಿನಲ್ಲಿ ಹೀಗಿದೆ: ಪ್ರವಾದಿ(ಸ) ರವರು ಮದೀನಕ್ಕೆ ಬಂದಾಗ ಅಲ್ಲಿನ ಜನರು ವರ್ಷದ ಎರಡು ದಿನಗಳಲ್ಲಿ ಆಟವಾಡುವುದನ್ನು ಕಂಡರು. ಅವರು ಕೇಳಿದರು: “ಈ ಎರಡು ದಿನಗಳ ವಿಶೇಷತೆಯೇನು?” ಜನರು ಉತ್ತರಿಸಿದರು: “ನಾವು ಅಜ್ಞಾನಕಾಲದಿಂದಲೇ ಈ ಎರಡು ದಿನಗಳಲ್ಲಿ ಆಟವಾಡುತ್ತಿದ್ದೇವೆ.” ಆಗ ಪ್ರವಾದಿ(ಸ) ರವರು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಈ ಎರಡು ದಿನಗಳ ಬದಲು ಬೇರೆ ಎರಡು ದಿನಗಳನ್ನು ನೀಡಿದ್ದಾನೆ: ಈದುಲ್ ಅದ್‌ಹಾ ಮತ್ತು ಈದುಲ್ ಫಿತ್ರ್.” [ಅಬೂದಾವೂದ್].
ಈ ಎರಡು ಹಬ್ಬಗಳ ಹೊರತಾದ ಹಬ್ಬಗಳೆಲ್ಲವೂ ಬಿದ್‌ಅತ್(ನವೀನಾಚಾರ) ಆಗಿವೆ.
1. ಕೆಡುಕಿಗೆ ಪ್ರೇರೇಪಿಸುವ ಮನಸ್ಸು: ಅಂದರೆ ಮನುಷ್ಯನ ಮನಸ್ಸು ಮತ್ತು ಮೋಹವು ಸರ್ವಶಕ್ತನಾದ ಅಲ್ಲಾಹನಿಗೆ ಅವಿಧೇಯತೆ ತೋರಲು ಪ್ರೇರೇಪಿಸುವುದನ್ನು ಅನುಸರಿಸುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ಮನಸ್ಸು ದುಷ್ಕರ್ಮವನ್ನು ಪ್ರೇರೇಪಿಸುತ್ತಲೇ ಇರುವಂತದ್ದಾಗಿದೆ. ನನ್ನ ರಬ್ಬ್‌ನ ಕರುಣೆಗೆ ಪಾತ್ರವಾದ ಮನಸ್ಸಿನ ಹೊರತು. ಖಂಡಿತವಾಗಿಯೂ ನನ್ನ ರಬ್ಬ್ ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.” [ಸೂರ ಯೂಸುಫ್:53] 2. ಶೈತಾನ್: ಶೈತಾನ್ ಮನುಷ್ಯನ ಶತ್ರು. ಮನುಷ್ಯನನ್ನು ದಾರಿ ತಪ್ಪಿಸುವುದು ಮತ್ತು ಕೆಡುಕುಗಳನ್ನು ಮಾಡುವಂತೆ ದುರ್ಬೋಧನೆ ಮಾಡಿ ನರಕವಾಸಿಯಾಗುವಂತೆ ಮಾಡುವುದು ಅವನ ಗುರಿಯಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.” [ಸೂರ ಅಲ್-ಬಕರ:168]. 3. ಕೆಟ್ಟ ಸಂಗಡಿಗರು: ಅಂದರೆ ಕೆಡುಕನ್ನು ಆದೇಶಿಸುವವರು ಮತ್ತು ಒಳಿತನ್ನು ವಿರೋಧಿಸುವವರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅವರು ಆತ್ಮೀಯ ಮಿತ್ರರು ಪರಸ್ಪರ ಶತ್ರುಗಳಾಗುವರು; ಭಯಭಕ್ತಿಯಿಂದ ಜೀವಿಸುವವರ ಹೊರತು.” [ಸೂರ ಅಝ್ಝುಖ್ರುಫ್: 67]
ಉತ್ತರ: 1. ಪಾಪವನ್ನು ತ್ಯಜಿಸುವುದು.
2. ಆಗಿ ಹೋದದ್ದಕ್ಕೆ ವಿಷಾದಿಸುವುದು.
3. ಅದನ್ನು ಮುಂದುವರಿಸುವುದಿಲ್ಲವೆಂದು ದೃಢ ನಿರ್ಧಾರ ತಳೆಯುವುದು.
4. ಜನರ ಹಕ್ಕುಗಳನ್ನು ಅವರಿಗೆ ಮರಳಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಏನಾದರೂ ನೀಚಕೃತ್ಯವನ್ನು ಮಾಡಿದರೆ ಅಥವಾ ಸ್ವತಃ ತಮ್ಮೊಂದಿಗೇ ಅನ್ಯಾಯವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆ ಬೇಡುವವರಿಗೆ. ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವನು ಇನ್ನಾರಿರುವನು? ತಿಳಿದವರಾಗಿದ್ದೂ ಸಹ ತಾವು ಮಾಡಿದ (ನೀಚ)ಕೃತ್ಯಗಳಲ್ಲಿ ಅವರು ಅಚಲರಾಗಿ ನಿಲ್ಲಲಾರರು.” [ಸೂರ ಆಲು ಇಮ್ರಾನ್:135].