ಪ್ರಾರ್ಥನೆ ಮತ್ತು ದಿಕ್ರ್‌ಗಳ ವಿಭಾಗ
ಉತ್ತರ: (ಅಲ್ಲಾಹುಮ್ಮ ಲಕಲ್ ಹಮ್ದು ಅನ್ತ ಕಸೌತನೀಹಿ, ಅಸ್‌ಅಲುಕ ಖೈರಹು ವಖೈರ ಮಾ ಸುನಿಅ ಲಹು, ವಅಊದು ಬಿಕ ಮಿನ್ ಶರ್‍ರಿಹೀ ವಶರ್‍ರಿ ಮಾ ಸುನಿಅ ಲಹು) “ಓ ಅಲ್ಲಾಹ್! ನಿನಗೆ ಸ್ತುತಿ, ಈ ಉಡುಪನ್ನು ನೀನು ನನಗೆ ಉಡಿಸಿರುವೆ, ಇದರ ಒಳಿತನ್ನು ಮತ್ತು ಇದು ನಿರ್ಮಿಸಲ್ಪಟ್ಟುದರ ಒಳಿತನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ, ಮತ್ತು ಇದರ ಕೆಡುಕಿನಿಂದ ಮತ್ತು ಇದು ನಿರ್ಮಿಸಲ್ಪಟ್ಟುದರ ಕೆಡುಕಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ.” [ಅಬೂದಾವೂದ್ ಮತ್ತು ತಿರ್ಮಿದಿ].
ಉತ್ತರ: (ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹು, ವಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು) “ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲವೆಂದೂ ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆಂದೂ ನಾನು ಸಾಕ್ಷ್ಯವಹಿಸುತ್ತೇನೆ. ಮುಹಮ್ಮದ್ ಅವನ ದಾಸರೂ ಸಂದೇಶವಾಹಕರೂ ಆಗಿದ್ದಾರೆಂದೂ ನಾನು ಸಾಕ್ಷ್ಯವಹಿಸುತ್ತೇನೆ.” [ಮುಸ್ಲಿಮ್].
ಉತ್ತರ: ಪ್ರವಾದಿ(ಸ) ರವರ ಮೇಲೆ ಸ್ವಲಾತ್ (ದರೂದ್) ಪಠಿಸಬೇಕು. [ಮುಸ್ಲಿಮ್]. ನಂತರ ಹೀಗೆ ಹೇಳಬೇಕು: (ಅಲ್ಲಾಹುಮ್ಮ ರಬ್ಬ ಹಾದಿಹಿ ದ್ದಅ್‌ವತಿ ತ್ತಾಮ್ಮ, ವಸ್ಸಲಾತಿಲ್ ಕಾಇಮ, ಆತಿ ಮುಹಮ್ಮದನಿಲ್ ವಸೀಲತ ವಲ್ ಫದೀಲತ, ವಬ್‌ಅಸ್‌ಹು ಮಕಾಮನ್ ಮಹ್ಮೂದನಿಲ್ಲದೀ ವಅದ್‌ತಹು) “ಓ ಅಲ್ಲಾಹ್! ಈ ಪರಿಪೂರ್ಣವಾದ ಕರೆಯ ಮತ್ತು ಸಂಸ್ಥಾಪಿಸಲ್ಪಡುವ ನಮಾಝ್‌ನ ಒಡೆಯನೇ! ನೀನು ಮುಹಮ್ಮದ್(ಸ)ರಿಗೆ ವಸೀಲ ಮತ್ತು ಫದೀಲಗಳನ್ನು ನೀಡು. ಮತ್ತು ನೀನು ನೀಡಿದ ವಾಗ್ದಾನದಂತೆ ಅವರನ್ನು ಮಕಾಮ್ ಮಹ್ಮೂದ್‌ಗೆ ಕಳುಹಿಸು.” [ಬುಖಾರಿ].
ಅದಾನ್ ಮತ್ತು ಇಕಾಮತ್‌ಗಳ ಮಧ್ಯೆ ಸ್ವಂತಕ್ಕಾಗಿ ಪ್ರಾರ್ಥಿಸಬೇಕು. ಏಕೆಂದರೆ ಆ ಸಮಯದ ಪ್ರಾರ್ಥನೆ ತಿರಸ್ಕೃತವಾಗುವುದಿಲ್ಲ.
ಉತ್ತರ: 1- ಆಯತುಲ್-ಕುರ್ಸಿ ಪಠಿಸಬೇಕು. ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್, ಲಾ ತಅ್‌ಖುದುಹೂ ಸಿನತುನ್ ವಲಾ ನೌಮ್, ಲಹೂ ಮಾ ಫಿ ಸ್ಸಮಾವಾತಿ ವಮಾ ಫಿಲ್ ಅರ್ದ್, ಮನ್ ದಲ್ಲದೀ ಯಶ್‍ಫಉ ಇನ್ದಹೂ ಇಲ್ಲಾ ಬಿಇದ್‍ನಿಹ್, ಯಅ್‌ಲಮು ಮಾ ಬೈನ ಐದೀಹಿಮ್ ವಮಾ ಖಲ್ಫಹುಮ್ ವಲಾ ಯುಹೀತೂನ ಬಿಶೈಇನ್ ಮಿನ್ ಇಲ್ಮಿಹೀ ಇಲ್ಲಾ ಬಿಮಾ ಶಾಅ್, ವಸಿಅ ಕುರ್ಸಿಯ್ಯುಹು ಸ್ಸಮಾವಾತಿ ವಲ್ ಅರ್ದ ವಲಾ ಯಊದುಹೂ ಹಿಫ್‌ಝುಹುಮಾ, ವಹುವಲ್ ಅಲಿಯ್ಯುಲ್ ಅಝೀಮ್” “ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಎಂದೆಂದಿಗೂ ಜೀವಿಸಿರುವವನೂ ಎಲ್ಲವನ್ನೂ ನಿಯಂತ್ರಿಸುವವನೂ ಆಗಿರುವನು. ತೂಕಡಿಕೆಯಾಗಲಿ, ನಿದ್ರೆಯಾಗಲಿ ಅವನನ್ನು ಬಾಧಿಸದು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದಾಗಿವೆ. ಅವನ ಅನುಮತಿಯ ವಿನಾ ಅವನ ಬಳಿ ಶಿಫಾರಸು ಮಾಡುವವನು ಯಾರಿರುವನು? ಅವರ ಮುಂದಿರುವುದನ್ನೂ, ಅವರ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸಿರುವುದನ್ನಲ್ಲದೆ (ಬೇರೇನನ್ನೂ) ಸೂಕ್ಷ್ಮವಾಗಿ ಅರಿಯಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಆಕಾಶಗಳನ್ನು ಮತ್ತು ಭೂಮಿಯನ್ನು ಆವರಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನಿಗೆ ಕಿಂಚಿತ್ತೂ ಭಾರವಿರುವುದಲ್ಲ. ಅವನು ಉನ್ನತನೂ, ಮಹಾನನೂ ಆಗಿರುವನು.” [ಸೂರ ಅಲ್-ಬಕರ:255]. 2- ನಂತರ ಇದನ್ನು ಪಠಿಸಬೇಕು ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ : ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ. ಹೇಳಿರಿ- ಅವನು ಅಲ್ಲಾಹನು ಏಕೈಕನು. ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ. ಅವನಿಗೆ ಸರಿಸಮಾನರು ಯಾರೂ ಇಲ್ಲ. ಮೂರು ಸಲ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ. ಹೇಳಿರಿ- ನಾನು ಪ್ರಭಾತದ ಪ್ರಭುವಿನ ಅಭಯ ಯಾಚಿಸುತ್ತೇನೆ. ಅವನು (ಅಲ್ಲಾಹನು) ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ. ಇರುಳಿನ ಅಂಧಕಾರವು ಕವಿದಾಗ ಉಂಟಾಗುವ ಕೇಡಿನಿಂದ. ಗಂಟುಗಳ ಮೇಲೆ ಊದುವವರ (ಸ್ತ್ರೀಯರ) ಕೇಡಿನಿಂದ. ಮತ್ತು ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ (ಅಭಯ ಯಾಚಿಸುತ್ತೇನೆ). ಮೂರು ಸಲ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ. ಹೇಳಿರಿ- ನಾನು ಮಾನವರ ಪ್ರಭುವಿನ ಅಭಯ ಯಾಚಿಸುತ್ತೇನೆ. ಮಾನವರ ಸಾಮ್ರಾಟನ ಮಾನವರ ನೈಜ ಆರಾಧ್ಯನ ಪದೇಪದೇ ಬಂದು ದುಷ್ಪ್ರೇರಣೆ ನೀಡುವವನ ಕೇಡಿನಿಂದ ಜನರ ಮನಸ್ಸುಗಳಲ್ಲಿ ದುಷ್ಪ್ರೇರಣೆ ಉಂಟು ಮಾಡುವವನ ಕೇಡಿನಿಂದ ಅವನು ಜಿನ್ನ್‌ಗಳ ಪೈಕಿಯಾಗಿರಲಿ, ಮಾನವರ ಪೈಕಿಯಾಗಿರಲಿ. ಮೂರು ಸಲ 3. “ಅಲ್ಲಾಹುಮ್ಮ ಅನ್ತ ರಬ್ಬೀ ಲಾ ಇಲಾಹ ಇಲ್ಲಾ ಅನ್ತ ಖಲಕ್ತನೀ ವಅನ ಅಬ್ದುಕ, ವಅನ ಅಲಾ ಅಹ್ದಿಕ ವವಅ್‌ದಿಕ ಮಸ್ತತಅ್‌ತು, ಅಊದು ಬಿಕ ಮಿನ್ ಶರ್‍ರಿ ಮಾ ಸನಅ್‌ತು, ಅಬೂಉ ಲಕ ಬಿನಿಅ್‌ಮತಿಕ ಅಲಯ್ಯ, ವಅಬೂಉ ಬಿದಮ್ಬೀ ಫಗ್‍ಫಿರ್ ಲೀ ಫಇನ್ನಹೂ ಲಾ ಯಗ್ಫಿರು ದ್ದುನೂಬ ಇಲ್ಲಾ ಅನ್ತ್.” (ಅರ್ಥ: ಓ ಅಲ್ಲಾಹ್! ನೀನು ನನ್ನ ರಬ್ಬ್. ನಿನ್ನ ಹೊರತು ಅನ್ಯ ಆರಾಧ್ಯರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ. ನಾನು ನಿನ್ನ ದಾಸ. ನನಗೆ ಸಾಧ್ಯವಾಗುವ ಮಟ್ಟಿಗೆ ನಾನು ನಿನ್ನ ಕರಾರು ಮತ್ತು ವಾಗ್ದಾನವನ್ನು ಪಾಲಿಸುತ್ತಿದ್ದೇನೆ. ನಾನು ಮಾಡಿದ ಕರ್ಮಗಳ ಕೆಡುಕಿನಿಂದ ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನೀನು ನನಗೆ ಅನುಗ್ರಹಿಸಿದ ಅನುಗ್ರಹಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ನನ್ನ ಪಾಪವನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಆದುದರಿಂದ ನನ್ನನ್ನು ಕ್ಷಮಿಸು. ಖಂಡಿತವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ.) [ಬುಖಾರಿ].
ಉತ್ತರ: “ಸುಬ್‌ಹಾನಕಲ್ಲಾಹುಮ್ಮ ವಬಿಹಮ್ದಿಕ, ಅಶ್‌ಹದು ಅನ್ ಲಾ ಇಲಾಹ ಇಲ್ಲಾ ಅನ್ತ, ಅಸ್ತಗ್ಫಿರುಕ ವಅತೂಬು ಇಲೈಕ್.” (ಓ ಅಲ್ಲಾಹನೇ, ನೀನು ಪರಮಪಾವನನು. ನಿನಗೆ ಸ್ತುತಿ. ನಿನ್ನ ಹೊರತು ಅನ್ಯ ನೈಜ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುತ್ತೇನೆ.) [ಅಬೂದಾವೂದ್, ತಿರ್ಮಿದಿ ಹಾಗೂ ಇತರರು].
ಉತ್ತರ: (ಬಿಸ್ಮಿಲ್ಲಾಹಿ, ವಲ್‌ಹಮ್ದುಲಿಲ್ಲಾಹಿ, ಸುಬ್‌ಹಾನಲ್ಲದೀ ಸಖ್ಖರ ಲನಾ ಹಾದಾ ವಮಾ ಕುನ್ನಾ ಲಹೂ ಮುಕ್ರಿನೀನ್, ವಇನ್ನಾ ಇಲಾ ರಬ್ಬಿನಾ ಲಮುನ್ಕಲಿಬೂನ್, ಅಲ್‌ಹಮ್ದುಲಿಲ್ಲಾಹಿ, ಅಲ್‌ಹಮ್ದುಲಿಲ್ಲಾಹಿ, ಅಲ್‌ಹಮ್ದುಲಿಲ್ಲಾಹಿ, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಸುಬ್‌ಹಾನಕಲ್ಲಾಹುಮ್ಮ ಇನ್ನೀ ದಲಮ್ತು ನಫ್ಸೀ ಫಗ್‌ಫಿರ್ ಲೀ ಫಇನ್ನಹೂ ಲಾ ಯಗ್ಫಿರು ದ್ದುನೂಬ ಇಲ್ಲಾ ಅನ್ತ್)
“ಅಲ್ಲಾಹನ ನಾಮದಿಂದ, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಇದನ್ನು ನಮಗೆ ಆಧೀನಗೊಳಿಸಿಕೊಟ್ಟವನು ಪರಮಪಾವನನು, ನಾವು ಇದರ ನಿಯಂತ್ರಕರಾಗಿರಲಿಲ್ಲ. ಮತ್ತು ನಾವು ನಮ್ಮ ರಬ್ಬಿನೆಡೆಗೆ ಮರಳುವವರಾಗಿದ್ದೇವೆ. ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಅಲ್ಲಾಹು ಮಹಾನನು, ಅಲ್ಲಾಹು ಮಹಾನನು, ಅಲ್ಲಾಹು ಮಹಾನನು, ಪರಮಪಾವನನಾಗಿರುವ ಓ ಅಲ್ಲಾಹ್! ನಾನು ನನ್ನ ಶರೀರದ ಮೇಲೆ ಅನ್ಯಾಯವೆಸಗಿರುವೆನು. ಆದ್ದರಿಂದ ನನಗೆ ಕ್ಷಮಿಸು. ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಾರೂ ಇಲ್ಲ.” [ಅಬೂದಾವೂದ್ ಮತ್ತು ತಿರ್ಮಿದಿ].
ಉತ್ತರ: (ಅಲ್ಲಾಹು ಅಕ್ಬರ್ (ಮೂರು ಬಾರಿ), ಸುಬ್‌ಹಾನಲ್ಲದೀ ಸಖ್ಖರ ಲನಾ ಹಾದಾ ವಮಾ ಕುನ್ನಾ ಲಹೂ ಮುಕ್ರಿನೀನ್, ವಇನ್ನಾ ಇಲಾ ರಬ್ಬಿನಾ ಲಮುನ್ಕಲಿಬೂನ್, ಅಲ್ಲಾಹುಮ್ಮ ಇನ್ನಾ ನಸ್‌ಅಲುಕ ಫೀ ಸಫರಿನಾ ಹಾದಲ್ ಬಿರ‍್ರ ವತ್ತಕ್ವಾ ವಮಿನಲ್ ಅಮಲಿ ಮಾ ತರ್ದಾ, ಅಲ್ಲಾಹುಮ್ಮ ಹವ್ವಿನ್ ಅಲೈನಾ ಸಫರನಾ ಹಾದಾ, ವತ್ವಿ ಅನ್ನಾ ಬುಅದಹೂ, ಅಲ್ಲಾಹುಮ್ಮ ಅನ್ತ ಸ್ಸಾಹಿಬು ಫಿ ಸ್ಸಫರಿ ವಲ್‌ಖಲೀಫತು ಫಿಲ್ ಅಹ್ಲಿ, ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ವಅಸಾಇ ಸ್ಸಫರಿ ವಕಆಬತಿಲ್ ಮನ್ದರಿ ವಸೂಇಲ್ ಮುನ್ಕಲಬಿ ಫಿಲ್ ಮಾಲಿ ವಲ್‌ಅಹ್ಲ್)
“ಅಲ್ಲಾಹು ಮಹಾನನು. ಇದನ್ನು ನಮಗೆ ಆಧೀನಗೊಳಿಸಿಕೊಟ್ಟವನು ಪರಮಪಾವನನು, ನಾವು ಇದರ ನಿಯಂತ್ರಕರಾಗಿರಲಿಲ್ಲ. ಮತ್ತು ನಾವು ನಮ್ಮ ರಬ್ಬಿನೆಡೆಗೆ ಮರಳುವವರಾಗಿದ್ದೇವೆ. ಓ ಅಲ್ಲಾಹ್! ನಮ್ಮ ಈ ಯಾತ್ರೆಯಲ್ಲಿ ಒಳಿತನ್ನು, ಭಯಭಕ್ತಿಯನ್ನು ಮತ್ತು ಕರ್ಮಗಳಲ್ಲಿ ನೀನು ತೃಪ್ತಿಪಡುವುದನ್ನು ನಾವು ನಿನ್ನೊಂದಿಗೆ ಬೇಡುತ್ತಿದ್ದೇವೆ. ಓ ಅಲ್ಲಾಹ್! ನಮಗೆ ಈ ಯಾತ್ರೆಯನ್ನು ಸುಲಭೀಕರಿಸು ಮತ್ತು ಇದರ ದೂರವನ್ನು ನಮಗೆ ಕಿರಿದಾಗಿಸು. ಓ ಅಲ್ಲಾಹ್! ಯಾತ್ರೆಯಲ್ಲಿ ನೀನು ಜೊತೆಗಾರನಾಗಿರುವೆ ಮತ್ತು (ನಾನು ಬಿಟ್ಟು ಬಂದ) ಕುಟುಂಬದ ಉತ್ತರಾಧಿಕಾರಿಯಾಗಿರುವೆ. ಓ ಅಲ್ಲಾಹ್! ಯಾತ್ರೆಯ ಸಂಕಷ್ಟಗಳಿಂದ, ನೋಟದ ವ್ಯಾಕುಲತೆಯಿಂದ ಮತ್ತು ಸಂಪತ್ತು ಹಾಗೂ ಕುಟುಂಬದಲ್ಲಿ ಕೆಟ್ಟ ಪರಿಣಾಮಗಳಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತಿದ್ದೇನೆ.”
ಹಿಂದಿರುಗಿ ಬರುವಾಗ ಇದರ ಕೊನೆಯಲ್ಲಿ ಕೆಳಗಿನ ಪ್ರಾರ್ಥನೆಯನ್ನು ಸೇರಿಸಿ ಹೇಳಬೇಕು:
(ಆಯಿಬೂನ ತಾಇಬೂನ ಆಬಿದೂನ ಲಿರಬ್ಬಿನಾ ಹಾಮಿದೂನ್)
“ನಾವು ಮರಳುತ್ತಿದ್ದೇವೆ, ಪಶ್ಚಾತ್ತಾಪ ಪಡುತ್ತಿದ್ದೇವೆ, ಆರಾಧಿಸುತ್ತಿದ್ದೇವೆ ಮತ್ತು ನಮ್ಮ ರಬ್ಬಿಗೆ ನಾವು ಸ್ತುತಿ ಅರ್ಪಿಸುತ್ತಿದ್ದೇವೆ.” [ಮುಸ್ಲಿಮ್].
ಉತ್ತರ: “ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ಯುಹ್ಯೀ ವಯುಮೀತು, ವಹುವ ಹಯ್ಯುನ್ ಲಾ ಯಮೂತ್, ಬಿಯದಿಹಿಲ್ ಖೈರ್, ವಹುವ ಅಲಾ ಕುಲ್ಲಿ ಶೈಇನ್ ಕದೀರ್.” (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ, ಸ್ತುತಿ ಅಲ್ಲಾಹನಿಗೆ, ಅಲ್ಲಾಹು ಮಹಾನನಾಗಿದ್ದಾನೆ. ಅಲ್ಲಾಹನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನೂ ಸಹಭಾಗಿರಹಿತನೂ ಆಗಿದ್ದಾನೆ, ಆಧಿಪತ್ಯವು ಅವನದಾಗಿದೆ ಮತ್ತು ಸ್ತುತಿಯು ಅವನಿಗಾಗಿದೆ, ಅವನು ಎಂದೆಂದಿಗೂ ಜೀವಿಸುವವನು ಮತ್ತು ಎಂದಿಗೂ ಸಾಯದವನು, ಒಳಿತೆಲ್ಲವೂ ಅವನ ಕೈಯಲ್ಲಿದೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.) [ತಿರ್ಮಿದಿ ಮತ್ತು ಇಬ್ನ್ ಮಾಜ].
ಉತ್ತರ: (ಅಲ್ಲಾಹುಮ್ಮ ಸಲ್ಲಿ ಅಲಾ ಮುಹಮ್ಮದಿನ್ ವಅಲಾ ಆಲಿ ಮುಹಮ್ಮದಿನ್ ಕಮಾ ಸಲ್ಲೈತ ಅಲಾ ಇಬ್ರಾಹೀಮ ವಅಲಾ ಆಲಿ ಇಬ್ರಾಹೀಮ ಇನ್ನಕ ಹಮೀದುನ್ ಮಜೀದ್, ಅಲ್ಲಾಹುಮ್ಮ ಬಾರಿಕ್ ಅಲಾ ಮುಹಮ್ಮದಿನ್ ವಅಲಾ ಆಲಿ ಮುಹಮ್ಮದಿನ್ ಕಮಾ ಬಾರಕ್ತ ಅಲಾ ಇಬ್ರಾಹೀಮ ವಅಲಾ ಆಲಿ ಇಬ್ರಾಹೀಮ ಇನ್ನಕ ಹಮೀದುನ್ ಮಜೀದ್) “ಓ ಅಲ್ಲಾಹ್! ನೀನು ಇಬ್ರಾಹೀಮ್‌ರವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಕೃಪೆ ವರ್ಷಿಸಿದಂತೆ ಮುಹಮ್ಮದ್‌ರವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಕೃಪೆ ವರ್ಷಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಪ್ರಶಂಸನೀಯನೂ ಆಗಿರುವೆ. ಓ ಅಲ್ಲಾಹ್! ನೀನು ಇಬ್ರಾಹೀಮ್‌ರವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಬರಕತ್ ಸುರಿಸಿದಂತೆ ಮುಹಮ್ಮದ್‌ರವರ ಮೇಲೆ ಮತ್ತು ಅವರ ಕುಟುಂಬದವರ ಮೇಲೆ ಬರಕತ್ ಸುರಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಪ್ರಶಂಸನೀಯನೂ ಆಗಿರುವೆ.” (ಮುತ್ತಫಕುನ್ ಅಲೈಹಿ).