ಇಸ್ಲಾಮೀ ಶಿಷ್ಟಾಚಾರದ ವಿಭಾಗ

ಉತ್ತರ: 1. ಸರ್ವಶಕ್ತನಾದ ಅಲ್ಲಾಹನನ್ನು ಗೌರವಿಸುವುದು.
2. ಯಾವುದೇ ಸಹಭಾಗಿಗಳಿಲ್ಲದ ಅವನನ್ನು ಮಾತ್ರ ಆರಾಧಿಸುವುದು.
3- ಅವನ ಆಜ್ಞೆಗಳನ್ನು ಅನುಸರಿಸುವುದು.
4- ಅವನ ಆಜ್ಞೆಗಳನ್ನು ಉಲ್ಲಂಘಿಸದಿರುವುದು.
5- ಅವನ ಅಸಂಖ್ಯ ಅನುಗ್ರಹ ಮತ್ತು ವರದಾನಗಳಿಗಾಗಿ ಅವನಿಗೆ ಕೃತಜ್ಞತೆ ಸಲ್ಲಿಸುವುದು ಮತ್ತು ಸ್ತುತಿಸುವುದು.
6- ಅವನ ನಿರ್ಣಯಗಳ (ವಿಧಿ) ಬಗ್ಗೆ ತಾಳ್ಮೆ ವಹಿಸುವುದು.

ಉತ್ತರ: 1- ಅವರನ್ನು ಅನುಸರಿಸುವುದು ಮತ್ತು ಅನುಕರಿಸುವುದು.
2- ಅವರ ಆಜ್ಞೆಗಳನ್ನು ಅನುಸರಿಸುವುದು.
3- ಅವರ ಆಜ್ಞೆಗಳನ್ನು ಉಲ್ಲಂಘಿಸದಿರುವುದು.
4- ಅವರು ತಿಳಿಸಿಕೊಟ್ಟದ್ದರಲ್ಲಿ ವಿಶ್ವಾಸವಿಡುವುದು.
5- ಅವರ ಸುನ್ನತ್‌ಗೆ ಹೊಸ ಆವಿಷ್ಕಾರಗಳನ್ನು ಸೇರಿಸದಿರುವುದು.
6- ಸ್ವಂತ ದೇಹಕ್ಕಿಂತ ಮತ್ತು ಇತರೆಲ್ಲಾ ಜನರಿಗಿಂತ ಅವರನ್ನು ಹೆಚ್ಚು ಪ್ರೀತಿಸುವುದು.
7- ಅವರನ್ನು ಗೌರವಿಸುವುದು ಮತ್ತು ಅವರನ್ನು ಹಾಗೂ ಅವರ ಸುನ್ನತ್ತನ್ನು ಬೆಂಬಲಿಸುವುದು.

ಉತ್ತರ: 1- ಅಲ್ಲಾಹನ ಆಜ್ಞೋಲ್ಲಂಘನೆಯಾಗದ ರೀತಿಯಲ್ಲಿ ಮಾತಾಪಿತರನ್ನು ಅನುಸರಿಸುವುದು.
2- ಮಾತಾಪಿತರ ಸೇವೆ ಮಾಡುವುದು.
3- ಮಾತಾಪಿತರಿಗೆ ಸಹಾಯ ಮಾಡುವುದು.
4- ಮಾತಾಪಿತರ ಅಗತ್ಯಗಳನ್ನು ಪೂರೈಸುವುದು.
5- ಮಾತಾಪಿತರಿಗಾಗಿ ಪ್ರಾರ್ಥಿಸುವುದು.
6- ಅವರೊಂದಿಗೆ ಮರ್ಯಾದೆಯಿಂದ ಮಾತನಾಡುವುದು, ಅವರ ಮುಂದೆ ಕನಿಷ್ಠ "ಛೇ" ಎಂಬ ಪದವನ್ನು ಕೂಡ ಬಳಸದಿರುವುದು.
7- ಮಾತಾಪಿತರ ಮುಖ ನೋಡಿ ಮಂದಹಾಸ ಬೀರುವುದು. ಅವರ ಮುಂದೆ ಮುಖವನ್ನು ಗಂಟಿಕ್ಕಬಾರದು.
8- ಮಾತಾಪಿತರ ಧ್ವನಿಗಿಂತ ದೊಡ್ಡ ಧ್ವನಿಯಲ್ಲಿ ಮಾತನಾಡಬಾರದು. ಅವರ ಮಾತನ್ನು ಗಮನವಿಟ್ಟು ಕೇಳಬೇಕು. ಅವರ ಮಾತುಗಳಿಗೆ ಅಡ್ಡಿಪಡಿಸಬಾರದು. ಅವರ ಹೆಸರಿನಿಂದ ಅವರನ್ನು ಕರೆಯಬಾರದು. ಬದಲಾಗಿ ಅಪ್ಪ ಅಮ್ಮ ಎಂದು ಕರೆಯುವುದು.
9- ತಂದೆ ಮತ್ತು ತಾಯಿ ಕೋಣೆಯಲ್ಲಿರುವಾಗ ಅವರ ಅನುಮತಿ ಪಡೆದು ಪ್ರವೇಶಿಸುವುದು.
10- ಮಾತಾಪಿತರ ಕೈ ಮತ್ತು ತಲೆಗಳನ್ನು ಚುಂಬಿಸುವುದು.

ಉತ್ತರ: 1- ಸಹೋದರ, ಸಹೋದರಿ, ಚಿಕ್ಕಪ್ಪ, ಚಿಕ್ಕಮ್ಮ, ಸೋದರ ಮಾವ, ಸೋದರತ್ತೆ ಹಾಗೂ ಇತರ ಸಂಬಂಧಿಕರನ್ನು ಭೇಟಿ ಮಾಡುವುದು.
2- ಮಾತು ಮತ್ತು ಕ್ರಿಯೆಗಳ ಮೂಲಕ ಅವರಿಗೆ ಒಳಿತು ಮತ್ತು ಸಹಾಯ ಮಾಡುವುದು.
3- ಅವರನ್ನು ಸಂಪರ್ಕಿಸುವುದು ಮತ್ತು ಅವರ ಯೋಗಕ್ಷೇಮ ವಿಚಾರಿಸುವುದು.

ಉತ್ತರ: 1- ಒಳ್ಳೆಯ ಜನರನ್ನು ಪ್ರೀತಿಸುವುದು ಮತ್ತು ಅವರೊಂದಿಗೆ ಗೆಳೆತನ ಮಾಡುವುದು.
2- ಕೆಟ್ಟ ಜನರಿಂದ ದೂರವಾಗುವುದು ಮತ್ತು ಅವರ ಗೆಳೆತನವನ್ನು ಬಿಡುವುದು.
3- ಮುಸ್ಲಿಂ ಸಹೋದರರಿಗೆ ಸಲಾಂ ಹೇಳುವುದು ಮತ್ತು ಹಸ್ತಲಾಘವ ಮಾಡುವುದು.
4- ಅವರು ರೋಗಿಯಾದರೆ ಸಂದರ್ಶಿಸುವುದು ಮತ್ತು ಅವರು ಗುಣಮುಖರಾಗಲು ಪ್ರಾರ್ಥಿಸುವುದು.
5- ಸೀನಿದವನಿಗೆ ಯರ್ಹಮುಕಲ್ಲಾಹ್ ಎಂದು ಹೇಳುವುದು.
6- ಅವನನ್ನು ಭೇಟಿ ಮಾಡಲು ಆಮಂತ್ರಿಸಿದರೆ ಆಮಂತ್ರಣವನ್ನು ಸ್ವೀಕರಿಸುವುದು.
7- ಅವನಿಗೆ ಹಿತವಚನ ನೀಡುವುದು.
8- ಅವನು ಅನ್ಯಾಯಕ್ಕೆ ಒಳಗಾದರೆ ಅವನಿಗೆ ಸಹಾಯ ಮಾಡುವುದು ಮತ್ತು ಅವನು ಅನ್ಯಾಯ ಮಾಡದಂತೆ ತಡೆಯುವುದು.
10- ತನಗಾಗಿ ಬಯಸುವುದನ್ನು ಮುಸ್ಲಿಂ ಸಹೋದರನಿಗೂ ಬಯಸುವುದು.
11- ಅವನಿಗೆ ನನ್ನ ಸಹಾಯ ಬೇಕಾದರೆ ಸಹಾಯ ಮಾಡುವುದು.
12- ಮಾತು ಅಥವಾ ಕ್ರಿಯೆಯಿಂದ ಅವನನ್ನು ನೋಯಿಸದಿರುವುದು.
13- ಅವನ ರಹಸ್ಯವನ್ನು ಮುಚ್ಚಿಡುವುದು.
14- ಅವನನ್ನು ಗದರಿಸದಿರುವುದು, ದೂಷಿಸದಿರುವುದು, ಕೀಳಾಗಿಸದಿರುವುದು, ಅಸೂಯೆ ಪಡದಿರುವುದು, ಅವನ ರಹಸ್ಯಗಳನ್ನು ಅನ್ವೇಷಿಸದಿರುವುದು ಮತ್ತು ಅವನನ್ನು ವಂಚಿಸದಿರುವುದು.

ಉತ್ತರ: 1- ಮಾತು ಮತ್ತು ಕ್ರಿಯೆಯ ಮೂಲಕ ನೆರೆಹೊರೆಯವರಿಗೆ ಒಳಿತನ್ನು ಮಾಡುವುದು ಮತ್ತು ಅವರಿಗೆ ಸಹಾಯ ಬೇಕಾದರೆ ಸಹಾಯ ಮಾಡುವುದು.
2- ಹಬ್ಬ, ಮದುವೆ ಅಥವಾ ಇನ್ನೇನಾದರೂ ಸಂತೋಷದಲ್ಲಿದ್ದರೆ ಅವರನ್ನು ಅಭಿನಂದಿಸುವುದು.
3- ಅವರು ರೋಗಿಯಾದರೆ ಸಂದರ್ಶಿಸುವುದು ಮತ್ತು ಅವರಿಗೆ ನೋವುಂಟಾದರೆ ಸಾಂತ್ವನ ಹೇಳುವುದು.
4- ಮನೆಯಲ್ಲಿ ಆಹಾರ ತಯಾರಿಸುವಾಗ ಸಾಧ್ಯವಾದರೆ ಅವರಿಗೂ ಆಹಾರ ನೀಡುವುದು.
5- ಮಾತು ಅಥವಾ ಕ್ರಿಯೆಯಿಂದ ಅವನನ್ನು ನೋಯಿಸದಿರುವುದು.
6- ದೊಡ್ಡ ಧ್ವನಿಯಿಂದ ಅವನಿಗೆ ತೊಂದರೆ ಕೊಡದಿರುವುದು, ಅಥವಾ ಅವನ ಮೇಲೆ ಬೇಹುಗಾರಿಕೆ ಮಾಡದಿರುವುದು, ಮತ್ತು ಅವನ ಬಗ್ಗೆ ತಾಳ್ಮೆ ವಹಿಸುವುದು.

ಉತ್ತರ: 1- ಆತಿಥ್ಯಕ್ಕೆ ಆಮಂತ್ರಿಸಲಾದರೆ ಸ್ವೀಕರಿಸುವುದು.
2- ಯಾರನ್ನಾದರೂ ಭೇಟಿಯಾಗುವುದಾದರೆ, ಅನುಮತಿ ಮತ್ತು ಸಮಯವನ್ನು ಕೇಳುವುದು.
3- ಪ್ರವೇಶಿಸುವ ಮೊದಲು ಅನುಮತಿ ಕೇಳುವುದು.
4- ಭೇಟಿಯ ಸಂದರ್ಭ ದೀರ್ಘ ಹೊತ್ತು ತಂಗದಿರುವುದು.
5- ಅತಿಥಿಯ ಮನೆಯವರ ಕಡೆ ಕಣ್ಣು ಹಾಯಿಸದಿರುವುದು.
6- ಅತಿಥಿಯನ್ನು ಮಂದಹಾಸದ ಮುಖದಿಂದ ಉತ್ತಮ ರೀತಿಯಲ್ಲಿ ಸ್ವಾಗತಿಸುವುದು.
7- ಅತಿಥಿಯನ್ನು ಉತ್ತಮ ಸ್ಥಳದಲ್ಲಿ ಕೂರಿಸುವುದು.
8- ಆಹಾರ ಮತ್ತು ಪಾನೀಯಗಳನ್ನು ನೀಡಿ ಅತಿಥಿಯನ್ನು ಗೌರವಿಸುವುದು.

ಉತ್ತರ- 1- ನೋವು ಅನುಭವವಾಗುವ ಸ್ಥಳದಲ್ಲಿ ಬಲಗೈಯನ್ನಿಟ್ಟು ಮೂರು ಬಾರಿ ಬಿಸ್ಮಿಲ್ಲಾ ಪಠಿಸುವುದು ನಂತರ ಏಳು ಬಾರಿ "ಅವೂದು
ಬಿಇಜ್ಜತಿಲ್ಲಾಹಿ ವ ಖುದ್ರತಿಹಿ ಮಿನ್ ಶರ್ರಿ ಮಾ ಅಜಿದು ವ ಉಹಾದಿರು" ಎಂದು ಹೇಳುವುದು. ಅಂದರೆ "ನಾನು ಅನುಭವಿಸುವುದರಿಂದ ಮತ್ತು ಭಯಪಡುವುದರಿಂದ ಅಲ್ಲಾಹನ ಪ್ರತಾಪ ಮತ್ತು ಶಕ್ತಿಯಲ್ಲಿ ಅಭಯ ಯಾಚಿಸುತ್ತೇನೆ"
2- ಅಲ್ಲಾಹನ ವಿಧಿಯಲ್ಲಿ ಸಂತೃಪ್ತನಾಗುವುದು ಮತ್ತು ತಾಳ್ಮೆ ವಹಿಸುವುದು.
3- ಅನಾರೋಗ್ಯ ಪೀಡಿತ ಸಹೋದರನನ್ನು ಸಂದರ್ಶಿಸಲು ಆತುರಪಡುವುದು ಮತ್ತು ಅವನಿಗಾಗಿ ಪ್ರಾರ್ಥಿಸುವುದು. ನಂದರ್ಶನದ ವೇಳೆ ಬಹಳ ಹೊತ್ತು ಅಲ್ಲಿ ಕುಳಿತುಕೊಳ್ಳದಿರುವುದು.
4- ಅವನು ವಿನಂತಿಸದಿದ್ದರೂ ಅವನಿಗಾಗಿ ಮಂತ್ರಿಸುವುದು.
5- ಅವನಿಗೆ ತಾಳ್ಮೆಯಿಂದಿರಲು ಮತ್ತು ಪ್ರಾರ್ಥಿಸಲು, ನಮಾಝ್ ನಿರ್ವಹಿಸಲು ಮತ್ತು ಸಾಧ್ಯವಾದಷ್ಟು ಶುದ್ದಿಯಲ್ಲಿರಲು ಸಲಹೆ ನೀಡುವುದು.
6- ರೋಗಿಗಳಿಗಾಗಿ ಹೀಗೆ ಪ್ರಾರ್ಥಿಸುವುದು:ಅಸ್ಅಲುಲ್ಲಾಹಲ್ ಅದೀಮ್ ರಬ್ಬಲ್ ಅರ್ಶಿಲ್ ಅದೀಮ್ ಅಯ್ ಯಶ್ಫಿಯಕ್" ಅಂದರೆ "ನಿಮ್ಮನ್ನು ಗುಣಪಡಿಸಲೆಂದು ಸರ್ವಶಕ್ತನಾದ ಅಲ್ಲಾಹನಲ್ಲಿ, ಮಹಾ ಸಿಂಹಾಸನದ ಒಡೆಯನಲ್ಲಿ ಬೇಡುತ್ತೇನೆ." (ಏಳು ಬಾರಿ)

ಉತ್ತರ: 1- ಉದ್ದೇಶವನ್ನು ಸರ್ವಶಕ್ತನಾದ ಅಲ್ಲಾಹನಿಗೆ ನಿಷ್ಕಳಂಕಗೊಳಿಸುವುದು.
2- ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು.
3- ಶಿಕ್ಷಕರನ್ನು ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲಿ ಗೌರವಿಸುವುದು.
4- ಅವರ ಮುಂದೆ ವಿನಯದಿಂದ ಕುಳಿತುಕೊಳ್ಳುವುದು.
5- ಅವರ ಮಾತನ್ನು ಕಿವಿಗೊಟ್ಟು ಕೇಳುವುದು ಮತ್ತು ಪಾಠದ ಮಧ್ಯೆ ಅಡ್ಡಿಪಡಿಸದಿರುವುದು.
6- ಸಭ್ಯವಾಗಿ ಪ್ರಶ್ನೆಗಳನ್ನು ಕೇಳುವುದು.
7- ಅವರನ್ನು ಹೆಸರಿನಿಂದ ಕರೆಯದಿರುವುದು.

ಉತ್ತರ: 1- ಸಭೆಯಲ್ಲಿರುವವರಿಗೆ ಸಲಾಂ ಹೇಳುವುದು.
2- ಸಭೆಯ ಕೊನೆಯಲ್ಲಿ ಖಾಲಿ ಸ್ಥಳದಲ್ಲಿ ಕುಳಿತುಕೊಳ್ಳುವುದು. ಯಾರನ್ನೂ ಅವರ ಸ್ಥಳದಿಂದ ಎಬ್ಬಿಸದಿರುವುದು ಅಥವಾ ಇಬ್ಬರ ನಡುವೆ ಅವರ ಅನುಮತಿಯಿಲ್ಲದೆ ಕುಳಿತುಕೊಳ್ಳದಿರುವುದು.
3- ಇತರರು ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿಕೊಡುವುದು.
4- ಇತರರ ಮಾತಿಗೆ ಅಡ್ಡಿಪಡಿಸದಿರುವುದು.
5- ಸಭೆಯಿಂದ ಹೊರಡುವಾಗ ಸಲಾಂ ಹೇಳಿ ಅನುಮತಿ ಪಡೆಯುವುದು.
6- ಸಭೆ ಮುಗಿದಾಗ ಸಭೆಯ ಪ್ರಾಯಶ್ಚಿತ್ತದ ಪ್ರಾರ್ಥನೆಯನ್ನು ಪಠಿಸುವುದು. 'ಸುಬ್ಹಾನಕಲ್ಲಾಹುಮ್ಮ ವಿ ಬಿಹಮ್ದಿಕ ಅಶ್ಹದು ಅಲ್ಲಾ ಇಲಾಹ ಇಲ್ಲಾ ಅಂತ ಅಸ್ತಘ್ಫಿರುಕ ವಿ ಅತೂಬು ಇಲೈಕ್" ಓ ಅಲ್ಲಾಹನೇ, ನೀನು ಪರಮಪಾವನನು. ನಿನಗೆ ಸ್ತುತಿ. ನಿನ್ನ ಹೊರತು ಬೇರೆ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುತ್ತೇನೆ."

ಉತ್ತರ: ಬೇಗನೇ ಮಲಗುವುದು.
2- ವುದೂ ಇರುವ ಸ್ಥಿತಿಯಲ್ಲಿ ಮಲಗುವುದು.
2- ಹೊಟ್ಟೆಯ ಮೇಲೆ ಮಲಗದಿರುವುದು.
4- ಬಲಭಾಗಕ್ಕೆ ಸರಿದು ಬಲಗೈಯನ್ನು ಬಲಗೆನ್ನೆಯ ಕೆಳಗಿರಿಸಿ ಮಲಗುವುದು.
5- ಮಲಗುವ ಮೊದಲು ಹಾಸಿಗೆಯನ್ನು ಝಾಡಿಸುವುದು.
6- ಅಯತುಲ್-ಕುರ್ಸಿ, ಸೂರ ಅಲ್-ಇಖ್ಲಾಸ್ ಮತ್ತು ಅಲ್-ಮಉವ್ವಿಝತೈನ್ (ಮೂರು ಬಾರಿ) ಮುಂತಾದ ಮಲಗುವಾಗ ಹೇಳುವ ದಿಕ್ರ್‌ಗಳನ್ನು ಪಠಿಸುವುದು. ನಂತರ ಹೀಗೆ ಹೇಳುವುದು: ಬಿಸ್ಮಿಕಲ್ಲಾಹುಮ್ಮ ಅಮೂತು ವ ಅಹ್ಯ
"ಓ ಅಲ್ಲಾಹನೇ, ನಿನ್ನ ಹೆಸರಿನಲ್ಲಿ ನಾನು ಸಾಯುತ್ತೇನೆ ಮತ್ತು ಬದುಕುತ್ತೇನೆ."
7- ಫಜ್ರ್ ನಮಾಝಿಗಾಗಿ ಏಳುವುದು.
8- ನಿದ್ದೆಯಿಂದ ಏಳುವಾಗ ಹೀಗೆ ಪಠಿಸುವುದು: ಅಲ್ ಹಯ್ದು ಲಿಲ್ಲಾಹಿಲ್ಲದೀ ಅಹ್ಯಾನ ಬ'ಅದ ಮಾ ಅಮಾತನ ವ ಇಲೈಹಿನ್ನುಶೂರ್"
" ನಮ್ಮ ಮರಣದ ನಂತರ ನಮ್ಮನ್ನು ಬದುಕಿಸಿದ ಅಲ್ಲಾಹನಿಗೆ ಸರ್ವಸ್ತುತಿ ಮತ್ತು ಪುನರುತ್ಥಾನವು ಅವನ ಕಡೆಗೇ ಆಗಿದೆ."

ಉತ್ತರ:
1- ಅಲ್ಲಾಹನನ್ನು ಅನುಸರಿಸಲು ಶಕ್ತಿಯನ್ನು ಪಡೆಯುವುದಕ್ಕಾಗಿ ತಿನ್ನುತ್ತೇನೆ ಮತ್ತು ಕುಡಿಯುತ್ತೇನೆ ಎಂದು ನಿಯ್ಯತ್ ಮಾಡುವುದು.
2- ಆಹಾರ ಸೇವನೆಯ ಮೊದಲು ಕೈಗಳನ್ನು ತೊಳೆಯುವುದು.
3- ಬಿಸ್ಮಿಲಾ ಎಂದು ಹೇಳುವುದು, ಬಲಗೈಯಿಂದ ಆಹಾರ ಸೇವಿಸುವುದು ಮತ್ತು ಹತ್ತಿರದಲ್ಲಿರುವಲ್ಲಿಂದಲೇ ಸೇವಿಸುವುದು. ತಟ್ಟೆಯ ಮಧ್ಯದಿಂದ ಅಥವಾ ಇತರರ ಮುಂಭಾಗದಲ್ಲಿರುವುದರಿಂದ ಸೇವಿಸದಿರುವುದು.
4- ಬಿಸ್ಮಿಲ್ಲಾ ಹೇಳಲು ಮರೆತರೆ, ಬಿಸ್ಮಿಲ್ಲಾಹಿ ಅವ್ವಲಿಹಿ ವ ಆಖಿರಿಹಿ" "ಇದರ ಪ್ರಾರಂಭ ಮತ್ತು ಅಂತ್ಯ ಅಲ್ಲಾಹನ ಹೆಸರಿನಲ್ಲಿ” ಎಂದು ಹೇಳುವುದು.
5- ಇರುವ ಆಹಾರದಲ್ಲಿ ಸಂತೃಪ್ತನಾಗುವುದು. ಆಹಾರವನ್ನು ದೂಷಿಸದಿರುವುದು. ಇಷ್ಟವಾದರೆ ತಿನ್ನುವುದು, ಇಷ್ಟವಿಲ್ಲದಿದ್ದರೆ ಬಿಟ್ಟುಬಿಡುವುದು.
6- ಕೆಲವು ತುತ್ತುಗಳನ್ನು ಸೇವಿಸುವುದು, ಅತಿಯಾಗಿ ಸೇವಿಸದಿರುವುದು.
7- ಆಹಾರ ಅಥವಾ ಪಾನೀಯಕ್ಕೆ ಊದದಿರುವುದು. ಅದನ್ನು ತಣ್ಣಗಾಗಲು ಹಾಗೆಯೇ ಬಿಟ್ಟುಬಿಡುವುದು.
8- ಕುಟುಂಬಿಕರು ಅಥವಾ ಅತಿಥಿಗಳೊಂದಿಗೆ ಆಹಾರ ಸೇವಿಸುವುದು.
9- ಹಿರಿಯರಿಗಿಂತ ಮೊದಲು ಆಹಾರ ಸೇವಿಸದಿರುವುದು.
10- ಪಾನೀಯ ಸೇವಿಸುವಾಗ ಬಿಸ್ಮಿಲ್ಲಾ ಹೇಳುವುದು ಮತ್ತು ಕುಳಿತುಕೊಂಡು ಮೂರು ಗುಟುಕುಗಳಲ್ಲಿ ಕುಡಿಯುವುದು.
11- ಆಹಾರ ಸೇವಿಸಿದ ಬಳಿಕ ಅಲ್ಲಾಹುವಿಗೆ ಧನ್ಯವಾದ ಹೇಳುವುದು.

ಉತ್ತರ: 1- ಬಲಭಾಗದಿಂದ ಉಡುಪು ಧರಿಸುವುದು ಮತ್ತು ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಹೇಳುವುದು.
2- ಉಡುಪನ್ನು ಹರಡುಗಂಟುಗಳಿಗಿಂತ ಕೆಳಗಿಳಿಸದಿರುವುದು.
3- ಹುಡುಗರು ಹುಡುಗಿಯರ ಉಡುಪುಗಳನ್ನು ಧರಿಸದಿರುವುದು ಮತ್ತು ಹುಡುಗಿಯರು ಹುಡುಗರ ಉಡುಪುಗಳನ್ನು ಧರಿಸದಿರುವುದು.
4- ಸತ್ಯನಿಷೇಧಿಗಳು ಅಥವಾ ದುಷ್ಟರು ಧರಿಸುವ ಉಡುಪುಗಳನ್ನು ಧರಿಸದಿರುವುದು.
5- ಉಡುಪು ಕಳಚುವಾಗ ಬಿಸ್ಮಿಲ್ಲಾ ಹೇಳುವುದು.
6- ಪಾದರಕ್ಷೆ ಧರಿಸುವಾಗ ಮೊದಲು ಬಲಗಾಲಿಗೆ ಧರಿಸುವುದು ಮತ್ತು ಕಳಚುವಾಗ ಮೊದಲು ಎಡಗಾಲಿನಿಂದ ಕಳಚುವುದು.

ಉತ್ತರ: 1- ಬಿಸ್ಮಿಲ್ಲಾ, ಅಲ್-ಹಮ್ದುಲಿಲ್ಲಾಹ್ ಎಂದು ಹೇಳುವುದು. {ನಮಗೋಸ್ಕರ ಇದನ್ನು ವಿಧೇಯಗೊಳಿಸಿಕೊಟ್ಟವನು ಪರಮಪಾವನನು. ಇದನ್ನು ಪಳಗಿಸಲು ನಮಗೆ ಸಾಧ್ಯವಿರಲಿಲ್ಲ. ಖಂಡಿತವಾಗಿಯೂ ನಾವು ನಮ್ಮ ಪ್ರಭುವಿನೆಡೆಗೆ ಮರಳಿಹೋಗುವವರೇ ಆಗಿರುವೆವು.} [ಸೂರ ಝುಖ್ರುಫ್: 13-14]
2- ಮುಸ್ಲಿಂ ವ್ಯಕ್ತಿಯ ಮೂಲಕ ಹಾದುಹೋಗವಾಗ ಅವನಿಗೆ ಸಲಾಂ ಹೇಳುವುದು.

ಉತ್ತರ: 1- ಹದವಾಗಿ ಮತ್ತು ವಿನಯವಾಗಿ ನಡೆಯುವುದು. ರಸ್ತೆಯ ಬಲಭಾಗದಲ್ಲಿ ನಡೆಯುವುದು.
2- ರಸ್ತೆಯಲ್ಲಿ ಭೇಟಿಯಾಗುವವರಿಗೆ ಸಲಾಂ ಹೇಳುವುದು.
3- ದೃಷ್ಟಿಯನ್ನು ತಗ್ಗಿಸುವುದು ಮತ್ತು ಯಾರಿಗೂ ಹಾನಿ ಮಾಡದಿರುವುದು.
4- ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು.
5- ರಸ್ತೆಯಿಂದ ಅಡೆತಡೆಗಳನ್ನು ನಿವಾರಿಸುವುದು.

ಉತ್ತರ: 1- ಎಡಗಾಲಿಟ್ಟು ಮನೆಯಿಂದ ಹೊರಬರುವುದು. ಹೊರಬರುವಾಗ ಹೀಗೆ ಹೇಳುವುದು: ಬಿಸ್ಮಿಲ್ಲಾಹಿ,ತವಕ್ಕಲ್ತು ಅಲಲ್ಲಾಹಿ ಲಾ ಹವ್ಲಾ ವಲಾ ಖುವ್ವತ ಇಲ್ಲಾ ಬಿಲ್ಲಾ ಅಲ್ಲಾಹುಮ್ಮ ಇನ್ನಿ ಅವೂದುಬಿಕ ಅನ್ ಅದಲ್ಲ ಅವ್ ಉದಲ್ಲ,ಅವ್ ಅದಲ್ಲ ಅವ್ ಉದಲ್ಲ ಅವ್ ಅದ್ಲಿಮ ಅವ್ ಉದ್ಲಮ ಅವ್ ಅಜ್ಹಲ ಅವ್ ಯುಜ್ಹಲ ಅಲಯ್.“ಅಲ್ಲಾಹನ ಹೆಸರಿನಿಂದ, ನಾನು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇನೆ, ಅಲ್ಲಾಹನಲ್ಲಿಯೇ ಹೊರತು ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ. ಓ ಅಲ್ಲಾಹನೇ, ನಾನು ದಾರಿ ತಪ್ಪದಿರಲು ಅಥವಾ ಇತರರು ನನ್ನನ್ನು ದಾರಿ ತಪ್ಪಿಸದಿರಲು, ಅಥವಾ ನಾನು ಜಾರದಿರಲು ಅಥವಾ ಇತರರು ನನ್ನನ್ನು ಜಾರುವಂತೆ ಮಾಡದಿರಲು, ಅಥವಾ ನಾನು ಅನ್ಯಾಯವೆಸಗಿದಂತೆ ಅಥವಾ ನನಗೆ ಅನ್ಯಾಯವಾಗದಂತೆ, ನಾನು ತಿಳಿಗೇಡಿಯಂತೆ ವರ್ತಿಸದಿರಲು ಅಥವಾ ಇತರರು ನನ್ನನ್ನು ತಿಳಿಗೇಡಿಯಂತೆ ಮಾಡದಿರಲು ನಾನು ನಿನ್ನಲ್ಲಿ ಅಭಯಕೋರುತ್ತೇನೆ." 2- ಬಲಗಾಲಿಟ್ಟು ಮನೆಯನ್ನು ಪ್ರವೇಶಿಸುವುದು. ಪ್ರವೇಶಿಸುವಾಗ ಹೀಗೆ ಹೇಳುವುದು: ಬಿಸ್ಮಿಲ್ಲಾಹಿ ವಲಜ್‌ನಾ ವಬಿಸ್ಮಿಲ್ಲಾಹಿ ಖರಜ್‌ನಾ ವಅಲಲ್ಲಾಹಿ ರಬ್ಬಿನಾ ತವಕ್ಕಲ್‌ನಾ. “ಅಲ್ಲಾಹನ ನಾಮದೊಂದಿಗೆ ನಾವು (ಈ ಮನೆಯನ್ನು) ಪ್ರವೇಶಿಸಿದ್ದೇವೆ ಮತ್ತು ಅಲ್ಲಾಹನ ನಾಮದೊಂದಿಗೆ ನಾವು (ಇದರಿಂದ) ಹೊರಟಿದ್ದೇವೆ. ಮತ್ತು ನಮ್ಮ ರಬ್ಬ್ ಆದ ಅಲ್ಲಾಹನ ಮೇಲೆ ನಾವು ಭರವಸೆಯನ್ನಿಟ್ಟಿದ್ದೇವೆ.”
3- ಮೊದಲು ಮಿಸ್ವಾಕಿನಿಂದ ಹಲ್ಲುಜ್ಜುವುದು, ನಂತರ ಮನೆಯವರಿಗೆ ಸಲಾಮ್ ಹೇಳುವುದು.

ಉತ್ತರ: 1- ಎಡಗಾಲಿನಿಂದ ಶೌಚಾಲಯವನ್ನು ಪ್ರವೇಶಿಸುವುದು.
3- ಪ್ರವೇಶಿಸುವ ಮೊದಲು ಹೀಗೆ ಹೇಳುವುದು: "ಅಲ್ಲಾಹನ ನಾಮದಿಂದ , ಓ ಅಲ್ಲಾಹನೇ, ನಾನು ಗಂಡು ಮತ್ತು ಹೆಣ್ಣು ಶೈತಾನರಿಂದ ನಿನ್ನಲ್ಲಿ ಅಭಯ ಯಾಚಿಸುತ್ತೇನೆ."
3- ಅಲ್ಲಾಹನ ಹೆಸರನ್ನು ಹೊಂದಿರುವ ಯಾವುದನ್ನೂ ಶೌಚಾಲಯದ ಒಳಗೆ ಒಯ್ಯದಿರುವುದು.
4- ವಿಸರ್ಜನೆಯ ಸಮಯದಲ್ಲಿ ಗುಹ್ಯಭಾಗವನ್ನು ಮರೆಮಾಚುವುದು.
5- ವಿಸರ್ಜನೆ ಮಾಡುವ ಸ್ಥಳದಲ್ಲಿ ಮಾತನಾಡದಿರುವುದು.
6- ಮಲ ಮೂತ್ರ ವಿಸರ್ಜನೆ ಮಾಡುವಾಗ ಕಿಬ್ಲಾದೆಡೆಗೆ ಮುಖ ಮಾಡದಿರುವುದು ಅಥವಾ ಬೆನ್ನು ತೋರಿಸದಿರುವುದು.
7- ಕಲ್ಮಶವನ್ನು ನಿವಾರಿಸಲು ಎಡಗೈಯನ್ನು ಬಳಸುವುದು. ಬಲಗೈಯನ್ನು ಬಳಸದಿರುವುದು.
8- ಜನರು ನಡೆದಾಡುವ ರಸ್ತೆಯಲ್ಲಿ ಅಥವಾ ಜನರು ಉಪಯೋಗಿಸುವ ನೆರಳಿನಲ್ಲಿ ವಿಸರ್ಜನೆ ಮಾಡದಿರುವುದು.
9- ವಿಸರ್ಜನೆಯ ನಂತರ ಕೈಗಳನ್ನು ತೊಳೆಯುವುದು.
10- ಎಡಗಾಲಿಟ್ಟು ಶೌಚಾಲಯದಿಂದ ಹೊರಬರುವುದು ಮತ್ತು ಗುಫ್ರಾನಕ್ ಎಂದು ಹೇಳುವುದು.

ಉತ್ತರ: 1- ಬಲಗಾಲಿಟ್ಟು ಮಸೀದಿಯನ್ನು ಪ್ರವೇಶಿಸುವುದು. ಪ್ರವೇಶಿಸುವಾಗ ಹೀಗೆ ಹೇಳುವುದು: ಬಿಸ್ಮಿಲ್ಲಾಹಿ ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ್."ಅಲ್ಲಾಹನ ಹೆಸರಿನಿಂದ, ಓ ಅಲ್ಲಾಹನೇ, ನಿನ್ನ ಕರುಣೆಯ ಬಾಗಿಲುಗಳನ್ನು ನನಗೆ ತೆರೆದುಕೊಡು."
2- ಕುಳಿತುಕೊಳ್ಳುವುದಕ್ಕೆ ಮುಂಚೆ ಎರಡು ರಕ್ಅತ್‌ ನಮಾಝ್ ನಿರ್ವಹಿಸುವುದು.
3- ನಮಾಝ್ ಮಾಡುವವರ ಮುಂದೆ ಹಾದುಹೋಗದಿರುವುದು, ಮಸೀದಿಯಲ್ಲಿ ಕಳೆದುಹೋದ ವಸ್ತುಗಳನ್ನು ಹುಡುಕದಿರುವುದು ಮತ್ತು ಮಸೀದಿಯಲ್ಲಿ ಮಾರಾಟ ಮತ್ತು ಖರೀದಿ ಮಾಡದಿರುವುದು.
4- ಎಡಗಾಲಿಟ್ಟು ಮಸೀದಿಯಿಂದ ಹೊರಬರುವುದು ಮತ್ತು ಹೀಗೆ ಹೇಳುವುದು: “ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್‌ಲಿಕ” (ಓ ಅಲ್ಲಾಹ್! ನಾನು ನಿನ್ನ ಔದಾರ್ಯದೊಂದಿಗೆ ನಿನ್ನಲ್ಲಿ ಬೇಡುತ್ತಿದ್ದೇನೆ.)

ಉತ್ತರ: 1 - ಮುಸ್ಲಿಮನನ್ನು ಭೇಟಿಯಾದಾಗ ಮೊತ್ತಮೊದಲು ಸಲಾಮ್ ಹೇಳುವುದು: "ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು". ಸಲಾಂ ಅಲ್ಲದ ಬೇರೆ ಯಾವುದನ್ನು ಮೊದಲು ಹೇಳದಿರುವುದು. ಸನ್ನೆಯ ಮೂಲಕ ಸಲಾಮ್ ಹೇಳಿದರೆ ಸಾಕಾಗುವುದಿಲ್ಲ.
2- ಸಲಾಮ್ ಹೇಳುವ ವ್ಯಕ್ತಿಯ ಮುಖ ನೋಡಿ ಮುಗುಳು ನಗೆ ಬೀರುವುದು.
3- ಬಲಗೈಯಿಂದ ಹಸ್ತಲಾಘವ ಮಾಡುವುದು.
4- ಯಾರಾದರೂ ಸಲಾಮ್ ಹೇಳಿದರೆ, ಅದಕ್ಕಿಂತಲೂ ಉತ್ತಮವಾದುದರ ಮೂಲಕ ಉತ್ತರ ನೀಡುವುದು ಅಥವಾ ಕನಿಷ್ಠ ಅಷ್ಟನ್ನೇ ಹಿಂದಿರುಗಿಸುವುದು.
5- ಸತ್ಯನಿಷೇಧಿಗೆ ಮೊದಲು ಸಲಾಮ್ ಹೇಳದಿರುವುದು. ಒಂದು ವೇಳೆ ಅವನೇ ಸಲಾಮ್ ಹೇಳಿದರೆ ಅದೇ ರೀತಿ ಉತ್ತರಿಸುವುದು.
6- ಕಿರಿಯರು ಹಿರಿಯರಿಗೆ, ಸವಾರಿ ಮಾಡುವವರು ಪಾದಚಾರಿಗಳಿಗೆ, ಚಲಿಸುವವರು ಕುಳಿತವರಿಗೆ ಮತ್ತು ಚಿಕ್ಕ ಗುಂಪು ದೊಡ್ಡ ಗುಂಪಿಗೆ ಸಲಾಮ್ ಹೇಳುವುದು.

ಉತ್ತರ: 1- ಒಂದು ಸ್ಥಳಕ್ಕೆ ಪ್ರವೇಶಿಸುವ ಮೊದಲು ಅನುಮತಿ ಕೇಳುವುದು.
2- ಮೂರು ಬಾರಿಗಿಂತ ಹೆಚ್ಚು ಅನುಮತಿ ಕೇಳದಿರುವುದು. ನಂತರ ಹೊರಟುಹೋಗುವುದು.
3- ಬಾಗಿಲನ್ನು ನಿಧಾನವಾಗಿ ತಟ್ಟುವುದು, ಬಾಗಿಲಿನ ಎದುರುಭಾಗದಲ್ಲಿ ನಿಲ್ಲದೆ, ಬಲ ಅಥವಾ ಎಡಬದಿಯಲ್ಲಿ ನಿಲ್ಲುವುದು.
4- ತಂದೆ-ತಾಯಿ ಅಥವಾ ಇತರರ ಕೋಣೆಯನ್ನು ಅವರ ಅನುಮತಿ ಕೇಳದೆ ಪ್ರವೇಶಿಸದಿರುವುದು. ವಿಶೇಷವಾಗಿ ಫಜ್ರ್ ನಮಾಝಿಗೆ ಮುಂಚೆ, ಮಧ್ಯಾಹ್ನದ ನಿದ್ದೆಯ ಮತ್ತು ಇಶಾ ನಮಾಝಿನ ಬಳಿಕ.
5- ಆಸ್ಪತ್ರೆ, ಅಂಗಡಿ ಮುಂತಾದ ಜನರು ವಾಸಿಸದ ಸ್ಥಳಗಳನ್ನು ಅನುಮತಿಯಿಲ್ಲದೆ ಪ್ರವೇಶಿಸಬಹುದು.

ಉತ್ತರ: 1. ಪ್ರಾಣಿಗಳಿಗೆ ಆಹಾರ ಮತ್ತು ಪಾನೀಯವನ್ನು ನೀಡುವುದು.
2. ಪ್ರಾಣಿಗಳಿಗೆ ದಯೆ ಮತ್ತು ಸೌಮ್ಯತೆ ತೋರುವುದು; ಮತ್ತು ಅವುಗಳಿಗೆ ಹೊರಲಾಗದ ಹೊರೆಯನ್ನು ಹೊರಿಸದಿರುವುದು.
3. ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ಹಿಂಸಿಸುವುದು ಅಥವಾ ತೊಂದರೆ ನೀಡುವುದರಿಂದ ದೂರವಿರುವುದು.

ಉತ್ತರ: 1. ಅಲ್ಲಾಹನನ್ನು ಅನುಸರಿಸಲು ಮತ್ತು ಅವನ ಸಂಪ್ರೀತಿಗೆ ಪಾತ್ರನಾಗಲು ಶಕ್ತಿಯನ್ನು ಪಡೆಯುವುದಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುತ್ತೇನೆಂದು ನಿಯ್ಯತ್ ಮಾಡುವುದು.
2. ನಮಾಝಿನ ಸಮಯದಲ್ಲಿ ಆಡದಿರುವುದು.
3. ಹುಡುಗರು ಮತ್ತು ಹುಡುಗಿಯರು ಜೊತೆಗೂಡಿ ಆಡದಿರುವುದು.
4. ‘ಔರತ್’ (ದೇಹದ ನಗ್ನ ಭಾಗಗಳನ್ನು) ಮುಚ್ಚುವ ಕ್ರೀಡಾ ಉಡುಪುಗಳನ್ನು ಮಾತ್ರ ಧರಿಸುವುದು.
5. ಮುಖಕ್ಕೆ ಹೊಡೆಯುವುದು ಅಥವಾ ‘ಔರತ್’ (ದೇಹದ ನಗ್ನ ಭಾಗಗಳನ್ನು) ಪ್ರದರ್ಶಿಸುವಂತಹ ನಿಷಿದ್ಧ ಕ್ರೀಡೆಗಳನ್ನು ಆಡದಿರುವುದು.

ಉತ್ತರ: 1. ಹಾಸ್ಯ ಮಾಡುವಾಗ ಸತ್ಯ ಹೇಳುವುದು ಮತ್ತು ಸುಳ್ಳು ಹೇಳದಿರುವುದು.
2. ಹಾಸ್ಯವು ಅಪಹಾಸ್ಯ, ಮಾನಹಾನಿ ಮತ್ತು ಬೆದರಿಕೆಗಳಿಂದ ಮುಕ್ತವಾಗಿರುವುದು.
3. ಹೆಚ್ಚು ಹೆಚ್ಚು ಹಾಸ್ಯ ಮಾಡದಿರುವುದು.

ಉತ್ತರ: 1. ಸೀನುವಾಗ ಕೈ, ಬಟ್ಟೆ ಅಥವಾ ಕರವಸ್ತ್ರವನ್ನು ಬಳಸುವುದು.
2. ಸೀನಿದ ನಂತರ ಅಲ್ಲಾಹನನ್ನು ಸ್ತುತಿಸುವುದು: "ಅಲ್-ಹಮ್ದುಲಿಲ್ಲಾಹ್" (ಅಲ್ಲಾಹನಿಗೆ ಸ್ತುತಿ) ಎಂದು ಹೇಳುವುದು.
3. ಸೀನಿದವನ ಸಹೋದರ ಅಥವಾ ಸಹಚರ ಹೀಗೆ ಹೇಳಬೇಕು: "ಯರ್ಹಮುಕಲ್ಲಾಹ್" (ಅಲ್ಲಾಹನು ನಿನ್ನ ಮೇಲೆ ಕರುಣೆ ತೋರಲಿ).
ಸೀನಿದವನು ಅದಕ್ಕೆ ಹೀಗೆ ಉತ್ತರಿಸಬೇಕು:
"ಯಹ್ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್" (ಅಲ್ಲಾಹನು ನಿಮಗೆ ಮಾರ್ಗದರ್ಶನ ಮಾಡಲಿ ಮತ್ತು ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸಲಿ)

ಉತ್ತರ: 1. ಆಕಳಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುವುದು.
2. ಆಕಳಿಸುವಾಗ "ಆಹ್" "ಆಹ್" ಎಂದು ಸದ್ದು ಮಾಡದಿರುವುದು.
3. ಬಾಯಿಯ ಮೇಲೆ ಕೈ ಇಡುವುದು.

ಉತ್ತರ: 1. ವುದೂ ನಿರ್ವಹಿಸಿದ ನಂತರ ಶುದ್ಧಾವಸ್ಥೆಯಲ್ಲಿ ಪಠಿಸುವುದು.
2. ಮರ್ಯಾದೆಯೊಂದಿಗೆ ಗಂಭೀರವಾಗಿ ಕುಳಿತುಕೊಳ್ಳುವುದು.
3. ಪಠಣದ ಪ್ರಾರಂಭದಲ್ಲಿ ಶೈತಾನನಿಂದ ಅಲ್ಲಾಹನಲ್ಲಿ ಅಭಯಕೋರುವುದು.
4. ಅರ್ಥವರಿತು ಪಠಣ ಮಾಡುವುದು.