ಪ್ರವಾದಿಯವರ ಜೀವನಚರಿತ್ರೆ ವಿಭಾಗ

ಉತ್ತರ: ಅವರು ಮುಹಮ್ಮದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಮ್. ಹಾಶಿಂ ಖುರೈಶ್ ಗೋತ್ರದಿಂದ, ಖುರೈಶ್ ಅರಬ್ಬರಿಂದ, ಅರಬ್ಬರು ಇಸ್ಮಾಯೀಲ್‌ರ ವಂಶಜರು, ಇಸ್ಮಾಯೀಲ್ ಇಬ್ರಾಹಿಮರ ಪುತ್ರರು. ಅವರ ಮತ್ತು ನಮ್ಮ ಪ್ರವಾದಿಯ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.

ಉತ್ತರ: ಪ್ರವಾದಿಯವರು ﷺ ತಾಯಿಯ ಗರ್ಭದಲ್ಲಿರುವಾಗ ಅವರ ತಂದೆ ಮದೀನಾದಲ್ಲಿ ನಿಧನರಾದರು.

ಉತ್ತರ: ಆನೆಯ ವರ್ಷದಲ್ಲಿ, ರಬೀಉಲ್-ಅವ್ವಲ್ ತಿಂಗಳಲ್ಲಿ ಸೋಮವಾರ ಜನಿಸಿದರು.

ಉತ್ತರ: ಅವರ ತಂದೆಯ ದಾಸಿ, ಉಮ್ಮು ಐಮನ್
- ಅವರ ಚಿಕ್ಕಪ್ಪ ಅಬೂ ಲಹಬ್ ರ ದಾಸಿ ಸುವೈಬಃ.
- ಹಲೀಮಾ ಸ'ಅದಿಯಾ.

ಉತ್ತರ: ಅವರು ಆರು ವರ್ಷದವರಾಗಿದ್ದಾಗ ಅವರ ತಾಯಿ ನಿಧನರಾದರು. ನಂತರ ಅವರ ಅಜ್ಜ ಅಬ್ದುಲ್ ಮುತ್ತಲಿಬ್ ಅವರನ್ನು ಪೋಷಿಸಿದರು.

ಉತ್ತರ: ಅವರು ಎಂಟು ವರ್ಷದವರಾಗಿದ್ದಾಗ ಅವರ ಅಜ್ಜ ಅಬ್ದುಲ್ ಮುತ್ತಲಿಬ್ ನಿಧನರಾದರು. ನಂತರ ಅವರ ಚಿಕ್ಕಪ್ಪ ಅಬೂತಾಲಿಬ್ ಅವರನ್ನು ಪೋಷಿಸಿದರು.

ಉತ್ತರ: ಅವರು ಹನ್ನೆರಡು ವರ್ಷ ವಯಸ್ಸಿನವರಾಗಿದ್ದಾಗ ತಮ್ಮ ಚಿಕ್ಕಪ್ಪನೊಂದಿಗೆ ಸಿರಿಯಾಗೆ ಪ್ರಯಾಣ ಮಾಡಿದರು.

ಉತ್ತರ: ಅವರ ಎರಡನೇ ಪ್ರಯಾಣವು ಖದೀಜಾರ رَضِيَ اللَّهُ عَنْهَا ಹಣದಿಂದ ವ್ಯಾಪಾರ ಮಾಡುವ ಸಂದರ್ಭದಲ್ಲಾಯಿತು. ಪ್ರಯಾಣದಿಂದ ಹಿಂದಿರುಗಿದ ನಂತರ ಅವರನ್ನು ಮದುವೆಯಾದರು. ಆಗ ಅವರಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು.

ಉತ್ತರ: ಅವರಿಗೆ ಮೂವತ್ತೈದು ವರ್ಷ ಪ್ರಾಯವಾಗಿದ್ದಾಗ ಖುರೈಶ್ ಕಾಬಾವನ್ನು ಪುನರ್ನಿರ್ಮಿಸಿದರು.
ಹಜರ್ ಅಸ್ವದನ್ನು ಯಾರು ಇಡಬೇಕೆಂದು ಅವರಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ಅವರದನ್ನು ಒಂದು ಬಟ್ಟೆಯಲ್ಲಿಟ್ಟು, ನಾಲ್ಕು ಬುಡಕಟ್ಟುಗಳ ಪ್ರತಿಯೊಬ್ಬ ನಾಯಕನನ್ನು ಆ ಬಟ್ಟೆಯ ತುದಿ ಹಿಡಿದುಕೊಳ್ಳುವಂತೆ ಆದೇಶಿಸಿದರು ಅವರು ಅದನ್ನು ಅದರ ಸ್ಥಳದವರೆಗೆ ಎತ್ತಿದಾಗ, ಪ್ರವಾದಿರವರು ಅದನ್ನು ತನ್ನ ಕೈಯಿಂದ ಇರಿಸಿದನು.. ಈ ರೀತಿ ಸಮಸ್ಯೆಯನ್ನು ಪರಿಹರಿಸಿದರು.

ಉತ್ತರ: ಆಗ ಅವರಿಗೆ ನಲವತ್ತು ವರ್ಷ ಪ್ರಾಯವಾಗಿತ್ತು. ಅವರಿಗೆ ಸಂಪೂರ್ಣ ಮನುಕುಲಕ್ಕೆ ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿ ನಿಯುಕ್ತಿಗೊಳಿಸಲಾಯಿತು.

ಉತ್ತರ: ಸತ್ಯ ಕನಸುಗಳು. ಅವರು ಯಾವುದೇ ಕನಸನ್ನು ಕಂಡರೂ ಅದು ಹಗಲ ಬೆಳಕಿನಂತೆ ನಿಜವಾಗುತ್ತಿತ್ತು.

ಉತ್ತರ: ಅವರು ಹಿರಾ ಗುಹೆಯಲ್ಲಿ ಅಲ್ಲಾಹನನ್ನು ಆರಾಧಿಸುತ್ತಿದ್ದರು ಮತ್ತು ಅದಕ್ಕಾಗಿ ಸ್ವತಃ ಸನ್ನದ್ಧರಾಗುತ್ತಿದ್ದರು.
ಅವರು ಗುಹೆಯಲ್ಲಿ ಆರಾಧನೆಯಲ್ಲಿರುವಾಗ ಅವರ ಮೇಲೆ ದಿವ್ಯವಾಣಿ ಅವತೀರ್ಣವಾಯಿತು.

ಉತ್ತರ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಸೃಷ್ಟಿಸಿರುವ ತಮ್ಮ ಪ್ರಭುವಿನ ನಾಮದಿಂದ ಓದಿರಿ. ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿರುವನು. ಓದಿರಿ ತಮ್ಮ ಪ್ರಭು ಅತ್ಯಧಿಕ ಔದಾರ್ಯವುಳ್ಳವನಾಗಿರುವನು. ಅವನು ಲೇಖನಿಯ ಮೂಲಕ ಕಲಿಸಿಕೊಟ್ಟನು. ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಅವನು ಕಲಿಸಿಕೊಟ್ಟಿರುವನು. [ಸೂರ ಅಲ್-ಅಲಕ್:1-5]

ಉತ್ತರ - ಪುರುಷರಲ್ಲಿ ಅಬೂಬಕರ್ ಸಿದ್ದೀಕ್, ಮಹಿಳೆಯರಲ್ಲಿ ಖದೀಜಾ ಬಿಂತು ಖುವೈಲಿದ್, ಮಕ್ಕಳಲ್ಲಿ ಅಲಿ ಬಿನ್ ಅಬೂತಾಲಿಬ್, ಸೇವಕರಲ್ಲಿ: ಝೈದ್ ಬಿನ್ ಹಾರಿಸ ಮತ್ತು ಗುಲಾಮರಲ್ಲಿ ಹಬ್ಷಾದ (ಇಥಿಯೋಪಿಯಾ) ಬಿಲಾಲ್ رَضِيَ اللَّهُ عَنْهُم .

ಉತ್ತರ: ಸುಮಾರು ಮೂರು ವರ್ಷಗಳ ಕಾಲ ರಹಸ್ಯವಾಗಿ ಮತಪ್ರಚಾರ ಮಾಡಿದರು. ನಂತರ ಬಹಿರಂಗವಾಗಿ ಮತಪ್ರಚಾರ ಮಾಡಲು ಪ್ರವಾದಿ ﷺ ಗೆ ಆದೇಶ ನೀಡಲಾಯಿತು.

ಉತ್ತರ - ಮುಶ್ರಿಕರು (ಬಹುದೇವತಾವಾದಿಗಳು) ಪ್ರವಾದಿ ಮತ್ತು ಮುಸ್ಲಿಮರನ್ನು ತೀವ್ರವಾಗಿ ಹಿಂಸಿಸಿದರು. ನಂತರ ವಿಶ್ವಾಸಿಗಳಿಗೆ ಹಬ್ಷಾದ (ಇಥಿಯೋಪಿಯಾ) ನಜಾಶಿ ಅರಸನೆಡೆಗೆ ವಲಸೆ ಹೋಗಲು ಆದೇಶ ನೀಡಲಾಯಿತು.
ಮುಶ್ರಿಕರು (ಬಹುದೇವತಾವಾದಿಗಳು) ಪ್ರವಾದಿ ﷺ ರನ್ನು ಹಿಂಸಿಸಲು ಮತ್ತು ಕೊಲ್ಲಲು ಸರ್ವಾನುಮತದಿಂದ ತೀರ್ಮಾನಿಸಿದಾಗ ಅಲ್ಲಾಹು ಅವರನ್ನು ರಕ್ಷಿಸಿದನು. ಮತ್ತು ಅವರ ಚಿಕ್ಕಪ್ಪ ಅಬು ತಾಲಿಬ್ ಅವರನ್ನು ರಕ್ಷಿಸಬೇಕೆಂದು ಅವರ ಆಸರೆಯಲ್ಲಿ ಇರಿಸಿದನು.

ಉತ್ತರ: ಪ್ರವಾದಿಯ ಚಿಕ್ಕಪ್ಪ ಅಬೂತಾಲಿಬ್ ಮತ್ತು ಅವರ ಪತ್ನಿ ಖದೀಜಾ رَضِيَ اللَّهُ عَنْهَا ನಿಧನರಾದರು.

ಉತ್ತರ: ಅವರು ಐವತ್ತು ವರ್ಷ ವಯಸ್ಸಿನವರಾಗಿದ್ದಾಗ. ಆಗ ಅವರ ಮೇಲೆ ದೈನಂದಿನ ಐದು ಹೊತ್ತಿನ ನಮಾಝನ್ನು ಕಡ್ಡಾಯಗೊಳಿಸಲಾಯಿತು.
ಇಸ್ರಾ :
ಮಸ್ಜಿದುಲ್ ಹರಾಮಿನಿಂದ -ಅಕ್ಸಾ ಮಸೀದಿವರೆಗಿನ ರಾತ್ರಿಯ ಪ್ರಯಾಣ.
ಮಿ'ಅರಾಜ್:
ಇದು ಅಕ್ಸಾ ಮಸೀದಿಯಿಂದ ಆಕಾಶಕ್ಕೆ ಸಿದ್ರತುಲ್-ಮುಂತಾಹಾದವರೆಗಿನ ಆಕಾಶಯಾನ.

ಉತ್ತರ: ಅವರು ತ್ವಾಯಿಫ್‌ನ ಜನರನ್ನು ಇಸ್ಲಾಮಿಗೆ ಕರೆದರು ಮತ್ತು ಹಜ್ಜಿನ ಸಮಯದಲ್ಲಿ ಹಾಗೂ ಜನ ಸೇರುವೆಡೆ ಮತಪ್ರಚಾರ ಮಾಡಿದರು. ಕೊನೆಗೆ ಮದೀನಾದ ಅನ್ಸಾರ್‌ ಜನರ ಪೈಕಿ ಕೆಲವರು ಬಂದು ಅವರಲ್ಲಿ ವಿಶ್ವಾಸವಿಟ್ಟರು. ಅವರು ಪ್ರವಾದಿಗೆ ﷺ ಬೆಂಬಲ ನೀಡುವ ಪ್ರತಿಜ್ಞೆ ಮಾಡಿದರು.

ಉತ್ತರ: ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋದರು.

ಉತ್ತರ: ಝಕಾತ್, ಉಪವಾಸ, ಹಜ್ಜ್, ಜಿಹಾದ್, ಅಝಾನ್ (ಪ್ರಾರ್ಥನೆಗೆ ಕರೆ) ಮತ್ತು ಇಸ್ಲಾಮಿನ ಇತರೆ ಕಾನೂನುಗಳು ಕಡ್ಡಾಯಗೊಳಿಸಲಾದವು.

ಉತ್ತರ: ಬದ್ರ್ ಮಹಾಯುದ್ಧ.
ಉಹುದ್ ಯುದ್ಧ.
ಅಹ್‌ಝಾಬ್ ಯುದ್ಧ.
ಮಕ್ಕಾ ವಿಜಯದ ಯುದ್ಧ.

ಉತ್ತರ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನಿಮ್ಮನ್ನು ಅಲ್ಲಾಹನೆಡೆಗೆ ಮರಳಿಸಲಾಗುವ ಒಂದು ದಿನವನ್ನು ನೀವು ಭಯಪಡಿರಿ. ತರುವಾಯ ಪ್ರತಿಯೊಬ್ಬನಿಗೂ ಅವನು ಮಾಡಿರುವುದರ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ (ಕಿಂಚಿತ್ತೂ) ಅನ್ಯಾಯವೆಸಗಲಾಗದು.” [ಸೂರ ಅಲ್-ಬಕರ:281].

ಉತ್ತರ: ಅವರು ಹಿಜ್ರ 11ನೇ ವರ್ಷ ರಬೀಉಲ್-ಅವ್ವಲ್ ತಿಂಗಳಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು.

ಉತ್ತರ-1- ಖದೀಜಾ ಬಿಂತು ಖುವೈಲಿದ್ رَضِيَ اللَّهُ عَنْهَا
2- ಸೌದಾ ಬಿಂತು ಝಮ್ಅ رَضِيَ اللَّهُ عَنْهَا
3- ಆಯಿಶ ಬಿಂತು ಅಬೂಬಕರ್ رَضِيَ اللَّهُ عَنْهَا
4- ಹಫ್ಸಾ ಬಿಂತು ಉಮರ್ رَضِيَ اللَّهُ عَنْهَا
5- ಝೈನಬ್ ಬಿಂತು ಖುಝೈಮಾ رَضِيَ اللَّهُ عَنْهَا
6- ಉಮ್ಮು ಸಲಮಾ ಹಿಂದ್ ಬಿಂತು ಅಬೂ ಉಮಯ್ಯ رَضِيَ اللَّهُ عَنْهَا
6- ಉಮ್ಮು ಹಬೀಬ ರಮ್ಲಾ ಬಿಂತು ಅಬೂ ಸುಫ್ಯಾನ್ رَضِيَ اللَّهُ عَنْهَا
8- ಜುವೈರಿಯಾ ಬಿಂತು ಹಾರಿಸ್ رَضِيَ اللَّهُ عَنْهَا
9- ಮೈಮೂನಾ ಬಿಂತು ಹಾರಿಸ್ رَضِيَ اللَّهُ عَنْهَا
10- ಸಫಿಯ್ಯಾ ಬಿಂತು ಹುಯಯ್ رَضِيَ اللَّهُ عَنْهَا
11- ಝೈನಬ್ ಬಿಂತು ಜಹಶ್ رَضِيَ اللَّهُ عَنْهَا

ಉತ್ತರ: ಮೂರು ಗಂಡುಮಕ್ಕಳು:
ಅಲ್-ಖಾಸಿಮ್, ಇದು ಪ್ರವಾದಿಯ ಕುನಿಯ್ಯತ್ ಆಗಿತ್ತು.
ಅಬ್ದುಲ್ಲಾ.
ಇಬ್ರಾಹಿಂ.
ಹೆಣ್ಣು ಮಕ್ಕಳು:

ಫಾತಿಮಾ.
ರುಕಯ್ಯ.
ಉಮ್ಮೆ ಕುಲ್ಸೂಮ್.
ಝೈನಬ್.
ಇಬ್ರಾಹೀಮರ ಹೊರತು ಎಲ್ಲಾ ಮಕ್ಕಳು ಖಾದಿಜಾ رَضِيَ اللَّهُ عَنْهَا ರಿಂದ ಹುಟ್ಟಿದ್ದು. ಫಾತಿಮಾರ ಹೊರತು ಉಳಿದವರೆಲ್ಲರೂ ಪ್ರವಾದಿಯ ಜೀವಂತಕಾಲದಲ್ಲೇ ಮರಣಹೊಂದಿದರು. ಫಾತಿಮಾ ಪ್ರವಾದಿಯವರು ನಿಧನರಾಗಿ ಆರು ತಿಂಗಳ ಬಳಿಕ ನಿಧನರಾದರು.

ಉತ್ತರ: ಪ್ರವಾದಿ ﷺ ರು ಅತೀ ಗಿಡ್ಡ ಅಥವಾ ಅತೀ ಎತ್ತರವೂ ಆಗಿರಲಿಲ್ಲ. ಬದಲಾಗಿ ಅವರು ಪುರುಷರ ಪೈಕಿ ಮಧ್ಯಮದವರಾಗಿದ್ದರು. ಅವರು ಕೆಂಪು ಮಿಶ್ರಿತ ಬಿಳಿ ಬಣ್ಣದವರಾಗಿದ್ದರು. ದಪ್ಪನೆಯ ಗಡ್ಡ, ಅಗಲವಾದ ಕಣ್ಣುಗಳು, ದೊಡ್ಡ ಬಾಯಿ, ಕಪ್ಪು ಕೂದಲು, ಬೃಹದಾಕಾರದ ಭುಜಗಳು, ಉತ್ತಮ ಪರಿಮಳ ಹೊಂದಿದವರಾಗಿದ್ದರು.

ಉತ್ತರ: ಅವರು ತಮ್ಮ ಸಮುದಾಯವನ್ನು ಬೆಳ್ಳಗಿನ ಪ್ರಕಾಶದ ಮೇಲೆ ಬಿಟ್ಟಗಲಿದರು. ಅದರ ರಾತ್ರಿ ಹಗಲಿನಂತಿದೆ. ನಾಶ ಹೊಂದಿದವನಲ್ಲದೆ ಇನ್ನಾರೂ ಅದರಿಂದ ವಿಚಲಿತರಾಗಲಾರರು. ಅವರು ತಮ್ಮ ಸಮುದಾಯವನ್ನು ಎಲ್ಲಾ ಒಳಿತುಗಳೆಡೆಗೆ ಮಾರ್ಗದರ್ಶಿಸಿದರು ಮತ್ತು ಎಲ್ಲಾ ಕೆಡುಕುಗಳಿಂದ ಎಚ್ಚರಿಕೆ ನೀಡಿದರು.